ನವದೆಹಲಿ: ಮುಂಬರುವ ಹಬ್ಬದ ಸೀಸನ್(Festive Season)ನಿಂದಾಗಿ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ದೇಶದಾದ್ಯಂತ ಮುಂದಿನ 3 ತಿಂಗಳುಗಳವರೆಗೆ 22 ಜೋಡಿ ರೈಲುಗಳ ಸೇವೆಗಳನ್ನು ಹೆಚ್ಚಿಸಿದೆ. ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, 22 ಜೋಡಿ ರೈಲುಗಳ ಸೇವೆಗಳ ವಿಸ್ತರಣೆಯನ್ನು ಆಗ್ನೇಯ ರೈಲ್ವೆ ಪ್ರದೇಶಕ್ಕೆ ಘೋಷಿಸಲಾಗಿದೆ. ಹೆಚ್ಚಿನ ರೈಲುಗಳು ಜಾರ್ಖಂಡ್‌ನಲ್ಲಿ ಮೂಲ ಅಥವಾ ಅಂತಿಮ ಗಮ್ಯಸ್ಥಾನ(Destination)ವನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಆಗ್ನೇಯ ವಲಯ(South-East zone)ದಲ್ಲಿ ಹಬ್ಬದ ಋತುವಿನಿಂದ ಹೆಚ್ಚಿನ ಜನರು ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಮುಂದಿನ ಕೆಲ ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ದುರ್ಗಾಪೂಜೆ, ಛತ್ ಪೂಜೆ, ಕಾಳಿ ಪೂಜೆ, ದೀಪಾವಳಿ ಮತ್ತು ಕ್ರಿಸ್ಮಸ್ ಸೇರಿ ಇತರೆ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹಬ್ಬಗಳ ಕಾರಣ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿಯಾಗುವ ಉದ್ದೇಶದಿಂದ ರೈಲುಗಳಲ್ಲಿ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ: REET 2021: ರಾಜಸ್ತಾನದಲ್ಲಿ ಪರೀಕ್ಷೆ ವೇಳೆ 6 ಲಕ್ಷ ಮೌಲ್ಯದ ಬ್ಲೂಟೂತ್ ಸಾಧನದ ಚಪ್ಪಲಿ ವಶಕ್ಕೆ
22 ಜೋಡಿ ರೈಲುಗಳ ವಿಸ್ತರಣೆಗೆ ಸಂಬಂಧಿಸಿದಂತೆ ಆಗ್ನೇಯ ರೈಲ್ವೆಯ ಉಪ ಮುಖ್ಯ ಕಾರ್ಯನಿರ್ವಾಹಕ (ಕೋಚಿಂಗ್) ಸಂಜಯ್ ಘೋಷ್ ಚಕ್ರಧರಪುರ ರೈಲ್ವೆ ವಿಭಾಗ(Chakradharpur Railway Division)ಕ್ಕೆ ಸುತ್ತೋಲೆ ಹೊರಡಿಸಿದ್ದಾರೆ. ಸುತ್ತೋಲೆಯ ಪ್ರಕಾರ, ಆಗ್ನೇಯ ರೈಲ್ವೆಯ ರಾಂಚಿ, ಚಕ್ರಧರಪುರ, ಖರಗ್‌ಪುರ ಮತ್ತು ಅದ್ರಾ ರೈಲ್ವೆ ವಿಭಾಗಗಳ ಮೂಲಕ ಚಲಿಸುವ 22 ಜೋಡಿ ಎಕ್ಸ್ ಪ್ರೆಸ್ ರೈಲುಗಳನ್ನು ಮುಂದಿನ 3 ತಿಂಗಳವರೆಗೆ ವಿಸ್ತರಿಸಲಾಗಿದೆ.
ವಿಸ್ತರಿಸಿರುವ ರೈಲುಗಳ ಪಟ್ಟಿ ಇಂತಿದೆ
ಟಾಟಾ - ದಾನಾಪುರ - ಟಾಟಾ ಎಕ್ಸ್ ಪ್ರೆಸ್
ಹತಿಯಾ - ಯಶವಂತಪುರ - ಹತಿಯಾ ಎಕ್ಸ್ ಪ್ರೆಸ್
ಹೌರಾ – ಮೈಸೂರು - ಹೌರಾ ಎಕ್ಸ್ ಪ್ರೆಸ್
ಹತಿಯಾ - ಎಲ್ ಟಿಟಿ - ಹತಿಯಾ ಎಕ್ಸ್ ಪ್ರೆಸ್
ಹೌರಾ - ಹೈದರಾಬಾದ್ - ಹೌರಾ ಎಕ್ಸ್ ಪ್ರೆಸ್
ಸಂತ್ರಗಚಿ – ಪಿಎ - ಸಂತ್ರಗಚಿ ಎಕ್ಸ್ ಪ್ರೆಸ್
ಹೌರಾ – ಯಶವಂತಪುರ - ಹೌರಾ ಎಕ್ಸ್‌ಪ್ರೆಸ್
ಹೌರಾ - ವಾಸ್ಕೋ ಡ ಗಾಮ - ಹೌರಾ ಎಕ್ಸ್ ಪ್ರೆಸ್
ಟಾಟಾ - ಛಾಪ್ರಾ- ಟಾಟಾ ಎಕ್ಸ್ ಪ್ರೆಸ್
ಹಟಿಯಾ – ಪೂರ್ಣಿಯಾ - ಹತಿಯಾ ಎಕ್ಸ್ ಪ್ರೆಸ್
ರಾಂಚಿ – ಹೌರಾ - ರಾಂಚಿ ಎಕ್ಸ್ ಪ್ರೆಸ್
ಹೌರಾ – ಪುದುಚೇರಿ - ಹೌರಾ ಎಕ್ಸ್ ಪ್ರೆಸ್
ಹತಿಯಾ – ಯಶವಂತಪುರ - ಹತಿಯಾ ಎಕ್ಸ್ ಪ್ರೆಸ್
ಹೌರಾ –ಪುರಿ - ಹೌರಾ ಎಕ್ಸ್ ಪ್ರೆಸ್
ಹೌರಾ – ಎರ್ನಾಕುಲಂ - ಹೌರಾ ಎಕ್ಸ್ ಪ್ರೆಸ್
ಶಾಲಿಮಾರ್ - ಸಿಕಂದರಾಬಾದ್ - ಶಾಲಿಮಾರ್ ಎಕ್ಸ್ ಪ್ರೆಸ್
ಹತಿಯಾ - ಆನಂದ ವಿಹಾರ್ ಟರ್ಮಿನಲ್ - ಹತಿಯಾ ಎಕ್ಸ್ ಪ್ರೆಸ್
ಸಂತ್ರಗಚಿ - ಆನಂದ್ ವಿಹಾರ್ ಟರ್ಮಿನಲ್ - ಸಂತ್ರಗಚಿ ಎಕ್ಸ್ ಪ್ರೆಸ್
ಹೌರಾ - ಸಾಯಿ ನಗರ ಶಿರಡಿ ಟರ್ಮಿನಲ್ - ಹೌರಾ ಎಕ್ಸ್ ಪ್ರೆಸ್
ಹತಿಯಾ - ಬೆಂಗಳೂರು - ಹಟಿಯಾ ಎಕ್ಸ್ ಪ್ರೆಸ್
ಟಾಟಾ – ಅಮೃತಸರ - ಟಾಟಾ ಎಕ್ಸ್ ಪ್ರೆಸ್
ಇದನ್ನೂ ಓದಿ: ನೂತನ ಸಂಸತ್ ಭವನ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.