Income Tax Return : ಆಫ್‌ಲೈನ್ ನಲ್ಲಿಯೂ ಭರ್ತಿ ಮಾಡಬಹುದು ITR ಫಾರ್ಮ್ -1, 4

ಆದಾಯ ತೆರಿಗೆ ಇಲಾಖೆ ಈ ಆಫ್‌ಲೈನ್ ಸೌಲಭ್ಯವು ಐಟಿಆರ್ -1 ಮತ್ತು ಐಟಿಆರ್ -4 ಗೆ ಮಾತ್ರ ಉಪಯೋಗವಾಗಲಿದೆ. ಬಾಕಿ ಉಳಿದ ಎಲ್ಲಾ  ITR ಅನ್ನು ನಂತರ ಸೇರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.   

Written by - Ranjitha R K | Last Updated : Apr 6, 2021, 09:45 AM IST
  • ITR-1, 4 ಭರ್ತಿ ಮಾಡಲು ಆದಾಯ ತೆರಿಗೆ ಇಲಾಖೆ ಆಫ್‌ಲೈನ್ ಸೌಲಭ್ಯ ಪ್ರಾರಂಭಿಸಿದೆ
  • ಡೇಟಾವನ್ನು ಸ್ಟೋರ್ ಮಾಡಲು ಅತ್ಯಂತ ಸರಳ ಫಾರ್ಮ್ಯಾಟ್ ನೀಡಲಾಗಿದೆ.
  • ರಿಟರ್ನ್ಸ್ ಸಲ್ಲಿಸುವ ವಿಷಯದಲ್ಲಿ ಅತ್ಯಂತ ಸರಳವಾಗಿದೆ ಹೊಸ ಸೌಲಭ್ಯ
Income Tax Return  : ಆಫ್‌ಲೈನ್ ನಲ್ಲಿಯೂ ಭರ್ತಿ ಮಾಡಬಹುದು ITR ಫಾರ್ಮ್ -1, 4   title=
ITR-1, 4 ಭರ್ತಿ ಮಾಡಲು ಇಲಾಖೆ ಆಫ್‌ಲೈನ್ ಸೌಲಭ್ಯ (File photo)

ನವದೆಹಲಿ: New Income Tax Return Form: 2020-21ನೇ ಸಾಲಿನ ತೆರಿಗೆದಾರರ ಇನ್ಕಮ್ ಟ್ಯಾಕ್ಸ್  ರಿಟರ್ನ್ ಫಾರ್ಮ್ -1 ಮತ್ತು 4 ಅನ್ನು ಭರ್ತಿ ಮಾಡಲು ಆದಾಯ ತೆರಿಗೆ ಇಲಾಖೆ ಆಫ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಆಫ್‌ಲೈನ್ ಸೌಲಭ್ಯವು ಇ-ಫೈಲಿಂಗ್ ಪೋರ್ಟಲ್‌ನಲ್ಲಿದೆ.  ಇದು ಹೊಸ ತಂತ್ರಜ್ಞಾನ JSON (JavaScript Object Notation) ಅನ್ನು ಆಧರಿಸಿದೆ. ಇದರಲ್ಲಿ ಡೇಟಾವನ್ನು ಸ್ಟೋರ್ ಮಾಡಲು ಇದರಲ್ಲಿ ಅತ್ಯಂತ ಸರಳ ಫಾರ್ಮ್ಯಾಟ್ ನೀಡಲಾಗಿದೆ. ಈ ಆಫ್‌ಲೈನ್ (Offline) ಸೌಲಭ್ಯವನ್ನು  ವಿಂಡೋಸ್ 7 ಅಥವಾ ನಂತರದ ವರ್ಷನ್ ಇರುವ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. 

ITR-1, 4  ಕ್ಕೆ ಸಿಗಲಿದೆ ಆಫ್‌ಲೈನ್ ಸೌಲಭ್ಯ :
ಆದಾಯ ತೆರಿಗೆ (Income Tax) ಇಲಾಖೆ ಈ ಆಫ್‌ಲೈನ್ ಸೌಲಭ್ಯವು ಐಟಿಆರ್ -1 ಮತ್ತು ಐಟಿಆರ್ -4 ಗೆ ಮಾತ್ರ ಉಪಯೋಗವಾಗಲಿದೆ. ಬಾಕಿ ಉಳಿದ ಎಲ್ಲಾ  ITR ಅನ್ನು ನಂತರ ಸೇರಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಕಡಿಮೆ ಮತ್ತು ಮಧ್ಯಮ ಆದಾಯ ತೆರಿಗೆದಾರರು  ಐಟಿಆರ್ ಫಾರ್ಮ್ -1 ಮತ್ತು ಐಟಿಆರ್ ಫಾರ್ಮ್ -4 ಅನ್ನೇ ಹೆಚ್ಚಾಗಿ ಬಳಸುತ್ತಾರೆ.  ವಾರ್ಷಿಕ ಆದಾಯ 50 ಲಕ್ಷ ರೂ.ಗಳಷ್ಟು ಇರುವವರು ಐಟಿಆರ್ -1  ಅನ್ನು ಬಳಸುತ್ತಾರೆ.  

