ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಗೊತ್ತಾ?

Highest Paid Bollywood Actress: ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿ ಮುಂದೆ ಬಾಲಿವುಡ್ ಬಿಕೋ ಎನ್ನುತ್ತಿದೆ. ನಟ, ನಟಿ, ನಿರ್ದೇಶಕ, ತಂತ್ರಜ್ಞ ಎಲ್ಲಾ ವಿಭಾಗಗಳಲ್ಲಿ ದಕ್ಷಿಣದವರು ದಯಾ ದಾಕ್ಷಿಣ್ಯ ಇಲ್ಲದೆ ಹಿಂದಿ ಮಂದಿಯನ್ನು ಹಿಂದಿಕ್ಕಿ ಮುಂದೋಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಕೂಡ ದಕ್ಷಿಣದವರೇ ಟಾಪ್ 1 ಅಂಡ್ 2 ಸ್ಥಾನದಲ್ಲಿದ್ದಾರೆ.

Written by - Yashaswini V | Last Updated : Dec 16, 2024, 11:53 AM IST
  • ರಶ್ಮಿಕಾ ಮಂದಣ್ಣ ‘ಅನಿಮಲ್ -2’ ಮತ್ತು ‘ಅನಿಮಲ್ -3’ ಸಿನಿಮಾಗಳಿಗೆ ಕಾಲ್ ಶೀಟ್ ಕೊಟ್ಟಿದ್ದು 16 ಕೋಟಿ ಚಾರ್ಜ್ ಮಾಡಿದ್ದಾರೆ. ಇದು ಬಾಲಿವುಡ್ ನಟಿ ಪಡೆಯುತ್ತಿರುವ ಅತಿ ಹೆಚ್ಚು ಸಂಭಾವನೆ.
  • ದೀಪಿಕಾ ಪಡುಕೋಣೆ. ಮಗು ಆಗಿದ್ದರಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅವರು ಒಂದು ಚಿತ್ರಕ್ಕೆ 15 ಕೋಟಿ ರುಪಾಯಿಗೆ ಡಿಮ್ಯಾಂಡ್ ಮಾಡ್ತಾರೆ ಅಂತಾ ಬಲ್ಲವರು ಹೇಳ್ತಾರೆ.
  • ನಂಬರ್ -3 ನಯನಾ ತಾರಾ ‘ಜವಾನ್’ ಸಿನಿಮಾಕ್ಕೆ 10 ಕೋಟಿ ಸಂಭಾವನೆ ಪಡೆದಿದ್ದರು. ಈಗ ಅವರು 12-13 ಕೋಟಿ ಕೇಳ್ತಾರಂತೆ.
ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಗೊತ್ತಾ?   title=

Highest Paid Bollywood Actress: ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿ ಮುಂದೆ ಬಾಲಿವುಡ್ ಬಿಕೋ ಎನ್ನುತ್ತಿದೆ. ನಟ, ನಟಿ, ನಿರ್ದೇಶಕ, ತಂತ್ರಜ್ಞ ಎಲ್ಲಾ ವಿಭಾಗಗಳಲ್ಲಿ ದಕ್ಷಿಣದವರು ಹಿಂದಿ ಮಂದಿಯನ್ನು ಹಿಂದಿಕ್ಕಿ ಮುಂದೋಡುತ್ತಿದ್ದಾರೆ. ಇನ್ನೂ ಖುಷಿಯಾಗುವ ವಿಷಯ ಏನೆಂದರೆ ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಕೂಡ ದಕ್ಷಿಣದವರೇ ಟಾಪ್ 1 ಅಂಡ್ 2 ಸ್ಥಾನದಲ್ಲಿದ್ದಾರೆ.

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಬೋಲ್ಡ್ ಬ್ಯೂಟಿ ಕರೀನಾ ಕಪೂರ್, ಹಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಹಾಲಿನಂಥ ಹುಡುಗಿ ತಮನ್ನಾ ಭಾಟಿಯಾ, ನೂಲಿನಂಥ ಚೆಲುವೆ ಕತ್ರಿನಾ ಕೈಫ್ ಇತ್ಯಾದಿ ಇತ್ಯಾದಿ ಸುರಸುಂದರಿಯರನ್ನು ಮೀರಿಸಿದ್ದಾರೆ ದಕ್ಷಿಣದ ಈ ಮೂವರು. ಅದರಲ್ಲಿ ಇಬ್ಬರು ಕನ್ನಡತಿಯರು. ನಂಬರ್ 1 ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ನಂಬರ್ 2 ಮಾಡೆಲಿಂಗ್ ಮೂಲಕ ಬಂದು ಕಮಾಲ್ ಮಾಡಿರುವ ದೀಪಿಕಾ ಪಡುಕೋಣೆ. ನಂಬರ್ 3 ನಯನ ಮನೋಹರ ಎನಿಸುವ ನಯನಾ ತಾರಾ. 

ಇದನ್ನೂ ಓದಿ- ಸಲ್ಮಾನ್ ಖಾನ್ ಲೈಫ್ ಹಾಳಾಗೋಕೆ ಈ ಸ್ಟಾರ್‌ ನಟಿ ಕಾರಣ...! ಯಾರಿಗೂ ತಿಳಿಯದ ಆ ಸತ್ಯ ಬಯಲು ಮಾಡಿದ್ರಾ ಸೊಹೈಲ್ ಖಾನ್?

