Petrol Diesel Price may 11th: ಇಂದು ನಿಮ್ಮ ನಗರದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಎಷ್ಟಿದೆ ತಿಳಿಯಿರಿ

Petrol Diesel Price may 11th : ಕಳೆದ 34 ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಬಾರಿ ಏಪ್ರಿಲ್ 6 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 80 ಪೈಸೆ ಏರಿಕೆಯಾಗಿತ್ತು. ನಿಮ್ಮ ನಗರದಲ್ಲಿ ಇಂದಿನ ಬೆಲೆ ಎಷ್ಟು ಎಂದು ತಿಳಿಯಿರಿ.

Written by - Ranjitha R K | Last Updated : May 11, 2022, 08:07 AM IST
  • ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ ಕಚ್ಚಾ ತೈಲ ಬೆಲೆ
  • ದೇಶದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಸ್ಥಿರ
  • ನಿಮ್ಮ ನಗರದ ಇಂದಿನ ಬೆಲೆ ತಿಳಿಯಿರಿ
 Petrol Diesel Price may 11th: ಇಂದು  ನಿಮ್ಮ ನಗರದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಎಷ್ಟಿದೆ ತಿಳಿಯಿರಿ  title=
Gold Price Today (file photo)

Petrol Diesel Price may 11th : ಒಂದು ತಿಂಗಳಿಗೂ ಹೆಚ್ಚು ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಮೇ 11 ರಂದು ಅಂದರೆ ಇಂದು ಕೂಡಾ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮತ್ತೊಂದೆಡೆ, ಸ್ವಲ್ಪ ಇಳಿಕೆಯೊಂದಿಗೆ, WTI ಕ್ರೂಡ್ ಪ್ರತಿ ಬ್ಯಾರೆಲ್‌ಗೆ 99.48 ಡಾಲರ್ ಮತ್ತು ಬ್ರೆಂಟ್ ಕಚ್ಚಾ ಪ್ರತಿ ಬ್ಯಾರೆಲ್‌ಗೆ  102.2ಡಾಲರ್ ಮಟ್ಟವನ್ನು ತಲುಪಿದೆ.
 
ಐದು ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಸುಮಾರು 10 ದಿನಗಳ ನಂತರ ತೈಲ ಕಂಪನಿಗಳು ತೈಲ ಬೆಲೆಗಳನ್ನು ಹೆಚ್ಚಿಸಲು ಪ್ರಾರಂಭಿಸಿದವು. ಮಾರ್ಚ್ 22 ರಂದು ಕಂಪನಿಗಳು ಮೊದಲು ದರಗಳನ್ನು ಹೆಚ್ಚಿಸಿದವು. ಇದಾದ ಬಳಿಕ ಕಂಪನಿಗಳು ಮಾರ್ಚ್ 22ರಿಂದ ಏಪ್ರಿಲ್ 6ರವರೆಗೆ ಪ್ರತಿ ಲೀಟರ್ ಗೆ 10 ರೂ. ಯಷ್ಟು ಹೆಚ್ಚಳವಾಗಿದೆ.  

ಇದನ್ನೂ ಓದಿ : Arecanut Today Price: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ ಎಷ್ಟಿದೆ..?

 ಪ್ರಮುಖ ನಗರದಲ್ಲಿ ತೈಲ ಬೆಲೆ : 
- ದೆಹಲಿ ಪೆಟ್ರೋಲ್ 105.41 ರೂ  ಮತ್ತು ಡೀಸೆಲ್  96.67 ರೂ ಪ್ರತಿ ಲೀಟರ್
- ಮುಂಬೈ ಪೆಟ್ರೋಲ್ 120.51 ರೂ ಮತ್ತು ಡೀಸೆಲ್  104.77 ರೂ
ಬೆಂಗಳೂರು   ಪೆಟ್ರೋಲ್ 111.09  ರೂ ಮತ್ತು ಡೀಸೆಲ್  94.79   ರೂ
-ಚೆನ್ನೈ  ಪೆಟ್ರೋಲ್  110.85 ರೂ ಮತ್ತು ಡೀಸೆಲ್ 100. 94 ರೂ 
- ಕೋಲ್ಕತ್ತಾ ಪೆಟ್ರೋಲ್  115.12 ರೂ. ಡೀಸೆಲ್ ಲೀಟರ್‌ಗೆ 99.83 ರೂ
- ಲಕ್ನೋದಲ್ಲಿ ಪೆಟ್ರೋಲ್  105.25 ರೂ ಮತ್ತು ಡೀಸೆಲ್ ಲೀಟರ್‌ಗೆ  96.83 ರೂ
- ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ 91.45 ರೂ  ಮತ್ತು ಡೀಸೆಲ್ ಲೀಟರ್‌ಗೆ  85.83 ರೂ
- ಪಾಟ್ನಾದಲ್ಲಿ ಪೆಟ್ರೋಲ್  116.23 ರೂ ಮತ್ತು ಡೀಸೆಲ್ ಲೀಟರ್‌ಗೆ 101 ರೂ.

ಇದನ್ನೂ ಓದಿ  : ಪಡಿತರ ಚೀಟಿ ನಿಮಯಗಳಲ್ಲಿ ಮೇಜರ್ ಬದಲಾವಣೆ.! ಅಂಗಡಿಗಳಿಂದ ಪಡಿತರ ತೆಗೆದುಕೊಳ್ಳುವ ಮುನ್ನ ಇದು ನಿಮಗೆ ತಿಳಿದಿರಲಿ
    
SMS ಮೂಲಕ ಕೂಡಾ ದರ  ಪರಿಶೀಲಿಸಬಹುದು :

ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News