Credit Card Balance Transfer: ಜೇಬಿನಲ್ಲಿ ನಯಾಪೈಸೆ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಇದ್ದರೆ ಆಕಸ್ಮಿಕ ಖರ್ಚು-ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಬಹುದು. ಕ್ರೆಡಿಟ್ ಕಾರ್ಡ್ ಬಳಸಿ ಹಣ ಖರ್ಚು ಮಾಡುವುದೆಂದರೆ ನೀವು ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಂಡು ಅದನ್ನು ಖರ್ಚು ಮಾಡಿದಂತೆಯೇ ಲೆಕ್ಕ. ಇದರಲ್ಲಿ ಒಂದೇ ಒಂದು ವ್ಯತ್ಯಾಸವೆಂದರೆ ಕ್ರೆಡಿಟ್ ಕಾರ್ಡ್‌ನಿಂದ ಪಡೆದ ಸಾಲವನ್ನು ಮರುಪಾವತಿಸಲು ನಿಮಗೆ ಗ್ರೇಸ್ ಅವಧಿಯನ್ನು ನೀಡಲಾಗುತ್ತದೆ. ಈ ಅವಧಿಯೊಳಗೆ ನೀವು ಸಾಲವನ್ನು ಮರು ಪಾವತಿ ಮಾಡಿದರೆ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇಲ್ಲದಿದ್ದರೆ, ನೀವು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಒಂದೊಮ್ಮೆ ನಿಮ್ಮ ಬಳಿ ಹಣವಿಲ್ಲದಿದ್ದಾರೆ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಮೂಲಕವೂ ನೀವು ಈ ಕೆಲಸವನ್ನು ಪೂರ್ಣಗೊಳಿಸಬಹುದು.
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ:
ನೀವು ಕ್ರೆಡಿಟ್ ಕಾರ್ಡ್‌ನಿಂದ ಖರ್ಚು ಮಾಡಿದ ಹಣವನ್ನು ಗ್ರೇಸ್ ಅವಧಿಯೊಳಗೆ ಪಾವತಿಸಲು ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದಾಗ ಅಂತಹ ಸಂದರ್ಭದಲ್ಲಿ ನೀವು ಸಾಲದ ಸುಳಿಯಲ್ಲಿ ಸಿಲುಕುವ ಅಪಾಯ ಹೆಚ್ಚಿರುತ್ತದೆ. ಈ ವೇಳೆ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಯ ಆಯ್ಕೆಯು ನಿಮಗೆ ಉಪಯುಕ್ತವಾಗಬಹುದು. ಆದರೆ ಇದಕ್ಕಾಗಿ ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿರುವುದು ಅವಶ್ಯಕ.
ಏನಿದು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ? ಇದರಿಂದಾಗುವ ಅನುಕೂಲ-ಅನಾನುಕೂಲಗಳೇನು?
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಎಂದರೆ ಒಂದು ಕ್ರೆಡಿಟ್ ಕಾರ್ಡ್‌ನಿಂದ ಮತ್ತೊಂದು ಕ್ರೆಡಿಟ್ ಕಾರ್ಡ್‌ಗೆ ಹಣವನ್ನು ವರ್ಗಾಯಿಸುವ ಮೂಲಕ ಸಾಲದ ಮೊತ್ತವನ್ನು ಮರುಪಾವತಿ ಮಾಡುವ ವಿಧಾನ. ಇದಕ್ಕಾಗಿ ನೀವು ಬ್ಯಾಲೆನ್ಸ್ ವರ್ಗಾವಣೆ ಮಾಡಲು ಇಚ್ಛಿಸುವ ಕ್ರೆಡಿಟ್ ಕಾರ್ಡ್ ಮಿತಿಯು ನಿಮ್ಮ ಸಾಲಕ್ಕಿಂತ (ಈಗಾಗಲೇ ಪಡೆದಿರುವ ಕ್ರೆಡಿಟ್ ಕಾರ್ಡ್ ಸಾಲಕ್ಕಿಂತ) ಹೆಚ್ಚಿರಬೇಕು. ಏಕೆಂದರೆ ನಿಮ್ಮ ಕ್ರೆಡಿಟ್ ಕಾರ್ಡ್‌ನ ಮೊತ್ತದ 75 ಪ್ರತಿಶತದವರೆಗೆ ಮಾತ್ರ ನೀವು ವರ್ಗಾಯಿಸಬಹುದು. ಗಮನಾರ್ಹ ವಿಷಯವೆಂದರೆ, ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಮಾಡುವಾಗ ಇದಕ್ಕಾಗಿ ಬ್ಯಾಂಕ್ ನಿಮ್ಮಿಂದ ಜಿಎಸ್‌ಟಿ ಮತ್ತು ಪ್ರಕ್ರಿಯೆ ಶುಲ್ಕವನ್ನು ವಿಧಿಸುತ್ತದೆ ಎಂಬುದನ್ನೂ ನೆನಪಿಡಿ.
