ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ

ರೈಲ್ವೆ ಟಿಕೆಟ್ ಬುಕಿಂಗ್ ಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಮಹತ್ವದ ಬದಲಾವಣೆಯನ್ನು ಮಾಡಿದೆ. ಈಗ ನೀವು ಟಿಕೆಟ್ ಬುಕ್ ಮಾಡುವ ಮೊದಲು  ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸಬೇಕಾಗಿದೆ. ಏನು ಈ ಹೊಸ ನಿಯಮ ತಿಳಿಯಿರಿ.

Written by - Yashaswini V | Last Updated : Jul 28, 2022, 01:22 PM IST
  • ಭಾರತೀಯ ರೈಲ್ವೆಯು ಐಆರ್ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವ ನಿಯಮಗಳನ್ನು ಬದಲಾಯಿಸಿದೆ.

    ಹೊಸ ನಿಯಮದ ಪ್ರಕಾರ, ಟಿಕೆಟ್ ಬುಕಿಂಗ್‌ಗಾಗಿ ನಿಮ್ಮ ಖಾತೆಯನ್ನು ನೀವು ಪರಿಶೀಲಿಸಬೇಕಾಗುತ್ತದೆ.
  • ಐಆರ್ಸಿಟಿಸಿ ಖಾತೆಯನ್ನು ಪರಿಶೀಲಿಸಲು ಹಂತ ಹಂತದ ಪ್ರಕ್ರಿಯೆ ಇಲ್ಲಿದೆ
ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ  title=
IRCTC Ticket Booking

ಭಾರತೀಯ ರೈಲ್ವೆಯ ಟಿಕೆಟ್ ಬುಕಿಂಗ್ ನಿಯಮಗಳು: ನೀವು ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಮತ್ತು ಇದಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದರೆ ಈ ಸುದ್ದಿ ನಿಮಗೆ ಮಹತ್ವದಾಗಿದೆ. ಭಾರತೀಯ ರೈಲ್ವೆಯು ಐಆರ್ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮದ ಪ್ರಕಾರ, ಟಿಕೆಟ್ ಬುಕಿಂಗ್‌ಗಾಗಿ ನಿಮ್ಮ ಖಾತೆಯನ್ನು ನೀವು ಪರಿಶೀಲಿಸಬೇಕಾಗುತ್ತದೆ.

ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಐಆರ್ಸಿಟಿಸಿ  ನಿಯಮಗಳ ಪ್ರಕಾರ, ಈಗ ಬಳಕೆದಾರರು ಟಿಕೆಟ್‌ಗಳನ್ನು ಕಾಯ್ದಿರಿಸುವ ಮೊದಲು ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯ ಪರಿಶೀಲನೆ ಇಲ್ಲದೆ, ನೀವು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ- LPG ಬಳಕೆದಾರರಿಗೆ ಸಿಹಿ ಸುದ್ದಿ : ನಿಮ್ಮ ಸಬ್ಸಿಡಿ ಬಗ್ಗೆ ಸರ್ಕಾರದಿಂದ ಭರ್ಜರಿ ಪ್ಲಾನ್! 

ವಾಸ್ತವವಾಗಿ, ಕರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡದ ಐಆರ್ಸಿಟಿಸಿ ಖಾತೆಯ ಅನೇಕ ಬಳಕೆದಾರರು ಇದ್ದಾರೆ. ಅಂತಹವರಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ನೀವು ದೀರ್ಘಕಾಲದವರೆಗೆ ರೈಲ್ವೆ ಟಿಕೆಟ್ ಬುಕ್ ಮಾಡದಿದ್ದರೆ ಮತ್ತು ಇದೀಗ ಮತ್ತೆ ನಿಮ್ಮ ಖಾತೆಯ ಮೂಲಕ ಟಿಕೆಟ್ ಬುಕ್ ಮಾಡಲು ಬಯಸಿದರೆ ಅದಕ್ಕೂ ಮೊದಲು ನಿಮ್ಮ ಖಾತೆಯನ್ನು ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯ ಮೂಲಕ ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ- ಆದಾಯ ತೆರಿಗೆ ಪೋರ್ಟಲ್‌ನಿಂದ ಇ-ಪ್ಯಾನ್ ಡೌನ್‌ಲೋಡ್ ಮಾಡಲು ಸುಲಭ ವಿಧಾನ

ಐಆರ್ಸಿಟಿಸಿ ಖಾತೆಯನ್ನು ಪರಿಶೀಲಿಸಲು ಹಂತ ಹಂತದ ಪ್ರಕ್ರಿಯೆ:
* ಐಆರ್ಸಿಟಿಸಿ ಖಾತೆಯನ್ನು ಪರಿಶೀಲಿಸಲು ಮೊದಲು ಐಆರ್ಸಿಟಿಸಿಯ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಹೋಗಿ ಪರಿಶೀಲನೆ ವಿಂಡೋ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಬೇಕು.
* ಎರಡೂ ಮಾಹಿತಿಯನ್ನು ನಮೂದಿಸಿದ ನಂತರ, ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಿ.
* ವೆರಿಫೈ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ.
* ಅದೇ ರೀತಿ ಇ-ಮೇಲ್ ಐಡಿಯಲ್ಲಿ ಕೋಡ್ ನಮೂದಿಸಿದ ನಂತರ ನಿಮ್ಮ ಮೇಲ್ ಐಡಿಯನ್ನು ಪರಿಶೀಲಿಸಲಾಗುತ್ತದೆ.
* ಈ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ನೀವು ನಿಮ್ಮ ಖಾತೆಯಿಂದ ಯಾವುದೇ ರೈಲಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News