Retail Inflation : ಹಣದುಬ್ಬರ ದರದ ಬಗ್ಗೆ ಮೋದಿ ಸರ್ಕಾರಕ್ಕೆ ಬಿಗ್ ನ್ಯೂಸ್!

ಹಣದುಬ್ಬರ ದರ ತಗ್ಗಿಸುವುದು ಸರ್ಕಾರ ಹಾಗೂ ಆರ್‌ಬಿಐಗೆ ಸವಾಲಾಗಿಯೇ ಉಳಿದಿದೆ. ಈ ವರ್ಷದ ಜನವರಿಯಿಂದ ಚಿಲ್ಲರೆ ಹಣದುಬ್ಬರ ದರವು ಶೇ. 6 ಕ್ಕಿಂತ ಹೆಚ್ಚಿದೆ.

Written by - Channabasava A Kashinakunti | Last Updated : Nov 14, 2022, 08:53 PM IST
  • ಚಿಲ್ಲರೆ ಹಣದುಬ್ಬರ ಶೇ.6.77ಕ್ಕೆ ಇಳಿಕೆಯಾಗಿದೆ
  • ಆರ್‌ಬಿಐ ತೃಪ್ತಿಕರ ಮಟ್ಟಕ್ಕಿಂತ ಮೇಲಿದೆ
  • ಶೇ.4 ರ​ ವ್ಯಾಪ್ತಿಯಲ್ಲಿ ಇರಿಸಿಕೊಳ್ಳಲು ಜವಾಬ್ದಾರಿ
Retail Inflation : ಹಣದುಬ್ಬರ ದರದ ಬಗ್ಗೆ ಮೋದಿ ಸರ್ಕಾರಕ್ಕೆ ಬಿಗ್ ನ್ಯೂಸ್! title=

Retail Inflation Rate : ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ಜನ ಸಾಮಾನ್ಯರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಸೋಮವಾರ ಬೆಳಗ್ಗೆ ಸಗಟು ಹಣದುಬ್ಬರ ದರ ಹೊರಬಿದ್ದಿದ್ದು, ಸಂಜೆಯ ವೇಳೆಗೆ ಚಿಲ್ಲರೆ ಹಣದುಬ್ಬರ ದರದ ಅಂಕಿ ಅಂಶ ಜನಸಾಮಾನ್ಯರಿಗೆ ಹಾಗೂ ಸರ್ಕಾರಕ್ಕೆ ಸಮಾಧಾನ ತಂದಿದೆ. ಹಣದುಬ್ಬರ ದರ ತಗ್ಗಿಸುವುದು ಸರ್ಕಾರ ಹಾಗೂ ಆರ್‌ಬಿಐಗೆ ಸವಾಲಾಗಿಯೇ ಉಳಿದಿದೆ. ಈ ವರ್ಷದ ಜನವರಿಯಿಂದ ಚಿಲ್ಲರೆ ಹಣದುಬ್ಬರ ದರವು ಶೇ. 6 ಕ್ಕಿಂತ ಹೆಚ್ಚಿದೆ.

ಸೆಂಟ್ರಲ್ ಬ್ಯಾಂಕ್ ಅದನ್ನು ಶೇ.4 ಕ್ಕೆ ತರಲು ಬದ್ಧವಾಗಿದೆ

ಹಣದುಬ್ಬರ ದರ ಚಿಂತಾಜನಕ ಮಟ್ಟದಲ್ಲಿ ಮುಂದುವರಿದಿರುವ ಕಾರಣ ಕಳೆದ ದಿನಗಳಲ್ಲಿ ಎಂಪಿಸಿಯ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಎಂಪಿಸಿ ಸದಸ್ಯರು ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಚರ್ಚಿಸಿ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು. ಸಭೆಯ ನಂತರ, ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ದರವನ್ನು ಶೇ. 4 ಕ್ಕೆ ಇಳಿಸಲು ಕೇಂದ್ರೀಯ ಬ್ಯಾಂಕ್ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : PPF vs SSY : PPF ಅಥವಾ ಸುಕನ್ಯಾ ಸಮೃದ್ಧಿ ಯಾವುದು ಬೆಸ್ಟ್? ಇಲ್ಲಿದೆ ಲೆಕ್ಕಾಚಾರ