ಇದನ್ನೂ ಓದಿ- Credit Card Rules: ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ನಿಯಮ ಬದಲಾಯಿಸಿದ ಆರ್‌ಬಿಐ
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಯ ವಿಧಾನ:
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಮಾಡಲು ಎರಡು ಮಾರ್ಗಗಳಿವೆ. ಮೊದಲನೆಯದಾಗಿ ನೀವು ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಅವರಿಂದ ಬ್ಯಾಲೆನ್ಸ್ ಅನ್ನು ವರ್ಗಾಯಿಸಬೇಕಾಗುತ್ತದೆ. ಎರಡನೇ ವಿಧಾನವೆಂದರೆ, ಬ್ಯಾಂಕಿನ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬ್ಯಾಲೆನ್ಸ್ ಅನ್ನು ನೀವೇ ವರ್ಗಾಯಿಸುವುದು.
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಯ ಅನುಕೂಲಗಳೇನು?
>> ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಯ ಪ್ರಮುಖ ಪ್ರಯೋಜನವೆಂದರೆ ನೀವು ಎರಡನೇ ಕ್ರೆಡಿಟ್ ಕಾರ್ಡ್‌ನ ಮೊತ್ತದೊಂದಿಗೆ ಮೊದಲ ಕಾರ್ಡ್‌ನಿಂದ ಸಾಲವನ್ನು ಪಾವತಿಸಬಹುದು.
>> ಇದರೊಂದಿಗೆ ನೀವು ನಿಮ್ಮ ಸಾಲವನ್ನು ಮರು ಪಾವತಿಸಲು ಮತ್ತೊಂದು ಗ್ರೇಸ್ ಅವಧಿಯನ್ನು ಪಡೆಯುತ್ತೀರಿ. ಅರ್ಥಾತ್ ನಿಮ್ಮ ಸಾಲದಿಂದ ಮುಕ್ತಿ ಪಡೆಯಲು ಇನ್ನಷ್ಟು ಸಮಯಾವಕಾಶ ಲಭ್ಯವಾಗುತ್ತದೆ.
>> ಆ ಗ್ರೇಸ್ ಅವಧಿಯಲ್ಲಿ ನೀವು ಮೊತ್ತವನ್ನು ಮರುಪಾವತಿಸಿದರೆ, ನೀವು ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ.
>> ಅಷ್ಟೇ ಅಲ್ಲ, ನೀವು ಡೀಫಾಲ್ಟರ್ ಆಗುವುದರಿಂದ ಸೇಫ್ ಅಗಿರುತ್ತೀರಿ.
>> ಮತ್ತೊಂದು ಪ್ರಮುಖ ಪ್ರಯೋಜನವೆಂದ್ರೇ ನಿಮ್ಮ ಕ್ರೆಡಿಟ್ ಸ್ಕೋರ್ ಹಾಳಾಗುವುದಿಲ್ಲ.
ಇದನ್ನೂ ಓದಿ- PPF-SSY ಖಾತೆದಾರರೇ ಗಮನಿಸಿ: ಮಾರ್ಚ್ 31ರ ಮೊದಲು ತಪ್ಪದೇ ಮಾಡಿ ಈ ಕೆಲಸ
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಯ ಅನಾನುಕೂಲಗಳು:-
ಪ್ರತಿ ವಿಷಯದಲ್ಲೂ ಒಳ್ಳೆಯದ್ದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಅಂತೆಯೇ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಪ್ರಯೋಜನಕಾರಿಯೇ ಆಡಿದ್ದರೂ ಕೆಲವು ಪರಿಸ್ಥಿತಿಯಲ್ಲಿ ಇದು ನಿಮ್ಮ ಸಮಸ್ಯೆಗಳನ್ನು ಕೂಡ ಹೆಚ್ಚಿಸಬಹುದು.
* ನೀವು ಒಂದು ಅಥವಾ ಎರಡು ಬಾರಿ ಬ್ಯಾಲೆನ್ಸ್ ವರ್ಗಾವಣೆ ಆಯ್ಕೆಯನ್ನು ಬಳಸುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ನೀವು ಪದೇ ಪದೇ ಈ ಆಯ್ಕೆಯನ್ನು ಬಳಸುವುದು ನಿಮಗೆ ಸಮಸ್ಯೆಯಾಗಬಹುದು.
* ಪದೇ ಪದೇ ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಮಾಡುವುದರಿಂದ ಇದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
* ಒಂದೊಮ್ಮೆ ನೀವು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಮಾಡಿ ನಂತರ ಗ್ರೆಸ್ ಅವಧಿಯೊಳಗೆ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ, ಕ್ರೆಡಿಟ್ ಕಾರ್ಡ್ ಬಿಲ್‌ನ ಮೇಲಿನ ಬಡ್ಡಿ ತುಂಬಾ ಹೆಚ್ಚಾಗಿರುತ್ತದೆ.
* ಇಂತಹ ಬಡ್ಡಿಯನ್ನು ಚಕ್ರಬಡ್ಡಿಯಾಗಿ ಲೆಕ್ಕಾ ಹಾಕುವುದರಿಂದ ಇದು ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.