ಸಂಭಾವನೆ ವಿಷಯಕ್ಕೆ ಬಂದರೆ ‘ಪುಷ್ಪಾ-2’ ಸಿಕ್ಕ ಸಿಕ್ಕ ಸಿನಿಮಾಗಳ ದಾಖಲೆಯನ್ನು ಮುರಿದು ಬಿಸಾಕುತ್ತಿದೆ. ಅದರ ನಾಯಕ ಅಲ್ಲು ಅರ್ಜುನ್ ಹೀರೋಗಳ ವಿಷಯದಲ್ಲಿ ಇದ್ದ ಬದ್ದ ದಾಖಲೆಯನ್ನೆಲ್ಲಾ ಗುದ್ದಿ ಗುದ್ದಿ ಪುಡಿ ಪುಡಿ ಮಾಡಿದ್ದಾರೆ.  ‘ಪುಷ್ಪಾ-2’ ನಾಯಕಿ ಶ್ರೀವಲ್ಲಿ ರಶ್ಮಿಕಾ ಮಂದಣ್ಣ ಅಂತೂ ಈವರೆಗೆ ಬಾಲಿವುಡ್ ಬೆಡಗಿಯರ ಹೆಸರಿನಲ್ಲಿದ್ದ ದಾಖಲೆಗಳನ್ನೆಲ್ಲಾ ಮೂರೇ ಸಿನಿಮಾದಲ್ಲಿ ಮುರಿದು ಹರಿದು ಬರಿದು ಮಾಡಿ ಸರಸರನೆ ತನ್ನ ಹೆಸರಿಗೆ ಬರೆದುಕೊಂಡುಬಿಟ್ಟಿದ್ದಾರೆ. 

ರಶ್ಮಿಕಾ ಮಂದಣ್ಣ ‘ಪುಷ್ಪಾ-2’ ಸಿನಿಮಾಗೆ 10 ಕೋಟಿ ಸಂಭಾವನೆ ಪಡೆದಿದ್ದರು. ‘ಅನಿಮಲ್’ ಚಿತ್ರಕ್ಕೂ 10 ಕೋಟಿ ತೆಗೆದುಕೊಂಡಿದ್ದರು. ಮುಂದೆ ಬರುತ್ತಿರುವ ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾದಲ್ಲಿ 13 ಕೋಟಿಗೆ ಏರಿತ್ತು. ಇದರ ನಂತರ ‘ಅನಿಮಲ್ -1’ ಮತ್ತು ‘ಅನಿಮಲ್ -2’ ಸಿನಿಮಾಗಳಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ. ಆ ಸಿನಿಮಾಗಳಿಗೆ ಬರೋಬ್ಬರಿ 16 ಕೋಟಿ ಚಾರ್ಜ್ ಮಾಡಿದ್ದಾರೆ. ಇದು ಬಾಲಿವುಡ್ ನಲ್ಲಿ ನಟಿಯೊಬ್ಬರು ಪಡೆಯುತ್ತಿರುವ ಅತಿ ಹೆಚ್ಚು ಸಂಭಾವನೆಯಾಗಿದೆ. 

ಇದನ್ನೂ ಓದಿ- ‘ಪುಷ್ಪ 2’ನಲ್ಲಿ ಶೇಖಾವತ್‌ನನ್ನೂ ಬದುಕಿಸಿದ್ದಾದರೂ ಯಾರು? ವೀಡಿಯೋ ಲೀಕ್‌ 'ಪುಷ್ಪ 3'ಗೆ ಇದೇ ಮುನ್ನುಡಿ

ಇನ್ನು ನಂಬರ್ -2 ದೀಪಿಕಾ ಪಡುಕೋಣೆ. ಮಗು ಆಗಿದ್ದರಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಅವರ ಸೌಂದರ್ಯ ಮಾಗಿಲ್ಲ. ಸಂಭಾವನೆಯೂ ಮಾಗಿಲ್ಲ. ಅವರು ಒಂದು ಚಿತ್ರಕ್ಕೆ 15 ಕೋಟಿ ರುಪಾಯಿಗೆ ಡಿಮ್ಯಾಂಡ್ ಮಾಡ್ತಾರೆ ಅಂತಾ ಬಲ್ಲವರು ಹೇಳ್ತಾರೆ.  ನಂಬರ್ -3 ನಯನಾ ತಾರಾ ‘ಜವಾನ್’ ಸಿನಿಮಾಕ್ಕೆ 10 ಕೋಟಿ ಸಂಭಾವನೆ ಪಡೆದಿದ್ದರು. ಈಗ ಅವರು ಕೂಡ 12-13 ಕೋಟಿ ಕೇಳ್ತಾರಂತೆ. ಅವರನ್ನ ಬಿಟ್ಟರೆ ಅತಿ ಹೆಚ್ಚು ಎಂದರೆ ಕರೀನಾ ಕಪೂರ್ 10-11 ತೇಗೋಬಹುದು ಎನ್ನುತ್ತದೆ ಬಾಲಿವುಡ್.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News