ʻಪುಷ್ಪಾ-2ʼ, ಬಾಹುಬಲಿ ಇದ್ಯಾವುದೂ ಅಲ್ಲ.. 25 ಕೋಟಿಗೂ ಹೆಚ್ಚು ಟಿಕೆಟ್‌ ಸೇಲ್‌ ಆಗಿದ್ದ ಏಕೈಕ ಭಾರತೀಯ ಸಿನಿಮಾ ಇದು

Sholay: ಅಲ್ಲು ಅರ್ಜುನ್ ನಟನೆಯ "ಪುಷ್ಪ 2" ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಚಿದ್ರ ಚಿದ್ರ ಮಾಡಿ ಮುನ್ನುಗ್ಗುತ್ತಿದೆ. ಕೇವಲ ಒಂದೇ ವಾರದಲ್ಲಿ ಜಾಗತಿಕವಾಗಿ ಈ ಸಿನಿಮಾ 1000 ಕೋಟಿ ರೂ. ಗಳಿಸುವ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸುತ್ತಿದೆ. ಆದರೆ, ಅಲ್ಲು ಅರ್ಜುನ್ ಅವರ ಈ ಹಿಟ್ ಸಿನಿಮಾವನ್ನೆ ಹಿಂದಿಕ್ಕುವಂತಹ ಸಿನಿಮಾ ಇನ್ನೊಂದು ಇದೆ, ಈ ಸಿನಿಮಾ ದಶಕಗಳಿಂದಲೂ ಪ್ರೇಕ್ಷಕರನ್ನು ಆಕರ್ಷಿಸಿರುವುದಷ್ಟೆ ಅಲ್ಲದೆ ಇಂದಿಗೂ ಕೂಡ ಈ ಸಿನಿಮಾ ಅಷ್ಟೆ ವಿಶೇಷತೆಯನ್ನು ಹೊಂದಿದೆ.  

Written by - Zee Kannada News Desk | Last Updated : Dec 24, 2024, 12:48 PM IST
  • ಅಲ್ಲು ಅರ್ಜುನ್ ನಟನೆಯ "ಪುಷ್ಪ 2" ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಚಿದ್ರ ಚಿದ್ರ ಮಾಡಿ ಮುನ್ನುಗ್ಗುತ್ತಿದೆ.
  • ಅಲ್ಲು ಅರ್ಜುನ್ ಅವರ ಈ ಹಿಟ್ ಸಿನಿಮಾವನ್ನೆ ಹಿಂದಿಕ್ಕುವಂತಹ ಸಿನಿಮಾ ಇನ್ನೊಂದು ಇದೆ.
  • ಒಟ್ಟು 25 ಕೋಟಿ ಟಿಕೆಟ್ ಮಾರಾಟ ಮಾಡುವ ಮೂಲಕ "ಶೋಲೆ" ಸಿನಿಮಾ ಜಾಗತಿಕವಾಗಿ ದಿಟ್ಟ ಗುರುತು ಮೂಡಿಸಿತು.
ʻಪುಷ್ಪಾ-2ʼ, ಬಾಹುಬಲಿ ಇದ್ಯಾವುದೂ ಅಲ್ಲ.. 25 ಕೋಟಿಗೂ ಹೆಚ್ಚು ಟಿಕೆಟ್‌ ಸೇಲ್‌ ಆಗಿದ್ದ ಏಕೈಕ ಭಾರತೀಯ ಸಿನಿಮಾ ಇದು title=

