ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್: ಟಾಟಾ ಮೋಟಾರ್ಸ್ ಭಾರತದಲ್ಲಿ ಜನಪ್ರಿಯ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಸಂಚಾರದ ಕ್ಷಿಪ್ರ ವಿದ್ಯುದ್ದೀಕರಣಕ್ಕೆ ಬದ್ಧವಾದ ಟಾಟಾ ಮೋಟರ್ಸ್ ಮೇ 11ರಂದು ವೈಯಕ್ತಿಕ ಸಂಚಾರ ವರ್ಗದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅತ್ಯುತ್ತಮವಾಗಿ ಮಾರಾಟವಾಗುವ ಇವಿಯ ವಿಸ್ತರಣೆಯಾಗಿ ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ನ ಆರಂಭಿಕ ಎಕ್ಸ್ ಶೋ ರೂಂ ಬೆಲೆಯನ್ನು ರೂ. 17.74 ಲಕ್ಷ ರೂ.ಗಳಲ್ಲಿ ಪರಿಚಯಿಸಿತು. ಇದರ ಉನ್ನತ ಮಾದರಿಗೆ 19.24 ಲಕ್ಷ ರೂ. ಆಗಿದೆ.
ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆ:
ಹೊಸ ನೆಕ್ಸಾನ್ ಇವಿಮ್ಯಾಕ್ಸ್, ಹೈ ವೋಲ್ಟೇಜ್ ಅತ್ಯಾಧುನಿಕ ಜಿಪ್ಟ್ರಾನ್ ತಂತ್ರಜ್ಞಾನದ ಶಕ್ತಿ ಪಡೆದಿದ್ದು ಎರಡು ಟ್ರಿಮ್ ಆಯ್ಕೆಗಳಲ್ಲಿ, ಅಂದರೆ, ಹೊಸ ನೆಕ್ಸಾನ್ ಇವಿಮ್ಯಾಕ್ಸ್ XZ+ ಮತ್ತು ನೆಕ್ಸಾನ್ ಇವಿಮ್ಯಾಕ್ಸ್ XZ+ Lux ಎಂಬ ವೈವಿಧ್ಯಗಳಲ್ಲಿ ಲಭ್ಯವಿರಲಿದೆ.
ಇದು 3 ಕೌತುಕಮಯವಾದ ವರ್ಣಗಳಲ್ಲಿ ಬರುತ್ತದೆ-ಇಂಟೆನ್ಸಿ-ಟೀಲ್(ನೆಕ್ಸಾನ್ ಇವಿಮ್ಯಾಕ್ಸ್ ಮಾಡಲ್‍ಗೆ ವಿಶೇಷವಾದದ್ದು), ಡೇಟೋನಾ ಗ್ರೇ ಮತ್ತು ಪ್ರಿಸ್ಟೀನ್ ವೈಟ್. ಡ್ಯುಯಲ್ ಟೋನ್ ಬಾಡಿ ಕಲರ್‍ಅನ್ನು ಸಾಮಾನ್ಯವಾಗಿ ಒದಗಿಸಲಾಗುತ್ತದೆ. ಇವುಗಳನ್ನು ನಾಲ್ಕು ಟ್ರಿಮ್‌ಗಳಾಗಿ ವಿಂಗಡಿಸಲಾಗಿದೆ. ಕಂಪನಿಯು ZX Plus 3.3 kW-hr ಚಾರ್ಜರ್, ZX Plus 7.2 kW-hr AC ಫಾಸ್ಟ್ ಚಾರ್ಜರ್, ZX Plus LUX 3.3 kW-hr ಚಾರ್ಜರ್ ಮತ್ತು ZX Plus LUX 7.2 kW-Hour AC ಫಾಸ್ಟ್ ಚಾರ್ಜರ್‌ನಲ್ಲಿ ಹೊಸ ಇವಿ ಅನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ- Baby Berth in Trains: ತಾಯಂದಿರಿಗಾಗಿ ರೈಲ್ವೆಯಿಂದ ವಿಶೇಷ ಸೇವೆ ಆರಂಭ
ಹಿಂದಿನ ಮಾದರಿಗಿಂತ 30 ಪ್ರತಿಶತ ದೊಡ್ಡ ಬ್ಯಾಟರಿ:
