ಚಾರ್ಜ್ ಮಾಡಬೇಕಾದ ಅವಶ್ಯಕತೆಯಿಲ್ಲ, ಓಡಿಸುತ್ತಿದ್ದರೆ ತನ್ನಷ್ಟಕ್ಕೆ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಈ ತಂತ್ರಜ್ಞಾನದ ಪ್ರಕಾರ ಎಲೆಕ್ಟ್ರಿಕ್ ಬೈಕ್ ನ ಒಂದು ಬ್ಯಾಟರಿಯಿಂದ ಮತ್ತೊಂದು ಬ್ಯಾಟರಿ ಚಾರ್ಜ್ ಆಗುತ್ತದೆ. ಹೀಗಾಗಿ ಈ ಬೈಕ್ ಅನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ.

Written by - Ranjitha R K | Last Updated : Dec 30, 2021, 10:14 AM IST
  • ಎಲೆಕ್ಟ್ರಿಕ್ ವಾಹನವು ಚಾರ್ಜ್ ಮಾಡದೆಯೇ ಓಡಿಸಬಹುದು
  • ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ
  • ಮಾರುಕಟ್ಟೆಯಲ್ಲಿ ಕ್ರಾಂತಿ ತರಬಹುದು ಈ ಹೊಸ ತಂತ್ರಜ್ಞಾನ
ಚಾರ್ಜ್ ಮಾಡಬೇಕಾದ ಅವಶ್ಯಕತೆಯಿಲ್ಲ, ಓಡಿಸುತ್ತಿದ್ದರೆ ತನ್ನಷ್ಟಕ್ಕೆ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್ title=
ಎಲೆಕ್ಟ್ರಿಕ್ ವಾಹನವು ಚಾರ್ಜ್ ಮಾಡದೆಯೇ ಓಡಿಸಬಹುದು (file photo)

ನವದೆಹಲಿ : ಒಂದೇ ಚಾರ್ಜ್‌ನಲ್ಲಿ ನೂರಾರು ಕಿಲೋಮೀಟರ್ ಓಡಿಸಬಹುದಾದ ಎಲೆಕ್ಟ್ರಿಕ್ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು (Electric scooter) ನೀವು ನೋಡಿರಬಹುದು. ಆದರೆ, 58 ವರ್ಷದ ವ್ಯಕ್ತಿಯೊಬ್ಬರ ಕಂಡು ಹಿಡಿದಿರುವ ಹೊಸ ತಂತ್ರಜ್ಞಾನ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಗೆ ಕಾರಣವಾಗಿದೆ. ಈ ತಂತ್ರಜ್ಞಾನದ ಪ್ರಕಾರ ಎಲೆಕ್ಟ್ರಿಕ್ ಬೈಕ್ ನ  (electric bike) ಒಂದು ಬ್ಯಾಟರಿಯಿಂದ ಮತ್ತೊಂದು ಬ್ಯಾಟರಿ ಚಾರ್ಜ್ ಆಗುತ್ತದೆ. ಹೀಗಾಗಿ ಈ ಬೈಕ್ ಅನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಪುದುಚೇರಿ ಮೂಲದ ವಿಜಯನ್ ಪ್ರೇಮಾನಂದ್ ಈ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. 

ಓಡಾಡುವಾಗಲೇ  ಚಾರ್ಜ್ ಆಗುತ್ತದೆ ಬೈಕ್ : 
ಪೇಟೆಂಟ್‌ಗಳು, ವಿನ್ಯಾಸಗಳು ಮತ್ತು ಟ್ರೇಡ್‌ಮಾರ್ಕ್‌ಗಳ ನಿಯಂತ್ರಕ ಜನರಲ್ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯಿಂದ ಪೇಟೆಂಟ್ ಅನ್ನು ಸಹ ಪಡೆದುಕೊಂಡಿದ್ದಾರೆ. , “ಇದು ತಂತ್ರಜ್ಞಾನದ ಆರಂಭವಾಗಿದೆ, ನಿಮ್ಮ ವಾಹನವನ್ನು ಚಾರ್ಜ್ ಮಾಡಲು ಯಾವುದೇ ಎಲೆಕ್ಟ್ರಿಕ್ ಗ್ರಿಡ್ ಅಗತ್ಯವಿಲ್ಲ. ಅಂತಹ ಇ-ಬೈಕ್ ಅನ್ನು ಬಳಸುವುದರ ಪ್ರಯೋಜನವೆಂದರೆ, ನೀವು ಚಾರ್ಜಿಂಗ್ ಸ್ಟೇಷನ್‌ಗೆ (Charging station) ಹೋಗಬೇಕಾಗಿಲ್ಲ. ಚಲಿಸುವಾಗ ಬೈಕು ಸ್ವತಃ ಚಾರ್ಜ್ ಆಗುತ್ತದೆ ಮತ್ತು ಈ ತಂತ್ರಜ್ಞಾನವು ವಿದ್ಯುತ್ ಅನ್ನು ಉಳಿಸುತ್ತದೆ ಎನ್ನುತ್ತಾರೆ ಪ್ರೇಮಾನಂದ್ ಹೇಳುತ್ತಾರೆ. 