Sholay: ಅಲ್ಲು ಅರ್ಜುನ್ ನಟನೆಯ "ಪುಷ್ಪ 2" ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಚಿದ್ರ ಚಿದ್ರ ಮಾಡಿ ಮುನ್ನುಗ್ಗುತ್ತಿದೆ. ಕೇವಲ ಒಂದೇ ವಾರದಲ್ಲಿ ಜಾಗತಿಕವಾಗಿ ಈ ಸಿನಿಮಾ 1000 ಕೋಟಿ ರೂ. ಗಳಿಸುವ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸುತ್ತಿದೆ. ಆದರೆ, ಅಲ್ಲು ಅರ್ಜುನ್ ಅವರ ಈ ಹಿಟ್ ಸಿನಿಮಾವನ್ನೆ ಹಿಂದಿಕ್ಕುವಂತಹ ಸಿನಿಮಾ ಇನ್ನೊಂದು ಇದೆ, ಈ ಸಿನಿಮಾ ದಶಕಗಳಿಂದಲೂ ಪ್ರೇಕ್ಷಕರನ್ನು ಆಕರ್ಷಿಸಿರುವುದಷ್ಟೆ ಅಲ್ಲದೆ ಇಂದಿಗೂ ಕೂಡ ಈ ಸಿನಿಮಾ ಅಷ್ಟೆ ವಿಶೇಷತೆಯನ್ನು ಹೊಂದಿದೆ.

ಅಮಿತಾಭ್ ಬಚ್ಚನ್, ಧರ್ಮೇಂದ್ರ, ಹೇಮಾ ಮಾಲಿನಿ ಸೇರಿದಂತೆ ಹಲವು ದೊಡ್ಡ ತಾರೆಯರನ್ನು ಒಳಗೊಂಡಿದ್ದ ಈ ಸಿನಿಮಾ ಪುಷ್ಪಾ-2 ಸಿನಿಮಾವನ್ನು ಹಿಂದಿಕ್ಕುತ್ತದೆ. ಹೌದು, ಇಂದು ನಾವು ನಿಮಗೆ ಹೇಳಲು ಹೊರಟಿರುವ ಆ ಸಿನಿಮಾ ಬೇರ್ಯಾವುದು ಅಲ್ಲ ಹೊರೆತಾಗಿ, ರಮೇಶ್ ಸಿಪ್ಪಿ ನಿರ್ದೇಶನದ "ಶೋಲೆ" ಸಿನಿಮಾ. ಈ ಐಕಾನಿಕ್ ಸಿನಿಮಾ ತನ್ನ ಯುಗದಲ್ಲಿ ದೊಡ್ಡ ಯಶಸ್ಸು ಸಾಧಿಸಿತ್ತು. ಆದರೆ, ಅನೇಕರಿಗೆ ತಿಳಿಯದ ವಿಷಯವೇನೆಂದರೆ, ಈ ಸಿನಿಮಾ ಬಿಡುಗಡೆಯಾದ ಒಡನೆ ಹಿಟ್‌ ಆಗಿದ್ದು ಅಲ್ಲ, ಸಮಯ ಕಳೆದಂತೆ ಹಿಟ್‌ ಕಂಡ ಸಿನಿಮಾ ಇದೆ.  

1975 ಆಗಸ್ಟ್ 15ರಂದು ಬಿಡುಗಡೆಯಾದ "ಶೋಲೆ" ಆರು ದಶಕಗಳ ಯಶಸ್ಸಿಗೆ ಸಮೀಪದಲ್ಲಿದೆ. ಕಾಲಕಾಲಾಂತರ ಕಳೆದರೂ ಈ ಚಿತ್ರದ ಪ್ರತಿಯೊಂದು ದೃಶ್ಯ, ಡೈಲಾಗ್ಸ್‌, ಹಾಡುಗಳು ಮತ್ತು ಪಾತ್ರಗಳು ಪ್ರೇಕ್ಷಕರ ಹೃದಯದಲ್ಲಿ ಮಾಸದೆ ಇಂದಿಗೂ ಜೀವಂತವಾಗಿವೆ.  

