PM Kisan Yojana: 11ನೇ ಕಂತಿನ ಹಣ ಖಾತೆಗೆ ಬರಬೇಕಾದರೆ ತಕ್ಷಣ ಮಾಡಿ ಮುಗಿಸಿ ಈ ಕೆಲಸ

PM Kisan Yojana: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಒಳ್ಳೆಯ ಸುದ್ದಿ ಇದೆ. ಈ ಯೋಜನೆಯಡಿಯಲ್ಲಿ, ಸರ್ಕಾರವು ಪೋರ್ಟಲ್‌ನಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಪುನರಾರಂಭಿಸಿದೆ. ಕೆಲವು ಸಮಯದ ಹಿಂದೆ ಕಿಸಾನ್ ಯೋಜನೆಯ ಪೋರ್ಟಲ್‌ನಲ್ಲಿ ಇ-ಕೆವೈಸಿ ಸೌಲಭ್ಯವನ್ನು ನಿಲ್ಲಿಸಲಾಗಿತ್ತು.   

Written by - Ranjitha R K | Last Updated : May 9, 2022, 12:38 PM IST
  • ಶೀಘ್ರದಲ್ಲೇ ನಿಮ್ಮ ಖಾತೆಗೆ 11ನೇ ಕಂತಿನ 2 ಸಾವಿರ ರೂಪಾಯಿ ಬರಲಿದೆ.
  • ಈ ಯೋಜನೆಯಡಿ ಇದುವರೆಗೆ ರೈತರು 10 ಕಂತುಗಳನ್ನು ಪಡೆದಿದ್ದಾರೆ.
  • ಈಗ ರೈತರು 11 ನೇ ಕಂತಿನ ಹಣಕ್ಕಾಗಿ KYC ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
PM Kisan Yojana: 11ನೇ ಕಂತಿನ  ಹಣ ಖಾತೆಗೆ ಬರಬೇಕಾದರೆ ತಕ್ಷಣ ಮಾಡಿ ಮುಗಿಸಿ ಈ ಕೆಲಸ  title=
PM Kisan Yojana (file photo)

ಬೆಂಗಳೂರು : PM Kisan Yojana: ನೀವು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಈ ಸುದ್ದಿ ನಿಮಗೆ ಪ್ರಯೋಜನಕಾರಿಯಾಗಲಿದೆ. ಶೀಘ್ರದಲ್ಲೇ ನಿಮ್ಮ ಖಾತೆಗೆ 11ನೇ ಕಂತಿನ 2 ಸಾವಿರ ರೂಪಾಯಿ ಬರಲಿದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರು 11 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಈ ಯೋಜನೆಯಡಿ ಇದುವರೆಗೆ ರೈತರು 10 ಕಂತುಗಳನ್ನು ಪಡೆದಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಪಟ್ಟಂತೆ 2021 ರಲ್ಲಿ ಕೇಂದ್ರ ಸರ್ಕಾರವು ಅನೇಕ ದೊಡ್ಡ ಬದಲಾವಣೆಗಳನ್ನು ಮಾಡಿದೆ. ಈಗ ರೈತರು 11 ನೇ ಕಂತಿನ ಹಣಕ್ಕಾಗಿ KYC ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಇ-ಕೆವೈಸಿ ಕಡ್ಡಾಯ : 
ನೀವು ಮನೆಯಲ್ಲಿ ಕುಳಿತು KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಕೆಲವು ಸಮಯದ ಹಿಂದೆ ಕಿಸಾನ್ ಯೋಜನೆಯ ಪೋರ್ಟಲ್‌ನಲ್ಲಿ ಇ-ಕೆವೈಸಿ ಸೌಲಭ್ಯವನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಅದನ್ನು ಆರಂಭಿಸಲಾಗಿದೆ. ನೀವು 11 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದರೆ, ಇ-ಕೆವೈಸಿ ಪ್ರಕ್ರಿಯೆಯನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕಾಗುತ್ತದೆ. ಇಲ್ಲವಾದರೆ ಪಿಎಂ ಕಿಸಾನ್ ಯೋಜನೆಯ  ಮುಂದಿನ ಕಂತು ಅಂದರೆ 11ನೇ ಕಂತಿನ ಹಣ ನಿಮ್ಮ ಖಾತೆ ಸೇರದೇ ಇರಬಹುದು. 

ಇದನ್ನೂ ಓದಿ : PNB Interest Rates: ಹೋಂ ಲೋನ್ ಸೇರಿದಂತೆ ಇತರಸಾಲಗಳ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್

ಇ-ಕೆವೈಸಿ ಮಾಡುವುದು ಹೇಗೆ?
ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಆನ್‌ಲೈನ್ ಕೆವೈಸಿ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್‌ನಲ್ಲಿರುವ ಇ-ಕೆವೈಸಿ ಆಯ್ಕೆಗೆ ಹೋಗುವ ಮೂಲಕ  ಇದನ್ನು ಮಾಡಬಹುದು. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ, ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡಬೇಕು. ಮನೆಯಲ್ಲಿ ಕುಳಿತೇ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.  

ಇ-ಕೆವೈಸಿ  ಪ್ರಕ್ರಿಯೆಯನ್ನು ತಿಳಿಯಿರಿ
1. ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ನೀವು ಮನೆಯಲ್ಲಿಯೇ ಕುಳಿತು ಇ-ಕೆವೈಸಿ ಮಾಡಬಹುದು.
2. ಇದಕ್ಕಾಗಿ, ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಹೋಗಿ.
3. ಈಗ ನೀವು ಈ ಪುಟದ ಬಲಭಾಗದಲ್ಲಿ ಟ್ಯಾಬ್‌ಗಳನ್ನು ಕಾಣಬಹುದು.
4. E-KYC ಮೇಲೆ ಕ್ಲಿಕ್ ಮಾಡಿ.
5. ಇಲ್ಲಿ ನೀವು ನಿಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು . 
6. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ.

ಇದನ್ನೂ ಓದಿ : Canara Bank: ಬಡ್ಡಿ ದರ ಹೆಚ್ಚಿಸಿದ ಕೆನರಾ ಬ್ಯಾಂಕ್

ಇ-ಕೆವೈಸಿಗೆ ಕೊನೆಯ ದಿನಾಂಕ ಯಾವಾಗ?
ಇ-ಕೆವೈಸಿ ಮಾಡಿಸಲು ಮಾರ್ಚ್ 31 ಕೊನೆಯ ದಿನಾಂಕ ಎದ್ನು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಅದನ್ನು ಮೇ 22 ಕ್ಕೆ ವಿಸ್ತರಿಸಲಾಗಿದೆ. ಈ ಮಾಹಿತಿಯನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ನೀಡಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News