Pension Scheme:ನಿತ್ಯ ಕೇವಲ 7 ರೂ. ಉಳಿತಾಯ ಮಾಡಿ 60 ಸಾವಿರ ಪೆನ್ಷನ್ ಜೊತೆಗೆ ತೆರಿಗೆ ಉಳಿತಾಯ, ಯಾವುದು ಈ ಯೋಜನೆ?

Atal Pension Scheme: ನೀವೂ ಕೂಡ ನಿಮ್ಮ ವ್ರುದ್ಧಾಪ್ಯವನ್ನು ಸುಭದ್ರಗೊಳಿಸಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಕೇವಲ ಒಂದು ಒಂದು ಸಣ್ಣ ಪ್ರಮಾಣದ ಹೂಡಿಕೆಯ ಮೂಲಕ ನೀವು ವಾರ್ಷಿಕ 60 ಸಾವಿರ ರೂಪಾಯಿ ಪಿಂಚಣಿ ಪಡೆಯುವ ಸರ್ಕಾರಿ ಯೋಜನೆಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.  

Written by - Nitin Tabib | Last Updated : Jun 12, 2022, 06:48 PM IST
  • ಈ ಯೋಜನೆಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ. ಈ ಯೋಜನೆಯಲ್ಲಿ, ನೀವು ಪ್ರತಿದಿನ ರೂ 7 ಠೇವಣಿ ಮಾಡಿದರೆ, ನಂತರ ನೀವು ತಿಂಗಳಿಗೆ ರೂ 5000 ಪಿಂಚಣಿ ಪಡೆಯಬಹುದು.
  • ಇದೇ ವೇಳೆ, ನೀವು ಪ್ರತಿ ತಿಂಗಳು 42 ರೂಪಾಯಿಗಳನ್ನು ಇದರಲ್ಲಿ ಠೇವಣಿ ಮಾಡಿದರೆ, ನಿಮಗೆ ಮಾಸಿಕ 1000 ರೂಪಾಯಿ ಪಿಂಚಣಿ ಸಿಗುತ್ತದೆ.
Pension Scheme:ನಿತ್ಯ ಕೇವಲ 7 ರೂ. ಉಳಿತಾಯ ಮಾಡಿ 60 ಸಾವಿರ ಪೆನ್ಷನ್ ಜೊತೆಗೆ ತೆರಿಗೆ ಉಳಿತಾಯ, ಯಾವುದು ಈ ಯೋಜನೆ? title=
Atal Pension Yojana

Atal Pension Yojana: ಹಣದುಬ್ಬರದ ಈ ಯುಗದಲ್ಲಿ ಪ್ರತಿಯೊಬ್ಬರೂ ವೃದ್ಧಾಪ್ಯದ ಖರ್ಚುಗಳ ಬಗ್ಗೆ ಚಿಂತಿಸುತ್ತಾರೆ. ನೀವೂ ನಿಮ್ಮ ವೃದ್ಧಾಪ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಇಂದು ನಾವು ಇಲ್ಲಿ ನಿಮಗೆ ಹೇಳುತ್ತಿರುವುದು ಒಂದು ಸರ್ಕಾರಿ ಯೋಜನೆಯಾಗಿದೆ, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಾಸಿಕ ಪಿಂಚಣಿ ಪಡೆಯಬಹುದು. ಈ ಯೋಜನೆಯ ಹೆಸರು ಅಟಲ್ ಪಿಂಚಣಿ ಯೋಜನೆ (APY). ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಅಟಲ್ ಪಿಂಚಣಿ ಯೋಜನೆ ಎಂದರೇನು?
ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಗಿದೆ. ಮೊದಲು ಈ ಯೋಜನೆಯನ್ನು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಪ್ರಾರಂಭಿಸಲಾಗಿತ್ತು, ಆದರೆ ಇಂದು 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ಠೇವಣಿದಾರರು 60 ವರ್ಷಗಳ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ. ಈ ಯೋಜನೆಯಡಿ, ನೀವು ಕನಿಷ್ಟ 1,000 ರೂ., ರೂ. 2000, ರೂ. 3000, ರೂ. 4000 ಮತ್ತು ಗರಿಷ್ಠ ರೂ. 5,000 ಮಾಸಿಕ ಪಿಂಚಣಿ ಪಡೆಯಬಹುದು. ಇದು ನಿಮ್ಮ ಹೂಡಿಕೆಯನ್ನು ಸುರಕ್ಷಿತವಾಗಿರ್ಸುವಂತಹ ಸರ್ಕಾರಿ ಯೋಜನೆಯಾಗಿದೆ. ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸುತ್ತಿದ್ದರೆ, ನೀವು ನಿಮ್ಮ ಹೆಸರನ್ನು ಈ ಯೋಜನೆಗೆ  ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಮೊದಲು ನೀವು ಉಳಿತಾಯ ಖಾತೆ, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.

ಈ ಯೋಜನೆಯ ಪ್ರಯೋಜನಗಳನ್ನು ತಿಳಿಯಿರಿ
ಸರ್ಕಾರದ ಈ ಅದ್ಭುತ ಯೋಜನೆಯಲ್ಲಿ ನೀವು ಎಷ್ಟು ಬೇಗ ಹೂಡಿಕೆಯನ್ನು ಆರಂಭಿಸುವಿರೋ ನಿಮಗೆ ಅಷ್ಟೇ ಲಾಭ ಸಿಗುತ್ತದೆ. ಒಬ್ಬ ವ್ಯಕ್ತಿಯು 18 ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಗೆ ಸೇರಿದರೆ, ನಂತರ 60 ವರ್ಷ ವಯಸ್ಸಿನ ನಂತರ, ಅವರು ಪ್ರತಿ ತಿಂಗಳು 5000 ರೂಪಾಯಿಗಳ ಮಾಸಿಕ ಪಿಂಚಣಿ ಪಡೆಯಲು ತಿಂಗಳಿಗೆ ಕೇವಲ 210 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಅಂದರೆ, ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕಾಲಾವಧಿಯ ವಿಶೇಷ ಕಾಳಜಿ ವಹಿಸಬೇಕು.