ಹಿಂದಿನ ಮಾದರಿಗೆ ಹೋಲಿಸಿದರೆ, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನೊಂದಿಗೆ 30 ಪ್ರತಿಶತ ಹೆಚ್ಚು ಶಕ್ತಿಶಾಲಿ ಬ್ಯಾಟರಿಯನ್ನು ನೀಡಲಾಗಿದೆ. ಹೊಸ ಎಲೆಕ್ಟ್ರಿಕ್ ಎಸ್ಯುವಿ 40.5 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಅದು ಕಾರಿಗೆ ದೀರ್ಘ ಶ್ರೇಣಿಯನ್ನು ನೀಡುತ್ತದೆ. ನೆಕ್ಸಾನ್ ಇವಿ ಮ್ಯಾಕ್ಸ್‌ನೊಂದಿಗಿನ ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್ ಅದರ ಬೂಟ್ ಸ್ಪೇಸ್‌ಗೆ ಯಾವುದೇ ವ್ಯತ್ಯಾಸವನ್ನು ಮಾಡಿಲ್ಲ ಮತ್ತು ಇದು 350 ಲೀಟರ್ ಸಾಮರ್ಥ್ಯದೊಂದಿಗೆ ಒಂದೇ ಆಗಿರುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.
ಚಾರ್ಜಿಂಗ್ ಅನುಭವವನ್ನು ಗರಿಷ್ಟ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾ, ನೆಕ್ಸಾನ್ ಇವಿಮ್ಯಾಕ್ಸ್, 3.3 ಕಿ.ವ್ಯಾ ಚಾರ್ಜರ್ ಅಥವಾ ಶೀಘ್ರ ಚಾರ್ಜಿಂಗ್‍ಗಾಗಿ 7.2 ಕಿ.ವ್ಯಾ ಚಾರ್ಜರ್ ಆಯ್ಕೆಯೊಂದಿಗೆ ಬರುತ್ತದೆ. 7.2 ಕಿ.ವ್ಯಾ ಫಾಸ್ಟ್ ಚಾರ್ಜರ್ ಅನ್ನು ಮನೆಯಲ್ಲಿ ಅಥವಾ ಕಾರ್ಯಸ್ಥಳದಲ್ಲಿ ಅಳವಡಿಸಬಹುದಾಗಿದ್ದು, ಇದು ಚಾರ್ಜಿಂಗ್ ಸಮಯವನ್ನು 6.5 ಘಂಟೆಗಳಿಗೆ ಕಡಿಮೆಗೊಳಿಸಲು ಸಹಾಯವಾಗುತ್ತದೆ. ನೆಕ್ಸಾನ್ ಇವಿಮ್ಯಾಕ್ಸ್, ಯಾವುದೇ 50 ಕಿ.ವ್ಯಾ ಡಿಸಿ ಫಾಸ್ಟ್ ಚಾರ್ಜರ್ ನಿಂದ ಕೇವಲ 56 ನಿಮಿಷಗಳಲ್ಲಿ 0-80% ಶೀಘ್ರ ಚಾರ್ಜಿಂಗ್ ಸಮಯಕ್ಕೆ ಬೆಂಬಲ ಒದಗಿಸುತ್ತದೆ ಎನ್ನಲಾಗಿದೆ.
ಇದನ್ನೂ ಓದಿ- ಎಟಿಎಂನಿಂದ ಹಣ ಡ್ರಾ ಮಾಡುವಾಗ ಈ ಲೈಟ್ ಬಗ್ಗೆ ಇರಲಿ ವಿಶೇಷ ಗಮನ, ಇಲ್ಲವೇ ಖಾಲಿಯಾಗುತ್ತೆ ಖಾತೆ
ಒಮ್ಮೆ ಚಾರ್ಜ್ ಮಾಡಿದರೆ 437 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯ:
Nexon EV ಮ್ಯಾಕ್ಸ್‌ನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಅದರ ಶ್ರೇಣಿ. ARAI ಪ್ರಕಾರ, ಹೊಸ ಇವಿ ಅನ್ನು ಒಂದೇ ಚಾರ್ಜ್‌ನಲ್ಲಿ 437 ಕಿಮೀ ವರೆಗೆ ಓಡಿಸಬಹುದು ಮತ್ತು ನಿಯಂತ್ರಣ ಮತ್ತು ಆದರ್ಶ ಪರಿಸ್ಥಿತಿಗಳಲ್ಲಿ ಕಾರನ್ನು ಚಾಲನೆ ಮಾಡುವಾಗ ಈ ಶ್ರೇಣಿಯು ಲಭ್ಯವಿದೆ ಎಂದು ತಿಳಿದು ಬಂದಿದೆ.
