ರೈಲಿನಲ್ಲಿ ಪ್ರಯಾಣಿಸುವವರಿಗೆ ಬೆಡ್‌ರೋಲ್ ಬಗ್ಗೆ ಇಲ್ಲಿದೆ ಪ್ರಮುಖ ಸುದ್ದಿ.! IRCTC ನೀಡಿದೆ ಮಾಹಿತಿ

ಬೆಡ್‌ರೋಲ್‌ಗಳಲ್ಲಿ, ಬೆಡ್ ಶೀಟ್‌ಗಳು, ದಿಂಬುಗಳು ಮತ್ತು ಬೆಡ್ ಸ್ಪ್ರೆಡ್ ನೀಡಲಾಗುತ್ತದೆ. ಆದರೆ ಕೊರೊನಾ ಸೋಂಕಿನಿಂದಾಗಿ ಬೆಡ್‌ರೋಲ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮದೇ ಆದ ಬೆಡ್ ಕಿಟ್ ಗಳನ್ನೂ ತೆಗೆದುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಾರೆ. 

Written by - Ranjitha R K | Last Updated : May 12, 2022, 03:57 PM IST
  • ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ
  • ಬೆಡ್‌ರೋಲ್ ಸೌಲಭ್ಯದ ಬಗ್ಗೆ ಮೊದಲೇ ಸಿಗುತ್ತದೆ ಮಾಹಿತಿ
  • ಈ ಬಗ್ಗೆ IRCTC ನೀಡಿದೆ ಮಹತ್ವದ ಮಾಹಿತಿ
ರೈಲಿನಲ್ಲಿ ಪ್ರಯಾಣಿಸುವವರಿಗೆ ಬೆಡ್‌ರೋಲ್  ಬಗ್ಗೆ ಇಲ್ಲಿದೆ ಪ್ರಮುಖ ಸುದ್ದಿ.! IRCTC ನೀಡಿದೆ ಮಾಹಿತಿ  title=
bed rool in indian railway (file photo)

ನವದೆಹಲಿ : ರೈಲಿನಲ್ಲಿ ಪ್ರಯಾಣ ಬೆಳೆಸುವವರಿಗೆ  IRCTC ಪ್ರಮುಖ ಮಾಹಿತಿ ನೀಡಿದೆ. ರೈಲಿನ ಎಸಿ ಕೋಚ್‌ಗಳಲ್ಲಿ ಬೆಡ್ ಶೀಟ್‌ಗಳು, ತಲೆ ದಿಂಬುಗಳು ಮತ್ತು ಬೆಡ್ ಸ್ಪ್ರೆಡ್ ಗಳನ್ನು ಒದಗಿಸುವ ಆದೇಶವನ್ನು ರೈಲ್ವೆ ತಕ್ಷಣದಿಂದಲೇ ಜಾರಿಗೆ ತಂದಿದೆ. ಆದರೆ, ಪ್ರಯಾಣಿಕರೂ ಈ ಸೌಲಭ್ಯವನ್ನು ಪಡೆಯುವುದು ವಿಳಂಬವಾಗುತ್ತಿದೆ. ಅಂದರೆ, ಈಗಲೂ ನೀವು ರೈಲಿನಲ್ಲಿ ಪ್ರಯಾಣಿಸಬೇಕಾದರೆ ನಿಮ್ಮದೇ ಆದ ಬೆಡ್ ಶೀಟ್‌ಗಳು, ತಲೆ ದಿಂಬುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.  

ಬೆಡ್‌ರೋಲ್  ಸೌಲಭ್ಯ ಇನ್ನೂ ಅನೇಕ ರೈಲುಗಳಲ್ಲಿ ಇಲ್ಲ :
ಬೆಡ್‌ರೋಲ್‌ಗಳಲ್ಲಿ, ಬೆಡ್ ಶೀಟ್‌ಗಳು, ದಿಂಬುಗಳು ಮತ್ತು ಬೆಡ್ ಸ್ಪ್ರೆಡ್ ನೀಡಲಾಗುತ್ತದೆ. ಆದರೆ ಕೊರೊನಾ ಸೋಂಕಿನಿಂದಾಗಿ ಬೆಡ್‌ರೋಲ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮದೇ ಆದ ಬೆಡ್ ಕಿಟ್ ಗಳನ್ನೂ ತೆಗೆದುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಾರೆ. 