ಪ್ರಾರಂಭದಲ್ಲಿ, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿಲ್ಲ, ಸಿನಿಮಾದ ವಿಮರ್ಶಕರು ಕೂಡ ಈ ಸಿನಿಮಾದ ಕುರಿತು ನೆಗೆಟಿವ್‌ ರಿವ್ಯೂ ಕೊಟ್ಟಿದ್ದರು, ಇದನ್ನು ನೋಡಿ ಈ ಸಿನಿಮಾ ಪಕ್ಕ ಫ್ಲಾಪ್‌ ಆಗುತ್ತೆ ಎಂದು ಊಹಿಸಲಾಗಿತ್ತು. ಆದರೆ, ನಂತರ ಆಗಿದ್ದೆ ಬೇರೆ. ಸಮಯ ಕಲೆಯುತ್ತಿದ್ದಂತೆ ಈ ಸಿನಿಮಾದ ಪಾತ್ರಗಳನ್ನು ಜನರು ಪ್ರೀತಿಸಲು ಆರಂಭಿಸಿದರು, ಚಿತ್ರದ ಗೀತೆಗಳು ಹಾಗೂ ಪ್ರತಿಯೊಂದು ಡೈಲಾಗ್‌ ಕೂಡ ಸದ್ದು ಮಾಡಲು ಶುರು ಮಾಡಿತು. ಚಿತ್ರಮಂದಿರಗಳಿಗೆ ಜನರನ್ನು ಆಕರ್ಶಿಸುವಲ್ಲಿ ಚಿತ್ರ ಯಶಸ್ವಿಯಾಯಿತು. "ಕಿತ್ನೇ ಆದ್ಮೀ ಥೇ?" ಎಂಬ ಗಬ್ಬರ್ ಸಿಂಗ್‌ನ ಪ್ರಸಿದ್ಧ ಡೈಲಾಗ್ ಪ್ರೇಕ್ಷಕರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿಬಿಟ್ಟಿತು.   

"ಶೋಲೆ" ಚಲನಚಿತ್ರಮಂದಿರಗಳಲ್ಲಿ ಆರು ವರ್ಷಗಳ ಕಾಲ ಉತ್ತಮ ಪ್ರದರ್ಶನವನ್ನು ಪಡೆದುಕೊಂಡಿತು.  ಭಾರತದಲ್ಲಿ ಮೊದಲ ಭಾರಿ ಬಿಡುಗಡೆಯಾಗಿದ್ದಾಗ ಈ ಸಿನಿಮಾ ಸುಮಾರು 15 ಕೋಟಿಗೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು. ಪುನಃ ಬಿಡುಗಡೆಯಾದಾಗ, ಈ ಸಿನಿಮಾ 3 ಕೋಟಿ ಟಿಕೆಟ್‌ಗಳ ಮಾರಾಟ ಮಾಡಿ ದಾಕಲೆ ಬರೆದಿತ್ತು.

ಭಾರತದಲ್ಲಿ ಅಷ್ಟೆ ಅಲ್ಲದೆ ʻಶೋಲೆʼ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಶುರು ಮಾಡಿತ್ತು. ವಿಶೇಷವಾಗಿ ರಷ್ಯಾದಲ್ಲಿ ಈ ಸಿನಿಮಾ ಜನಪ್ರಿಯವಾಯಿತು, ಅಲ್ಲಿ 6 ಕೋಟಿ ಟಿಕೆಟ್ ಮಾರಾಟಗೊಂಡಿತು. ಇದಲ್ಲದೆ, ಯೂರೋಪ್, ಉತ್ತರ ಅಮೇರಿಕಾ, ಮತ್ತು ಮಧ್ಯಪ್ರಾಚ್ಯದಲ್ಲಿ ಇದಕ್ಕೆ ಅಪಾರ ಪ್ರೀತಿ ದೊರೆಯಿತು. ಒಟ್ಟು 25 ಕೋಟಿ ಟಿಕೆಟ್ ಮಾರಾಟ ಮಾಡುವ ಮೂಲಕ "ಶೋಲೆ" ಸಿನಿಮಾ ಜಾಗತಿಕವಾಗಿ ದಿಟ್ಟ ಗುರುತು ಮೂಡಿಸಿತು. ಇನ್ನೂ, ಈ ಮುಂಚೆ ತೆರೆ ಕಂಡ "ಬಾಹುಬಲಿ 2" ಮತ್ತು "RRR" ಅಷ್ಟೆ ಅಲ್ಲ ಪುಷ್ಪಾ-2 ಸಿನಿಮಾದಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳು ಕೂಡ ʻಶೋಲೆʼ ಸಿನಿಮಾದ ದಾಖಲೆಗಳನ್ನು ಇಂದಿವರೆಗೂ ಮುರಿಯಲು ಸಾಧ್ಯವಾಗಲೇ ಇಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News