ಚಿಲ್ಲರೆ ಹಣದುಬ್ಬರ ಶೇ.6.77ಕ್ಕೆ ಇಳಿಕೆಯಾಗಿದೆ

ಇದರೊಂದಿಗೆ, ಅಕ್ಟೋಬರ್‌ನಲ್ಲಿ ಹಣದುಬ್ಬರ ಅಂಕಿಅಂಶವು ಶೇ. 7 ಕ್ಕಿಂತ ಕಡಿಮೆ ಇರುತ್ತದೆ ಎಂದು ಆರ್‌ಬಿಐ ಗವರ್ನರ್ ಹೇಳಿಕೊಂಡಿದ್ದರು. ಈಗ ಅವರ ಭವಿಷ್ಯ ನಿಜವಾಗಿದೆ. ಆಹಾರ ಪದಾರ್ಥಗಳ ಬೆಲೆ ಇಳಿಕೆಯಿಂದಾಗಿ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.77ಕ್ಕೆ ಇಳಿದಿದೆ.

ಆರ್‌ಬಿಐ ತೃಪ್ತಿಕರ ಮಟ್ಟಕ್ಕಿಂತ ಮೇಲಿದೆ

ಈ ಅಂಕಿ ಅಂಶವು ಭಾರತೀಯ ರಿಸರ್ವ್ ಬ್ಯಾಂಕ್ (RBI) ಯ ತೃಪ್ತಿದಾಯಕ ಮಟ್ಟಕ್ಕಿಂತ ಇನ್ನೂ ಹೆಚ್ಚಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ. 7.41 ರಷ್ಟಿತ್ತು. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಈ ವರ್ಷದ ಜನವರಿಯಿಂದ ತೃಪ್ತಿಕರವಾದ ಶೇ. 6 ಕ್ಕಿಂತ ಹೆಚ್ಚಿದೆ.

ಶೇ.4 ರ​ ವ್ಯಾಪ್ತಿಯಲ್ಲಿ ಇರಿಸಿಕೊಳ್ಳಲು ಜವಾಬ್ದಾರಿ

ಚಿಲ್ಲರೆ ಹಣದುಬ್ಬರವನ್ನು ಶೇ.2 ರಷ್ಟು ವ್ಯತ್ಯಾಸದೊಂದಿಗೆ ಶೇ.4 ರ ವ್ಯಾಪ್ತಿಯಲ್ಲಿ ಇರಿಸಲು ಸರಕಾರವು ಕೇಂದ್ರ ಬ್ಯಾಂಕ್‌ಗೆ ಜವಾಬ್ದಾರಿಯನ್ನು ನೀಡಿದೆ. ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ (NSO) ಇತ್ತೀಚಿನ ಮಾಹಿತಿಯ ಪ್ರಕಾರ, ಆಹಾರ ಪದಾರ್ಥಗಳಲ್ಲಿನ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ.7.01 ರಷ್ಟಿತ್ತು, ಸೆಪ್ಟೆಂಬರ್‌ನಲ್ಲಿ ಶೇ.8.6 ರಷ್ಟಿತ್ತು. ವಿತ್ತೀಯ ನೀತಿ ನಿರ್ಧಾರಗಳನ್ನು ಮಾಡುವಾಗ RBI ಪ್ರಾಥಮಿಕವಾಗಿ ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಸೋಮವಾರದಂದು ಸಗಟು ಹಣದುಬ್ಬರದ ಅಂಕಿಅಂಶ ಕೂಡ ಬಿಡುಗಡೆಯಾಗಿದೆ. ಇದರ ಪ್ರಕಾರ, ಆಹಾರ, ಇಂಧನ ಮತ್ತು ತಯಾರಿಸಿದ ಉತ್ಪನ್ನಗಳ ಕಡಿಮೆ ಬೆಲೆಯಿಂದಾಗಿ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರವು ಅಕ್ಟೋಬರ್‌ನಲ್ಲಿ 19 ತಿಂಗಳ ಕನಿಷ್ಠ ಶೇ. 8.39 ಕ್ಕೆ ಇಳಿದಿದೆ.

ಇದನ್ನೂ ಓದಿ : NPS Rules : ಪಿಂಚಣಿದಾರರ ಗಮನಕ್ಕೆ : NPS ಹೊಸ ನಿಯಮ ಜಾರಿ!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News