RBI On Note: ವಿಶೇಷವಾಗಿ ದೃಷ್ಟಿ ವಿಕಲಚೇತನರಿಗಾಗಿ ಹೊಸ ನೋಟುಗಳಲ್ಲಿ ಹಲವಾರು ಸ್ಪರ್ಶ ವೈಶಿಷ್ಟ್ಯಗಳನ್ನು ಅಳವಡಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಮುಂಬೈ ಹೈಕೋರ್ಟ್ಗೆ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂಎಸ್ ಕಾರ್ಣಿಕ್ ಅವರ ವಿಭಾಗೀಯ ಪೀಠವು ‘ನ್ಯಾಷನಲ್ ಅಸೋಸಿಯೇಷನ್ ಆಫ್ ದಿ ಬ್ಲೈಂಡ್’ ಅರ್ಜಿಯ ವಿಚಾರಣೆಯ ವೇಳೆ ಈ ಟಿಪ್ಪಣಿ ನಡೆಸಿದೆ. ಹೊಸ ನೋಟುಗಳು ಮತ್ತು ನಾಣ್ಯಗಳನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ದೃಷ್ಟಿಹೀನರಿಗೆ ಕಷ್ಟವಾಗುತ್ತದೆ ಎಂದು ಅರ್ಜಿದಾರರೊಬ್ಬರು ಹೇಳಿದ್ದರು.
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಖಾತೆಗೆ ಬಂತು DA ಬಾಕಿ ಹಣ, ತಕ್ಷಣ ಖಾತೆ ಪರಿಶೀಲಿಸಿ
ಅರ್ಜಿಯಲ್ಲಿ ಹೇಳಿದ್ದೇನು?
ಹಿಂದಿನ ನೋಟುಗಳು ಮತ್ತು ನಾಣ್ಯಗಳು ವಿಭಿನ್ನ ಗಾತ್ರಗಳದ್ದಾಗಿದ್ದವು ಮತ್ತು ಅವುಗಳನ್ನು ಸುಲಭವಾಗಿ ಗುರುತಿಸಬಹುದಾಗಿತ್ತು ಎಂದು ಅರ್ಜಿದಾರರ ಪರ ವಕೀಲ ಉದಯ್ ವರುಜಿಂಕರ್ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರ್ಬಿಐ, ಈ ಅರ್ಜಿ ದಾಖಲಾದ ಬಳಿಕ, ದೃಷ್ಟಿ ವಿಕಲಚೇತನರು ಬಳಸಬಹುದಾದ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಆರ್.ಬಿ. ಐ ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದ್ದಾರೆ. ಈ ಅಪ್ಲಿಕೇಶನ್ ಸಹಾಯದಿಂದ ನೋಟುಗಳನ್ನು ಗುರುತಿಸುವುದು ಸುಲಭದ ಕೆಲಸವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-PM Kisan : ರೈತರೆ ಗಮನಿಸಿ : ತಪ್ಪದೆ ಈ ವಾರ ಈ ಕೆಲಸ ಮಾಡಿ, ಇಲ್ಲದಿದ್ದರೆ ಖಾತೆಗೆ ₹2000 ಬರಲ್ಲ
ಆರ್ಬಿಐ ಮಂಡಿಸಿದ ವಾದವೇನು?
ಆರ್ಬಿಐ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ್ ಧೋಂಡ್, ಆಪ್ ಅಥವಾ ಅಪ್ಲಿಕೇಶನ್ ಅಭಿವೃದ್ಧಿಪಡಿಸುವುದರ ಜೊತೆಗೆ ಆರ್ಬಿಐ ದೃಷ್ಟಿ ವಿಕಲಚೇತನರಿಗಾಗಿ ಕೆಲಸ ಮಾಡುವ ಹಲವಾರು ಸಂಘಗಳನ್ನು ಸಂಪರ್ಕಿಸಿದೆ ಎಂದು ನ್ಯಾಯಾಲಯಕ್ಕೆ ಅವರು ತಿಳಿಸಿದ್ದಾರೆ. “ಗುರುತಿನ ನಿಶಾನೆ ಮತ್ತು ಎತ್ತರಿಸಿದ ರೇಖೆಗಳು ಸೇರಿದಂತೆ ನೋಟುಗಳಲ್ಲಿ ಸ್ಪರ್ಶ ವೈಶಿಷ್ಟ್ಯಗಳನ್ನು ಆರ್ಬಿಐ ಅಭಿವೃದ್ಧಿಪಡಿಸಿದೆ. ನೂರು ರೂಪಾಯಿ ನೋಟು ತ್ರಿಕೋನ ಮತ್ತು ನಾಲ್ಕು ಎತ್ತರದ ಗೆರೆಗಳನ್ನು ಹೊಂದಿದೆ, 500 ರೂಪಾಯಿ ನೋಟು ಒಂದು ವೃತ್ತ ಮತ್ತು ಐದು ರೇಖೆಗಳನ್ನು ಮತ್ತು 2000 ರೂ.ಗಳ ನೋಟು ಒಂದು ಆಯತ ಹಾಗೂ ಏಳು ಗೆರೆಗಳನ್ನು ಹೊಂದಿದೆ" ಎಂದು ಹೇಳಿದ್ದಾರೆ. ಇದನ್ನು ಆಲಿಸಿದ ಪೀಠ ಅರ್ಜಿಯಲ್ಲಿ ಎತ್ತಿರುವ ಸಮಸ್ಯೆಗಳು ಗಂಭೀರವಾಗಿವೆ, ಈ ಕುರಿತು ಹೆಚ್ಚಿನ ಸಲಹೆಗಳನ್ನು ನೀಡುವ ಅಫಿಡವಿಟ್ ಸಲ್ಲಿಸಲು ಅರ್ಜಿದಾರರಿಗೆ ಅದು ಸೂಚಿಸಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.