IT Raid - ಹೀರೋ ಮೋಟೋಕಾರ್ಪ್ ಕುರಿತು ಒಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ. ಬುಧವಾರ, ಆದಾಯ ತೆರಿಗೆ ಇಲಾಖೆಯು ಹೀರೋ ಮೋಟೋಕಾರ್ಪ್‌ನ (Hero MotoCorp) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (Hero MotoCorp Chairman And MD) ಪವನ್ ಮುಂಜಾಲ್ ಅವರ ಕಚೇರಿ ಮೇಲೆ ದಾಳಿ ನಡೆಸಿದೆ. ಮಾಹಿತಿ ಪ್ರಕಾರ, ಗುರ್ಗಾಂವ್‌ನಲ್ಲಿರುವ ಅವರ ಮನೆ ಮತ್ತು ಕಚೇರಿಯಲ್ಲಿ ಬೆಳಿಗ್ಗೆಯಿಂದ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ದೆಹಲಿಯ ಇನ್ವೆಸ್ಟಿಗೆಶನ್ ಡಿಪಾರ್ಟ್ಮೆಂಟ್ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಪ್ರಕರಣ ಏನು?
ಮೂಲಗಳ ಪ್ರಕಾರ ಪವನ್ ಮುಂಜಾಲ್ ಅವರು ತಮ್ಮ ಖಾತೆಯಲ್ಲಿ ಬೋಗಸ್ ಖರ್ಚು ತೋರಿಸಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಬೆಳಗ್ಗೆ ದಾಳಿ (Hero MotoCorp IT Raids) ನಡೆಸಿದೆ. ಆದಾಯ ತೆರಿಗೆ ತಂಡಕ್ಕೆ ಬಂದಿರುವ ಅನುಮಾನಾಸ್ಪದ ವೆಚ್ಚದ ವಿವರಗಳಲ್ಲಿ, ಕೆಲವು ಆಂತರಿಕ ಕಂಪನಿಗಳ ವೆಚ್ಚವನ್ನೂ ತೋರಿಸಲಾಗಿದೆ. ಈ ದಾಳಿ ಇನ್ನೂ ಒಂದೆರಡು ದಿನ ಮುಂದುವರೆಯುವ ನಿರೀಕ್ಷೆ ಇದೆ ಎಂದು ಮೂಲಗಳು ವರದಿ ಮಾಡಿವೆ. ಸದ್ಯ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಆಗಲಿ ಅಥವಾ ಹೀರೋ ಮೋಟೋಕಾರ್ಪ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಮುಂದಿನ 1 ರಿಂದ 2 ದಿನಗಳವರೆಗೆ ಈ ತನಿಖೆ ನಡೆಯಲಿದೆ ಎನ್ನಲಾಗಿದೆ. ಮಹತ್ವದ ವಿಷಯ ಎಂದರೆ ಆದಾಯ ತೆರಿಗೆ ಇಲಾಖೆಗೆ ದೊರೆತ ಕೆಲ ವೆಚ್ಚಗಳ ಮಾಹಿತಿಗಳು ಅರ್ಥವಾಗುತ್ತಿಲ್ಲ ಎನ್ನಲಾಗಿದೆ. ಇವುಗಳಲ್ಲಿ ಈವೆಂಟ್ ಕಂಪನಿಯೊಂದಿಗೆ ತೋರಿಸಲಾಗಿರುವ ವೆಚ್ಚಗಳು ಅಥವಾ ಮನೆಯೊಳಗಿನ ಅನೇಕ ವೆಚ್ಚಗಳು ಶಾಮೀಲಾಗಿದ್ದು, ಈ ಕುರಿತು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ-Gold Price Today: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ .! 4,235 ರೂ. ಅಗ್ಗವಾಯಿತು ಬಂಗಾರ
ಬಿಲ್ಡರ್‌ಗಳ ಮೇಲೂ ತೆರಿಗೆ ಇಲಾಖೆ ಕ್ರಮ
ಇನ್ನೊಂದೆಡೆ ಓಮ್ಯಾಕ್ಸ್ ಬಿಲ್ಡರ್ ವಿರುದ್ಧವೂ ಕೂಡ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ತನಿಖಾ ಇಲಾಖೆಯ ಕ್ರಮದಲ್ಲಿ ಬಿಲ್ಡರ್ ಬಳಿಯಿಂದ ಲೆಕ್ಕಕ್ಕೆ ಸಿಗದ ಸುಮಾರು 25 ಕೋಟಿ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇಲಾಖೆಯ ತನಿಖೆಯ ಪ್ರಕಾರ ಕಂಪನಿಯು ಕಳೆದ 10 ವರ್ಷಗಳಿಂದ ಹೂಡಿಕೆದಾರರಿಂದ ಹಣವನ್ನು ನಗದು ರೂಪದಲ್ಲಿ ಪಡೆಯುತ್ತಿದೆ. ಈ ಮೊತ್ತ 3,000 ಕೋಟಿಗೂ ಹೆಚ್ಚಾಗಿದೆ ಎನ್ನಲಾಗಿದೆ. ತೆರಿಗೆ ಇಲಾಖೆಯು ಓಮ್ಯಾಕ್ಸ್‌ನ 11 ಬ್ಯಾಂಕ್ ಲಾಕರ್‌ಗಳನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ-ಗ್ರಾಹಕರಿಗೆ ಮುನ್ನೆಚ್ಚರಿಕೆ ನೀಡಿದ SBI; 4 ದಿನಗಳವರೆಗೆ ಬ್ಯಾಂಕ್ ವ್ಯವಹಾರ ಇರುವುದಿಲ್ಲ
ಇದಕ್ಕೂ ಮುನ್ನ ಮಾರ್ಚ್ 22ರಂದು ರಿಯಲ್ ಎಸ್ಟೇಟ್ ಕ್ಷೇತ್ರದ ಹಿರಾನಂದಾನಿ ಗ್ರೂಪ್ (Hiranandani Group) ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ 24 ಕಡೆಗಳಲ್ಲಿ ಐಟಿ ಇಲಾಖೆಯ ಈ ದಾಳಿ ನಡೆದಿದೆ ಎನ್ನಲಾಗಿದೆ. ಹಿರಾನಂದಾನಿ ಗ್ರೂಪ್ ತನ್ನ ಪ್ರಮುಖ ಯೋಜನೆಯನ್ನು ಮುಂಬೈನ ಪೊವೈನಲ್ಲಿ ಹೊಂದಿದೆ. ಈ ಗ್ರೂಪ್ ವಿರುದ್ಧ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.