ಹೊಸ ಟಾಟಾ ನೆಕ್ಸೊ ಇವಿ ಮ್ಯಾಕ್ಸ್‌ನ ಕ್ಯಾಬಿನ್‌ನಲ್ಲಿ, ಕಂಪನಿಯು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್, ಹಾರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೋಡ್‌ಗಳಿಗಾಗಿ ಕೆತ್ತಲಾದ ಡಯಲ್ ನಾಬ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಅಂತಹ ಅನೇಕ ವೈಶಿಷ್ಟ್ಯಗಳನ್ನು ನೀಡಿದೆ. ಕಂಪನಿಯು ನೆಕ್ಸಾನ್ ಇವಿ ಮ್ಯಾಕ್ಸ್‌ನೊಂದಿಗೆ ಹೊಸ ಬಣ್ಣದ ಸ್ಕೀಮ್ ಅನ್ನು ನೀಡಿದೆ, ಇದು ಇಂಟೆನ್ಸಿಟಿ-ಟೀಲ್ ಆಗಿದೆ, ಇದರ ಹೊರತಾಗಿ ಕಾರನ್ನು ಡೇಟೋನಾ ಗ್ರೇ ಮತ್ತು ಪ್ರಿಸ್ಟಿನ್ ವೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ಮೂರು ಚಾಲನಾ ಮೋಡ್‍ಗಳನ್ನು ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ :
ನೆಕ್ಸಾನ್ ಇವಿ ಮ್ಯಾಕ್ಸ್ 3 ಚಾಲನಾ ಮೋಡ್‍ಗಳನ್ನು ಹೊಂದಿದೆ-ಎಕೋ, ಸಿಟಿ ಮತ್ತು ಸ್ಪೋರ್ಟ್ಸ್ ಹಾಗೂ ನವೀಕೃತ ಜೆಡ್-ಕನೆಕ್ಟ್ 2.0 ಸಂಪರ್ಕಗೊಂಡ ಕಾರ್ ತಂತ್ರಜ್ಞಾನದಲ್ಲಿ ಎಂಟು ಹೊಸ ಅಂಶಗಳನ್ನು ಹೊಂದಿದೆ. ಜೆಡ್-ಕನೆಕ್ಟ್ ಆ್ಯಪ್, 48 ಸಂಪರ್ಕಗೊಂಡ ಕಾರ್ ಅಂಶಗಳನ್ನು ಒದಗಿಸುವ ಆ್ಯಪ್ ಆಗಿದೆ. ಇದು ಆಳವಾದ ಡ್ರೈವ್ ಅನಲಿಟಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್‍ಗೆ ನೆರವಾಗುತ್ತದೆ. ಈ ಹೆಚ್ಚುವರಿಯಾಗಿ ಸೇರಿಸಲ್ಪಟ್ಟಿರುವ ಅಂಶದ ಪಟ್ಟಿಯು ಸ್ಮಾರ್ಟ್ ವಾಚ್ ಸಂಯೋಜನೆ, ಆಟೋ/ಮ್ಯಾನ್ಯುವಲ್ ಡಿಟಿಸಿ ಚೆಕ್, ಚಾರ್ಜಿಂಗ್‍ಗೆ ಪರಿಮಿತಿ ಸೆಟ್ ಮಾಡುವುದು, ಮಾಸಿಕ ವರದಿ ಮತ್ತು ವರ್ಧಿತ ಡ್ರೈವ್ ಅನಲಿಟಿಕ್ಸ್‍ಅನ್ನು ಒಳಗೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.