Edible Oils: ಖಾದ್ಯ ತೈಲ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

Edible Oil Price: ಈ ಮೊದಲು ಚಿಲ್ಲರೆ ಮಾರಾಟಗಾರರಿಗೆ 30-30 ಕ್ವಿಂಟಲ್ ಎಣ್ಣೆ ಮತ್ತು ಎಣ್ಣೆಕಾಳುಗಳನ್ನು ಸಂಗ್ರಹಿಸಲು ಸರ್ಕಾರ ಅನುಮತಿ ನೀಡಿತ್ತು. ಇದಲ್ಲದೆ, ಸಗಟು ವ್ಯಾಪಾರಿಗಳು 500 ಕ್ವಿಂಟಾಲ್ ಸಂಗ್ರಹಿಸಬಹುದು ಎಂದು ಸರ್ಕಾರ ಹೇಳಿತ್ತು.  

Written by - Nitin Tabib | Last Updated : Nov 2, 2022, 03:04 PM IST
  • ಚಿಲ್ಲರೆ ಮಾರಾಟಗಾರರಿಗೆ 30-30 ಕ್ವಿಂಟಲ್ ಎಣ್ಣೆ ಮತ್ತು ಎಣ್ಣೆಕಾಳುಗಳನ್ನು
  • ಸಂಗ್ರಹಿಸಲು ಸರ್ಕಾರ ಅನುಮತಿ ನೀಡಿತ್ತು. ಇದಲ್ಲದೆ,
  • ಸಗಟು ವ್ಯಾಪಾರಿಗಳು 500 ಕ್ವಿಂಟಾಲ್ ಸಂಗ್ರಹಿಸಬಹುದು ಎಂದು ಸರ್ಕಾರ ಹೇಳಿತ್ತು.
Edible Oils: ಖಾದ್ಯ ತೈಲ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ! title=
Edible Oil Price

Edible Oil Stock Limit: ಖಾದ್ಯ ತೈಲ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವರ್ಷಕ್ಕೆ ವಿಧಿಸಲಾಗಿದ್ದ ಖಾದ್ಯ ತೈಲದ ದಾಸ್ತಾನು ಮಿತಿಯನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದ ನಂತರ, ಇದೀಗ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ತಮ್ಮ ಅಗತ್ಯ ಮತ್ತು ಇಚ್ಛೆಗೆ ಅನುಗುಣವಾಗಿ ಖಾದ್ಯ ತೈಲ ಮತ್ತು ಎಣ್ಣೆಕಾಳುಗಳನ್ನು ಸಂಗ್ರಹಿಸಲು ಸಾಧ್ಯವಾಗಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ಎಣ್ಣೆಕಾಳುಗಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದ ರೈತರು, ಅಂಗಡಿಕಾರರು ಮತ್ತು ಗ್ರಾಹಕರು ಎಲ್ಲರಿಗೂ ಪ್ರಯೋಜನವಾಗಲಿದೆ.

ದಾಸ್ತಾನು ಮಿತಿಗಳನ್ನು ಹೇರುವ ಹಿಂದಿನ ಕಾರಣಗಳು
2021 ರ ಅಕ್ಟೋಬರ್ ತಿಂಗಳಲ್ಲಿ, ತೈಲ ಮತ್ತು ಎಣ್ಣೆಕಾಳುಗಳ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಅದರ ಸಂಗ್ರಹ ಮಿತಿಯನ್ನು ನಿಗಗಿಪದಿಸಿತ್ತು. ಇದಾದ ನಂತರ ದೊಡ್ಡ ಚಿಲ್ಲರೆ ವ್ಯಾಪಾರಿಗಳಿಂದ ಹಿಡಿದು ಸಗಟು ವ್ಯಾಪಾರಿಗಳವರೆಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯ ತೈಲ ಮತ್ತು ಎಣ್ಣೆಕಾಳುಗಳನ್ನು ಸಂಗ್ರಹಿಸಲಾಗುತ್ತಿರಲಿಲ್ಲ. ಖಾದ್ಯ ತೈಲದ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಆದೇಶದ ನಂತರ, ತೈಲ ಮತ್ತು ಎಣ್ಣೆಕಾಳುಗಳ ಮಾರಾಟಗಾರರು ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಬಹುದು ಎಂಬ ಮಿತಿಯನ್ನು ನಿಗದಿಪಡಿಸುವ ಹಕ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದಂತಾಗಿದೆ.

ಕಳೆದ ವರ್ಷ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಣ್ಣೆ ಕಾಳುಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿತ್ತು. ಇದರ ನಂತರ, ಈ ವರ್ಷ ರಷ್ಯಾ-ಉಕ್ರೇನ್ ಯುದ್ಧದ ಕಾರಣ, ಪೂರೈಕೆಯ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಕಾರಣದಿಂದ ಗ್ರಾಹಕರ ಮೇಲೆ ಹಣದುಬ್ಬರದ ಹೊರೆ ಹೆಚ್ಚಾಗದಂತೆ ಕೇಂದ್ರ ಸರ್ಕಾರ ಈ ದಾಸ್ತಾನು ಮಿತಿಯನ್ನು ನಿಗದಿಪಡಿಸಿತ್ತು.

ಇದನ್ನೂ ಓದಿ-Hydrogen Car: ಹೈಡ್ರೋಜನ್ ನಿಂದ ಓಡುವ ಕಾರುಗಳ ಕುರಿತು ಮಹತ್ವದ ಹೇಳಿಕೆ ನೀಡಿದ ಗಡ್ಕರಿ, ಒಂದು ಕೆಜಿಗೆ ಮೈಲೇಜ್ ಎಷ್ಟು ಗೊತ್ತಾ?

ದಾಸ್ತಾನು ಮಿತಿ ಎಷ್ಟಿತ್ತು?
ಚಿಲ್ಲರೆ ಮಾರಾಟಗಾರರಿಗೆ 30-30 ಕ್ವಿಂಟಲ್ ಎಣ್ಣೆ ಮತ್ತು ಎಣ್ಣೆಕಾಳುಗಳನ್ನು ಸಂಗ್ರಹಿಸಲು ಸರ್ಕಾರ ಅನುಮತಿ ನೀಡಿತ್ತು. ಇದಲ್ಲದೆ, ಸಗಟು ವ್ಯಾಪಾರಿಗಳು 500 ಕ್ವಿಂಟಾಲ್ ಸಂಗ್ರಹಿಸಬಹುದು ಎಂದು ಸರ್ಕಾರ ಹೇಳಿತ್ತು. ಅದೇ ಸಮಯದಲ್ಲಿ, ರಿಟೇಲ್ ಚೈನ್ ಮಾರಾಟಗಾರರು ಮತ್ತು ಅಂಗಡಿಗಳ ಮಾರಾಟಗಾರರಿಗೆ 30 ಕ್ವಿಂಟಾಲ್ ಮತ್ತು 1,000 ಕ್ವಿಂಟಲ್ ಎಣ್ಣೆ ಮತ್ತು ಎಣ್ಣೆಕಾಳುಗಳನ್ನು ಸಂಗ್ರಹಿಸಲು ಅನುಮತಿ ನೀಡಲಾಗಿತ್ತು. ಇದರೊಂದಿಗೆ, ಈ ಎಲ್ಲಾ ದಾಸ್ತಾನುಗಳನ್ನು 90 ದಿನಗಳವರೆಗೆ ಮಾತ್ರ ಸಂಗ್ರಹಿಸಬಹುದು ಎಂದು ಸರ್ಕಾರ ಹೇಳಿತ್ತು.

ಇದನ್ನೂ ಓದಿ-Bank Latest Update: ಖಾತೆ ತೆರೆಯುವ ಹಾಗೂ ಸಿಮ್ ಪಡೆಯುವ ನಿಯಮಗಳಲ್ಲಿ ಬದಲಾವಣೆ!

ಗ್ರಾಹಕರಿಗೆ ಏನು ಪ್ರಯೋಜನವಾಗಲಿದೆ
ಸರ್ಕಾರದ ದಾಸ್ತಾನು ಮಿತಿಯನ್ನು ತೆಗೆದುಹಾಕಿದ ನಂತರ, ಇದೀಗ ಸಗಟು ಮತ್ತು ದೊಡ್ಡ ಚಿಲ್ಲರೆ ವ್ಯಾಪಾರಿಗಳು ತಮ್ಮ ಬಳಿ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯ ತೈಲಗಳ ದಾಸ್ತಾನು ಇರಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಪೂರೈಕೆಯಿಂದಾಗಿ, ಬೆಲೆಗಳ ಒತ್ತಡವೂ ಕಡಿಮೆಯಾಗುತ್ತದೆ. ಕಳೆದ ಕೆಲವು ದಿನಗಳಿಂದ ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆಯಾಗಿದ್ದು, ಈ ಕ್ರಮದಿಂದ ಬೆಲೆಗಳು ಮತ್ತಷ್ಟು ಕುಸಿಯುವ ನಿರೀಕ್ಷೆಯಿದೆ. ಈಗ ಅಂಗಡಿಕಾರರು ಸಹ ವಿವಿಧ ಬಗೆಯ ಖಾದ್ಯ ತೈಲಗಳನ್ನು ಸಂಗ್ರಹಿಸಲು ಸಾಧ್ಯವಾಗಲಿದೆ, ಇದು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ಸರ್ಕಾರದ ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News