ನಿತ್ಯ 7 ರೂ. ಠೇವಣಿ ಇರಿಸಿದರೆ ನಿಮಗೆ ಮಾಸಿಕ 5,000 ರೂ.ಪಿಂಚಣಿ ಸಿಗಲಿದೆ
>> ಈ ಯೋಜನೆಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ. ಈ ಯೋಜನೆಯಲ್ಲಿ, ನೀವು ಪ್ರತಿದಿನ ರೂ 7 ಠೇವಣಿ ಮಾಡಿದರೆ, ನಂತರ ನೀವು ತಿಂಗಳಿಗೆ ರೂ 5000 ಪಿಂಚಣಿ ಪಡೆಯಬಹುದು.
>> ಇದೇ ವೇಳೆ, ನೀವು ಪ್ರತಿ ತಿಂಗಳು 42 ರೂಪಾಯಿಗಳನ್ನು ಇದರಲ್ಲಿ ಠೇವಣಿ ಮಾಡಿದರೆ, ನಿಮಗೆ ಮಾಸಿಕ 1000 ರೂಪಾಯಿ ಪಿಂಚಣಿ ಸಿಗುತ್ತದೆ.
>>> ನಿಮಗೆ 2000 ರೂಪಾಯಿ ಪಿಂಚಣಿ ಬೇಕಾದರೆ, ನೀವು ಮಾಸಿಕವಾಗಿ 84 ರೂ. ಹೂಡಿಕೆ ಮಾಡಬೇಕು.
>> ನಿಮಗೆ ಮಾಸಿಕ 3000 ರೂ. ಪಿಂಚಣಿ ಬೇಕಾದರೆ, ನೀವು ಮಾಸಿಕ 126 ರೂ. ಹೂಡಿಕೆ ಮಾಡಬೇಕು.
>> ಮಾಸಿಕ 4000 ಪಿಂಚಣಿ ಪಡೆಯಲು ಬಯಸಿದರೆ, ನೀವು ಪ್ರತಿ ತಿಂಗಳು 168 ರೂ.ಠೇವಣಿ ಇರಿಸಬೇಕು

ಇದನ್ನೂ ಓದಿ-Paytm ಬಳಕೆದಾರರಿಗೆ ಬಿಗ್ ಶಾಕ್: ಮೊಬೈಲ್‌ ರೀಚಾರ್ಜ್‌ಗೆ ಹೆಚ್ಚುವರಿ ಶುಲ್ಕ ವಸೂಲಿ!

ತೆರಿಗೆ ಲಾಭ
ಈ ಯೋಜನೆಯ ದೊಡ್ಡ ವೈಶಿಷ್ಟ್ಯವೆಂದರೆ ಈ ಯೋಜನೆಯಲ್ಲಿ ಲಭ್ಯವಿರುವ ತೆರಿಗೆ ಪ್ರಯೋಜನ. ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಜನರು ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ತೆರಿಗೆಯ ಆದಾಯವನ್ನು ಇದರಿಂದ ಕಡಿತಗೊಳಿಸಲಾಗುತ್ತದೆ. ಇದಲ್ಲದೇ, ಕೆಲವು ಸಂದರ್ಭಗಳಲ್ಲಿ 50,000 ರೂ.ವರೆಗಿನ ಹೆಚ್ಚುವರಿ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಅಂದರೆ, ಈ ಯೋಜನೆಯಲ್ಲಿ ಒಟ್ಟಾರೆ 2 ಲಕ್ಷ ರೂ.ವರೆಗಿನ ಕಡಿತ ಲಭ್ಯವಿದೆ.

ಇದನ್ನೂ ಓದಿ-Vi-Airtelಗೆ ಜಿಯೋ ಟಕ್ಕರ್: ಅಗ್ಗದ ಪ್ರೀಪೇಡ್ ಯೋಜನೆಯಲ್ಲಿ ಡೇಟಾ ಸೇರಿ ಹಲವು ಪ್ರಯೋಜನ

ಈ ಯೋಜನೆಯ ನಿಬಂಧನೆ
ಈ ಯೋಜನೆಯಡಿಯಲ್ಲಿ, ಹೂಡಿಕೆದಾರರು 60 ವರ್ಷಗಳ ಮೊದಲು ಮರಣಹೊಂದಿದರೆ, ಹೂಡಿಕೆದಾರರ ಪತ್ನಿ / ಪತಿ ಈ ಯೋಜನೆಯಲ್ಲಿ ಠೇವಣಿ ಇರಿಸುವುದನ್ನು ಮುಂದುವರಿಸಬಹುದು ಮತ್ತು 60 ವರ್ಷಗಳ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು. ಆ ವ್ಯಕ್ತಿಯ ಪತ್ನಿ ತನ್ನ ಪತಿಯ ಮರಣದ ನಂತರ ಒಟ್ಟು ಮೊತ್ತವನ್ನು ಕ್ಲೈಮ್ ಮಾಡುವ ಆಯ್ಕೆಯೂ ಇದರಲ್ಲಿದೆ. ಪತ್ನಿಯೂ ಮರಣ ಹೊಂದಿದರೆ, ಪತ್ನಿಯ ನಾಮಿನಿಗೆ ಒಂದು ದೊಡ್ಡ ಮೊತ್ತ ಸಿಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
       

Trending News