Samsung Mobile On Rent: ಬಾಡಿಗೆಯ ಮೇಲೆ ಪಡೆಯಿರಿ Galaxy Smartphones, Samsung ಆರಂಭಿಸಿದೆ ಈ ಕಾರ್ಯಕ್ರಮ

Samsung Mobile On Rent: ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ವಿಶೇಷ ಮಳಿಗೆಗಳಿಂದ ಸ್ಯಾಮ್‌ಸಂಗ್ ಸ್ಮಾರ್ಟ್ ಕೆಫೆ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್ ಪ್ಲಾಜಾ ಸೇರಿದಂತೆ ಹೊಸ ಕಾರ್ಯಕ್ರಮಗಳನ್ನು ಘೋಷಿಸಿದೆ. ಹೊಸ ಕಾರ್ಯಕ್ರಮಗಳು ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ ಶಾಪಿಂಗ್ ಅನುಭವವನ್ನು ಹೆಚ್ಚಿಸಲಿವೆ.

Last Updated : Dec 18, 2020, 02:11 PM IST
  • ದುಬಾರಿ ಸ್ಮಾರ್ಟ್ ಫೋನ್ ಖರೀದಿಸಲು ಯೋಜಿಸುತ್ತಿರುವವರಿಗೆ ಇಲ್ಲಿದೆ ಸಂತಸದ ಸುದ್ದಿ.
  • ಇನ್ಮುಂದೆ ನೀವು ಸ್ಮಾರ್ಟ್ ಫೋನ್ ಗಳನ್ನು ಬಾಡಿಗೆಗೆ ಪಡೆಯಬಹುದು.
  • ಪ್ರಸ್ತುತ ಕಂಪನಿ ಈ ಯೋಜನೆಯನ್ನು ಈ ದೇಶದಲ್ಲಿ ಮಾತ್ರ ಆರಂಭಿಸಿದೆ.
Samsung Mobile On Rent: ಬಾಡಿಗೆಯ ಮೇಲೆ ಪಡೆಯಿರಿ Galaxy Smartphones, Samsung ಆರಂಭಿಸಿದೆ ಈ ಕಾರ್ಯಕ್ರಮ title=
Samsung Mobile On Rent

ನವದೆಹಲಿ: Samsung Mobile On Rent: ಈಗ ನೀವು ಬಾಡಿಗೆಗೆ ಸ್ಮಾರ್ಟ್ಫೋನ್ ಸಹ ತೆಗೆದುಕೊಳ್ಳಬಹುದು. ಸ್ಮಾರ್ಟ್ ಫೋನ್ ದಿಗ್ಗಜ ಕಂಪನಿ ಸ್ಯಾಮ್‌ಸಂಗ್ (Samsung) ಇದನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಕಂಪನಿಯು ತನ್ನ ಪ್ರಮುಖ ಗ್ಯಾಲಕ್ಸಿ ಸರಣಿಯ (Galaxy Series S20) ಸ್ಮಾರ್ಟ್‌ಫೋನ್‌ಗಳನ್ನು ಒಂದು ತಿಂಗಳಿನಿಂದ ಒಂದು ವರ್ಷದವರೆಗೆ ಬಾಡಿಗೆಗೆ ಪಡೆಯಬಹುದು. ಪ್ರಸ್ತುತ, ಈ ಯೋಜನೆಯನ್ನು ಜರ್ಮನಿಯಲ್ಲಿ ಪ್ರಾರಂಭಿಸಲಾಗಿದೆ.

