ನವದೆಹಲಿ : PM Kisan Samman Yojana: ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಹ ಫಲಾನುಭವಿಗಳಾಗಿದ್ದರೆ, ಇದರ ಲಾಭ ಪಡೆಯಲು ಇಂದು ಕೊನೆಯ ಅವಕಾಶವಾಗಿದೆ. ಇದರಲ್ಲಿ ಫಲಾನುಭವಿಗಳು 4000 ರೂ. ಗಳನ್ನು ಪಡೆಯಲಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ (PM Kisan Yojana) ಹಣ ಪಡೆಯಬೇಕಾದರೆ, ಇಂದೇ ನೋಂದಾಯಿಸಿಕೊಳ್ಳಿ. ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಇಂದು ಕೊನೆಯ ಅವಕಾಶ. ಈ ಅವಕಾಶವನ್ನು ತಪ್ಪಿಸಿಕೊಂಡರೆ, PM ಕಿಸಾನ್ ಯೋಜನೆಯಡಿಯಲ್ಲಿ 4000 ರೂಪಾಯಿಗಳನ್ನು ಪಡೆಯುವುದಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Samman Yojana), ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ 6000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ (bank account) 2000 ರೂ.ಗಳಂತೆ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಸರ್ಕಾರ ಇದುವರೆಗೆ 9 ಕಂತುಗಳನ್ನು ಬಿಡುಗಡೆ ಮಾಡಿದೆ. 10 ನೇ ಕಂತನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ : ಡೆಬಿಟ್-ಕ್ರೆಡಿಟ್‌ಗೆ ಸಂಬಂಧಿಸಿದ ನಿಯಮ ಬದಲಾಯಿಸಿದ ಆರ್‌ಬಿಐ, ನಾಳೆಯಿಂದ ಎಲ್ಲಾ ಗ್ರಾಹಕರಿಗೆ ಅನ್ವಯ
ಮುಂದಿನ ಕಂತಿಗೆ ನೋಂದಾಯಿಸಲು ಕೊನೆಯ ದಿನಾಂಕ ಅಂದರೆ ಇಂದು. ನೀವು ಸಲ್ಲಿಸಿದ ಅರ್ಜಿ ಸ್ವೀಕಾರವಾದರೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಎರಡು ಸಾವಿರ ರೂಪಾಯಿ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಸೇರುತ್ತದೆ. ಇದರ ನಂತರ, ಡಿಸೆಂಬರ್‌ನಲ್ಲಿ ಕೂಡಾ ನಿಮ್ಮ ಬ್ಯಾಂಕ್ ಖಾತೆಗೆ 2000 ರೂಗಳು ಬರುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಈ ಆರ್ಥಿಕ ವರ್ಷದ ಎರಡನೇ ಕಂತಿನ ಅಡಿಯಲ್ಲಿ, ರೂ. 2000 ಮೊತ್ತವು 10.27 ಕೋಟಿ ರೈತರ ಬ್ಯಾಂಕ್ ಖಾತೆಗಳನ್ನು ತಲುಪಿದೆ. ಈ ಯೋಜನೆಯಡಿ ಇದುವರೆಗೆ 12.14 ಕೋಟಿ ರೈತ ಕುಟುಂಬಗಳನ್ನು ಸಂಪರ್ಕಿಸಲಾಗಿದೆ. ನವೆಂಬರ್ 30 ರವರೆಗೆ, ಉಳಿದ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ.
ಇದನ್ನೂ ಓದಿ : RBI ಹೊಸ ನಿಯಮಗಳನ್ನ ಅನುಸರಿಸದಿದ್ದರೆ ಬಂದ್ ಆಗಲಿವೆ ನಿಮ್ಮ Netflix, Amazon Prime ಮತ್ತು Hotstar ಚಂದಾದಾರಿಕೆ
ಈ ಯೋಜನೆಯಡಿ, ಕೇವಲ 2 ಹೆಕ್ಟೇರ್‌ಗಳವರೆಗೆ ಅಂದರೆ 5 ಎಕರೆಗಳಷ್ಟು ಕೃಷಿ ಭೂಮಿಯನ್ನು ಹೊಂದಿರುವ ರೈತರು ಮಾತ್ರ ಲಾಭವನ್ನು ಪಡೆಯುತ್ತಾರೆ. ಆದಾಯ ತೆರಿಗೆ ರಿಟರ್ನ್ (IT return) ಸಲ್ಲಿಸುವವರನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದಲ್ಲದೇ, ವಕೀಲರು, ವೈದ್ಯರು, ಸಿಎಗಳು ಕೂಡ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಾಯಿಸಿಕೊಳ್ಳುವುದು ತುಂಬಾ ಸುಲಭ. ನೀವು ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ (Online) ನೋಂದಾಯಿಸಿಕೊಳ್ಳಬಹುದು. ಇದರ ಹೊರತಾಗಿ, ನೀವು ಈ ಯೋಜನೆಗೆ ಪಂಚಾಯತ್ ಕಾರ್ಯದರ್ಶಿ ಅಥವಾ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರದ (CSC) ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಮೊದಲು
-PM ಕಿಸಾನ್ Pmkisan.Gov.In ವೆಬ್‌ಸೈಟ್‌ಗೆ ಭೇಟಿ ನೀಡಿ.
-ಇಲ್ಲಿ FARMER CORNERSಗೆ ಹೋಗುವ ಮೂಲಕ, New Farmer Registration ಮೇಲೆ ಕ್ಲಿಕ್ ಮಾಡಿ.
-ಇದರ ನಂತರ Aadhaar ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಫಾರ್ಮ್ ಅನ್ನು ಭರ್ತಿ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.