ಇದನ್ನೂ ಓದಿ : Gram UJALA Program: ಕೇವಲ 10 ರೂ.ಗೆ ಎಲ್‌ಇಡಿ ಬಲ್ಬ್, 3 ವರ್ಷದೊಳಗೆ ಹಾಳಾದರೆ ಸಿಗುತ್ತೆ ಹೊಸ ಬಲ್ಬ್

ಚಾರ್ಜಿಂಗ್ ಸ್ಟೇಷನ್‌ನಲ್ಲಿ ಸಮಯ ವ್ಯರ್ಥ ಮಾಡಬೇಕಿಲ್ಲ : 
“ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಬಾರಿ ವಿದ್ಯುತ್ ಇರುವುದಿಲ್ಲ ಮತ್ತು ಸಾಕಷ್ಟು ವಿದ್ಯುತ್ ಸರಬರಾಜು ಕೂಡ ಲಭ್ಯವಿಲ್ಲ. ನಮ್ಮ ಎಲೆಕ್ಟ್ರಿಕ್ ಗ್ರಿಡ್ ಸಿಸ್ಟಮ್ (Electric station grid) ಬಳಕೆಯಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಇದನ್ನು ಹೊರತುಪಡಿಸಿ, ಚಾರ್ಜಿಂಗ್ ಸ್ಟೇಷನ್‌ನಲ್ಲಿ (Charging station) ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಇದು ಎಲೆಕ್ಟ್ರಿಕ್ ವಾಹನಗಳ (Electric vehicle) ಭವಿಷ್ಯ ಎಂದು ಪ್ರೇಮಾನಂದ್ ಹೇಳಿದ್ದಾರೆ. 

ಶಕ್ತಿಯ ಬಳಕೆ ತುಂಬಾ ಕಡಿಮೆ :
ಎರಡೂ ಬ್ಯಾಟರಿಗಳು ಪರಸ್ಪರ ಚಾರ್ಜ್ ಆಗುವಂತೆ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಎರಡೂ ಬ್ಯಾಟರಿಗಳು ಚಾರ್ಜ್ ಆಗುವುದರಿಂದ ಶಕ್ತಿಯ ಬಳಕೆ ತುಂಬಾ ಕಡಿಮೆಯಾಗಿದೆ. ಮಾಮೂಲಿ ಬ್ಯಾಟರಿಗಳು ಬಹುಬೇಗ ಪವರ್ ಖಾಲಿಯಾಗುತ್ತಿದ್ದು, ಇದನ್ನು ಹೋಗಲಾಡಿಸಲು ಒಂದರ ಹಿಂದೆ ಒಂದರಂತೆ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಕೆಲಸ ಮಾಡುವ ಐಡಿಯಾ ಸಿಕ್ಕಿದೆ. ಈ ತಂತ್ರಜ್ಞಾನವನ್ನು ಬಳಸಲು, ಎಲ್ಲಾ ಪ್ರಮುಖ ವಾಹನ ತಯಾರಕರನ್ನು ಕೋರಿದ್ದು, ಕಂಪನಿಗಳ ಪ್ರತಿಕ್ರಿಯೆಗಾಗಿ ಪ್ರೆಮಾನಂದ್ ಕಾಯುತ್ತಿದ್ದಾರೆ. ಸದ್ಯಕ್ಕೆ ಲಿಥಿಯಂ-ಐಯಾನ್ ಬ್ಯಾಟರಿ ಬಳಸಿದ್ದು, ಇದರಲ್ಲಿ ಫಾಸ್ಟ್ ಚಾರ್ಜಿಂಗ್ ಬ್ಯಾಟರಿಗಳನ್ನು (Fast charging battery) ಬಳಸಿದರೆ ಫಲಿತಾಂಶ ಇನ್ನಷ್ಟು ಉತ್ತಮವಾಗಲಿದೆ ಎಂದು ಪ್ರೇಮಾನಂದ್ ಹೇಳಿದ್ದಾರೆ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಹಳೆ ಪಿಂಚಣಿ ಯೋಜನೆಯ ಲಾಭ! ಸಿದ್ಧಪಡಿಸಿದ ಸರ್ಕಾರ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News