ಇಲ್ಲಿದೆ ಸ್ಕೀಮ್
ಈ ಯೋಜನೆಯಡಿಯಲ್ಲಿ, ಯಾವುದೇ ವ್ಯಕ್ತಿ ಗ್ಯಾಲಕ್ಸಿ ಡಿವೈಸ್ ಗಳನ್ನು ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು ಅಥವಾ 12 ತಿಂಗಳು ಬಾಡಿಗೆಗೆ ಪಡೆಯಬಹುದು. ಗ್ರೋವರ್ ಸಹಭಾಗಿತ್ವದಲ್ಲಿ ಕಂಪನಿಯು ಈ ಯೋಜನೆಯನ್ನು ಪ್ರಾರಂಭಿಸಿದೆ. ಹೊಸ ಬಾಡಿಗೆ ಸೇವೆಯ ಲಾಭ ಪಡೆಯಲು ಬಯಸುವ ಸ್ಯಾಮ್‌ಸಂಗ್ ಗ್ರಾಹಕರು ಅಧಿಕೃತ ಸ್ಯಾಮ್‌ಸಂಗ್ ಅಂಗಡಿಯಿಂದ ಗ್ಯಾಲಕ್ಸಿ ಎಸ್ 20 ಮಾಡೆಲ್ ಸ್ಮಾರ್ಟ್ ಫೋನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಬಾಡಿಗೆ ಆಯ್ಕೆಯನ್ನು ಆರಿಸಿಕೊಳ್ಳಬಹುದು ಎಂದು ಸ್ಯಾಮ್ ಮೊಬೈಲ್ ಪ್ರಕಟಿಸಿದೆ.

ಬಾಡಿಗೆ ಎಷ್ಟಿರಲಿದೆ?
128 ಜಿಬಿ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಗ್ಯಾಲಕ್ಸಿ ಎಸ್ 20 ಎಫ್‌ಇ ಅನ್ನು ತಿಂಗಳಿಗೆ 59.90 / 49.90 / 39.90 ಅಥವಾ 29.90 ಯುರೋಗಳಷ್ಟು ಬಾಡಿಗೆಯ ಮೇಲೆ  ಪಡೆಯಬಹುದು. ಬಾಡಿಗೆ ಅವಧಿ ಹೆಚ್ಚಾದಂತೆ, ಮಾಸಿಕ ಶುಲ್ಕ ಕಡಿಮೆಯಾಗಲಿದೆ.

ಇದನ್ನು ಓದಿ- ವಿಶೇಷ ಡಿಸ್ಲ್ಪೆ ಜೊತೆಗೆ ಲಾಂಚ್ ಆಗಿದೆ Samsung Galaxy S20 FE, ಇದರ ವೈಶಿಷ್ಟ್ಯಗಳಿವು

ಸ್ಟ್ಯಾಂಡರ್ಡ್ ಗ್ಯಾಲಕ್ಸಿ ಎಸ್ 20 ಅನ್ನು 99.90 / 69.90 / 59.90 / 49.90 ಯುರೋಗಳಿಗೆ ಬಾಡಿಗೆಗೆ ಪಡೆಯಬಹುದು, ಆದರೆ ಗ್ಯಾಲಕ್ಸಿ ಎಸ್ 20 + 109.90 / 74.90 / 64.90 / 54.90 ಯುರೋಗಳಿಗೆ ಬಾಡಿಗೆಗೆ ಪಡೆಯಬಹುದು.

ಇದನ್ನು ಓದಿ - Samsung ನೀಡಲಿದೆ New Year ಗಿಫ್ಟ್!

ಉನ್ನತ ಶ್ರೇಣಿಯ ಗ್ಯಾಲಕ್ಸಿ ಎಸ್ 20 ಅಲ್ಟ್ರಾ ಮಾದರಿಯ ಒಂದು ತಿಂಗಳ ಬಾಡಿಗೆ 119.90 ಯುರೋ ಅಥವಾ ಕ್ರಮವಾಗಿ 3/6/12 ತಿಂಗಳು 99.90 / 79.90 / 69.90 ಯುರೋ ಬಾಡಿಗೆ ನೀಡಬೇಕಾಗಲಿದೆ. ಬಾಡಿಗೆ ಸೇವೆ ಸ್ವಲ್ಪ ಕಾಲದವರೆಗೆ ಜರ್ಮನಿಗೆ ಮಾತ್ರ ಸೀಮಿತಗೊಳಿಸಲಾಗಿದೆ.  ಆದರೆ ಈ ಸೇವೆಯನ್ನು ಇತರ ದೇಶಗಳಿಗೆ ಯಾವಾಗ ವಿಸ್ತರಣೆ ಮಾಡಲಾಗುವುದು ಎಂಬುದರ ಕುರಿತು ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Trending News