Good News: ವಾಹನ ಸವಾರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟಿಸಿದ Nitin Gadkari

Nitin Gadkari On Electric Vechcle: ನೀವೂ ಕೂಡ ಹೊಸ ವರ್ಷದಲ್ಲಿ ವಾಹನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಬಂಬಾಟ್ ಸುದ್ದಿ ಕೇವಲ ನಿಮಗಾಗಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ನಿಟ್ಟಿನಲ್ಲಿ ಒಂದು ಮಹತ್ವದ ಘೋಷಣೆ ಮಾಡಿದ್ದರೆ, ಗಡ್ಕರಿಯ ಈ ಘೋಷಣೆಯ ಬಳಿಕ  ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸುವವರಿಗೆ ಭಾರಿ ಅನುಕೂಲವಾಗಲಿದೆ.  

Written by - Nitin Tabib | Last Updated : Dec 4, 2022, 02:09 PM IST
  • ಕೇಂದ್ರ ಸರ್ಕಾರ ಕೂಡ ಶೀಘ್ರದಲ್ಲೇ ಈ ಬಗ್ಗೆ ದೊಡ್ಡ ಮಹತ್ವದ ಘೋಷಣೆಯೊಂದನ್ನು ಮೊಳಗಿಸಲಿದೆ ಎಂಬ ವರದಿಗಳಿವೆ,
  • ಬಳಿಕ ಜನ ಸಾಮಾನ್ಯರು ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವುದು ಮತ್ತಷ್ಟು ಸುಲಭವಾಗಲಿದೆ
  • ಮತ್ತು ಅದರ ಮುನ್ಸೂಚನೆಯನ್ನು ಕೇಂದ್ರ ಸಾರಿಗೆ ಸಚಿವರು ನೀಡಿದ್ದಾರೆ.
Good News: ವಾಹನ ಸವಾರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟಿಸಿದ Nitin Gadkari title=
Nitin Gadkari On EV

Nitin Gadkari on Electric Vehicle: ನೀವೂ ಕೂಡ ಹೊಸ ವರ್ಷದಲ್ಲಿ ವಾಹನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಬಂಬಾಟ್ ಸುದ್ದಿ ಕೇವಲ ನಿಮಗಾಗಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ನಿಟ್ಟಿನಲ್ಲಿ ಒಂದು ಮಹತ್ವದ ಘೋಷಣೆ ಮಾಡಿದ್ದರೆ, ಗಡ್ಕರಿಯ ಈ ಘೋಷಣೆಯ ಬಳಿಕ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸುವವರಿಗೆ ಭಾರಿ ಅನುಕೂಲವಾಗಲಿದೆ. ರಾಜ್ಯ ಸರ್ಕಾರದಂತೆ ಕೇಂದ್ರ ಸರ್ಕಾರ ಕೂಡ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು ಅಬ್ಬರಿಸುವ ಕಾಲ ಸನ್ನಿಹಿತವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಅನೇಕ ರಾಜ್ಯಗಳಲ್ಲಿ ಸಹಾಯಧನ ಘೋಷಿಸಲಾಗಿದೆ
ಯುಪಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಸಬ್ಸಿಡಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಕೂಡ ಶೀಘ್ರದಲ್ಲೇ ಈ ಬಗ್ಗೆ ದೊಡ್ಡ ಮಹತ್ವದ ಘೋಷಣೆಯೊಂದನ್ನು ಮೊಳಗಿಸಲಿದೆ ಎಂಬ ವರದಿಗಳಿವೆ, ಬಳಿಕ ಜನ ಸಾಮಾನ್ಯರು ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವುದು ಮತ್ತಷ್ಟು ಸುಲಭವಾಗಲಿದೆ ಮತ್ತು ಅದರ ಮುನ್ಸೂಚನೆಯನ್ನು ಕೇಂದ್ರ ಸಾರಿಗೆ ಸಚಿವರು ನೀಡಿದ್ದಾರೆ.

ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ನಿಂದ ಪರಿಹಾರ ಸಿಗಲಿದೆ
ದೇಶದಲ್ಲಿನ ಮಾಲಿನ್ಯದ ಕುರಿತು ಕೇಂದ್ರ ಸರ್ಕಾರ ತುಂಬಾ ಎಚ್ಚರಿಕೆ ವಹಿಸಿದೆ, ಇದರಿಂದಾಗಿ ದೇಶದಾದ್ಯಂತ ವಿದ್ಯುತ್ ವಾಹನಗಳ ಖರೀದಿಯನ್ನು ಉತ್ತೇಜಿಸಲಾಗುತ್ತಿದೆ. ಈ ವಾಹನಗಳ ಮೇಲೆ ರಿಯಾಯಿತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಹೊಸ ವರ್ಷದಲ್ಲಿ ಅಂದರೆ ಜನವರಿ ತಿಂಗಳಿಂದಲೇ ಎಲೆಕ್ಟ್ರಿಕ್ ವಾಹನಗಳು ಹೊಸ ದಿಕ್ಕನ್ನು ಪಡೆಯಲಿವೆ, ಇದರಿಂದ ಪೆಟ್ರೋಲ್-ಡೀಸೆಲ್ ಹಣದುಬ್ಬರ ಮತ್ತು ಮಾಲಿನ್ಯ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಇದನ್ನೂ ಓದಿ-Cheapest Bikes: iPhone ಬೆಲೆಯಲ್ಲಿ ಖರೀದಿಸಬಹುದಾದ 5 ಅಗ್ಗದ ಬೈಕ್ಸ್ ಇಲ್ಲಿವೆ!

ಇಲೆಕ್ಟ್ರಿಕ್ ವಾಹನ ಚಲಾವಣೆಯ ವೆಚ್ಚ ಎಷ್ಟು 
ಪೆಟ್ರೋಲ್-ಡೀಸೆಲ್‌ಗಿಂತ ಎಲೆಕ್ಟ್ರಿಕ್ ವಾಹನಗಳ ಸವಾರಿ ಅತ್ಯಂತ ಅಗ್ಗವಾಗಿದೆ ಎಂದು ಸರ್ಕಾರ ಹೇಳಿದೆ. ಇಂದಿನ ಪ್ರಕಾರ ಪೆಟ್ರೋಲ್ ವಾಹನ ಓಡಿಸಲು ಕಿ.ಮೀ.ಗೆ 7 ರೂ. ವೆಚ್ಚ ತಗುಲುತ್ತದೆ. ಅದೇ ಇನ್ನೊಂದೆಡೆ ನಾವು ಎಲೆಕ್ಟ್ರಿಕ್ ವಾಹನವನ್ನು ಚಲಾಯಿಸಿದರೆ, ಪ್ರತಿ ಕಿ.ಮೀ.ಗೆ 1 ರೂ. ವೆಚ್ಚ ಬರುತ್ತದೆ.

ಇದನ್ನೂ ಓದಿ-Good News: ರೈತ ಬಾಂಧವರಿಗೊಂದು ಮಹತ್ವದ ಸುದ್ದಿ, ಈ ಫಸಲು ಬೆಳೆದು ಬಂಪರ್ ಲಾಭ ನಿಮ್ಮದಾಗಿಸಿಕೊಳ್ಳಿ

ಚಾರ್ಜಿಂಗ್ ಪಾಯಿಂಟ್ ಬಗ್ಗೆ ಚರ್ಚೆ
ದೆಹಲಿ ಎನ್‌ಸಿಆರ್ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ, ಇದರಿಂದ ಶೀಘ್ರದಲ್ಲಿಯೇ  ಚಾರ್ಜಿಂಗ್ ಸಮಸ್ಯೆ ದೂರಾಗಲಿದೆ. ಅಷ್ಟೇ ಅಲ್ಲ, ದೇಶದಲ್ಲಿ 6 ಹಸಿರು ವಿದ್ಯುತ್ ಹೆದ್ದಾರಿಗಳು ಪೂರ್ಣಗೊಳ್ಳಲಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News