ಇದನ್ನೂ ಓದಿ : ಪಿಂಚಣಿದಾರರಿಗೆ ಸಿಹಿ ಸುದ್ದಿ : ಎನ್‌ಪಿಎಸ್ ಅಡಿಯಲ್ಲಿ 'ಗ್ಯಾರೆಂಟಿಡ್ ರಿಟರ್ನ್' ಲಭ್ಯ

ಕರೋನಾದ ಮೂರನೇ ಅಲೆಯ ವೇಗ ಕಡಿಮೆಯಾದ ಕಾರಣ ರೈಲುಗಳಲ್ಲಿ ಬೆಡ್‌ರೋಲ್‌ಗಳನ್ನು ನೀಡುವಂತೆ ಮತ್ತೆ ಆದೇಶಿಸಲಾಗಿದೆ. ಈ ಆದೇಶದ ನಂತರ ಎಸಿ ಕೋಚ್‌ಗಳಲ್ಲೂ ಕರ್ಟನ್‌ ಅಳವಡಿಸಲು ಆರಂಭಿಸಲಾಗಿದೆ. ಆದರೆ ಇನ್ನೂ ಎಲ್ಲಾ ರೈಲುಗಳಲ್ಲಿ ಈ ಸೌಲಭ್ಯ ಈಗಲೂ ಲಭ್ಯವಿಲ್ಲ.

IRCTC ನೀಡಿದೆ ಈ ಮಾಹಿತಿ :
ಈಗ ಅನೇಕ ಪ್ರಯಾಣಿಕರಿಗೆ ತಾವು ಪ್ರಯಾಣಿಸಲಿರುವ ರೈಲಿನಲ್ಲಿ ಬೆಡ್‌ರೋಲ್ ಲಭ್ಯವಿದೆಯೇ ಅಥವಾ ಇಲ್ಲವೇ ಎನ್ನುವುದು ಮೊದಲೇ ತಿಳಿಯುತ್ತದೆ. IRCTC ಈ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದೆ. ಈಗ ನೀವು ಪ್ರಯಾಣಿಸಲಿರುವ ರೈಲಿನಲ್ಲಿ ಬೆಡ್‌ರೋಲ್ ಸೌಲಭ್ಯವಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಪಡೆಯಬಹುದು.

ಟಿಕೆಟ್ ಬುಕ್ ಮಾಡಿದ ನಂತರ ಮಾಹಿತಿ ಲಭ್ಯವಾಗಲಿದೆ :
ಟಿಕೆಟ್ ಅನ್ನು ಬುಕ್ ಮಾಡಿದಾಗ, IRCTC ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಅನ್ನು ಕಳುಹಿಸುತ್ತದೆ,. ಅದರಲ್ಲಿ ನಿಮ್ಮ ರೈಲಿನಲ್ಲಿ ಬೆಡ್‌ರೋಲ್ ಸೌಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ರೈಲ್ವೆಯ ಪ್ರಕಾರ, ಇದುವರೆಗೆ 950 ಕ್ಕೂ ಹೆಚ್ಚು ರೈಲುಗಳಲ್ಲಿ ಬೆಡ್‌ರೋಲ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ : TATA Nexon EV Max: ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಪರಿಚಯಿಸಿದ ಟಾಟಾ ಮೋಟರ್ಸ್

ಈ ಲಿಂಕ್‌ನಿಂದ ಅಪ್ಡೇಟ್ ಸಿಗುತ್ತದೆ : 
IRCTC ಪ್ರಕಾರ, https://contents.irctc.co.in/en/LINEN.html ನಿಂದ ನಿಮ್ಮ ರೈಲಿನಲ್ಲಿ ಬೆಡ್‌ರೋಲ್‌ನ  ಅಪ್ಡೇಟ್ ಅನ್ನು ಪಡೆಯುವುದು ಸಾಧ್ಯವಾಗುತ್ತದೆ.  ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಸಂಬಂಧಿತ ಮಾಹಿತಿಯು ನಿಮಗೆ ಲಭ್ಯವಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News