ಇದನ್ನೂ ಓದಿ : How To Check PF Balance: ಕೇವಲ ಮಿಸ್ಡ್ ಕಾಲ್ ಮೂಲಕ ತಿಳಿದುಕೊಳ್ಳಬಹುದು PF Balance

ಯಾರಿಗಾಗಿ  ಬಿಡುಗಡೆಯಾಯಿತು ಆಫ್‌ಲೈನ್ ಐಟಿಆರ್ :
ಐಟಿಆರ್ -4 ವ್ಯಕ್ತಿ ,  ಅಥವಾ ಹಿಂದೂ ಅವಿಭಜಿತ ಕುಟುಂಬಗಳು(HUFs) ಮತ್ತು ಕಂಪನಿಗಳಿಗೆ ಸೇರಿದಾಗಿದೆ. ವ್ಯಾಪಾರ ವ್ಯವಹಾರ ನಡೆಸುತ್ತಿದ್ದು, ಯಾರ  ಒಟ್ಟು ವಾರ್ಷಿಕ ಆದಾಯ 50 ಲಕ್ಷ ರೂಗಳಾಗಿರುತ್ತದೆಯೋ ಅವರು ಐಟಿಆರ್ -4 ಅನ್ನು ಬಳಸುತ್ತಾರೆ.  ಆದಾಯ ತೆರಿಗೆ ರಿಟರ್ನ್ಸ್ (Income Tax Return) ಸಲ್ಲಿಸುವವರು ಇ-ಫೈಲಿಂಗ್ ಪೋರ್ಟಲ್‌ನಿಂದ ಡೇಟಾವನ್ನುಇಂಪೋರ್ಟ್  ಮಾಡಿಕೊಳ್ಳಬಹುದು ಮತ್ತು ಅದನ್ನು ಮೊದಲೇ  ಭರ್ತಿ ಮಾಡಬಹುದು. ಇ-ಫೈಲಿಂಗ್ (E-filling)ಪೋರ್ಟಲ್ ಇನ್ನೂ ಪ್ರಾರಂಭವಾಗಿಲ್ಲ. ಆದರೆ ತೆರಿಗೆದಾರರು ತಮ್ಮ ಡೇಟಾವನ್ನು (Data) ಭರ್ತಿ ಮಾಡಿ ಸೇವ್ ಮಾಡಿ ಇಟ್ಟುಕೊಳ್ಳಬಹುದು.  ಪೋರ್ಟಲ್ ಪ್ರಾರಂಭವಾದಾಗ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು ಎಂದು ಐಟಿ ಇಲಾಖೆ ತಿಳಿಸಿದೆ. 

ಹೊಸ ಐಟಿಆರ್ -1,4 ಫಾರ್ಮ್ ಉಪಯೋಗ ಬಹಳ ಸರಳ : 
ರಿಟರ್ನ್ಸ್ ಸಲ್ಲಿಸುವ ವಿಷಯದಲ್ಲಿ ಹೊಸ ಸೌಲಭ್ಯವು ಅತ್ಯಂತ ಸರಳವಾಗಿದೆ ಎನ್ನಲಾಗಿದೆ. ಬಳಕೆದಾರರು ಯಾವುದೇ ಗೊಂದಲವಿಲ್ಲದೆ ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ. ಮಾರ್ಗದರ್ಶಿ ಟಿಪ್ಪಣಿಗಳು, ಸುತ್ತೋಲೆ ಮತ್ತು ಕಾನೂನು ನಿಬಂಧನೆಗಳನ್ನು ಸಹ ಇದರಲ್ಲಿ ಉಲ್ಲೇಖಿಸಲಾಗಿದೆ.  ಇದರಿಂದ ತೆರಿಗೆದಾರನು ಯಾವುದೇ ತೊಂದರೆಯಿಲ್ಲದೆ  ರಿಟರ್ನ್ (Return)  ಅನ್ನು ಸಲ್ಲಿಸಬಹುದು. ರ

ಇದನ್ನೂ ಓದಿ : ATMನಿಂದ ಹಣ ವಿತ್ ಡ್ರಾ ಮಾಡಿದಾಗ ಹರಿದ ನೋಟು ಸಿಕ್ಕಿದರೆ ಚಿಂತೆಬಿಟ್ಟು ಈ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News