SBI e Auction: ವರ್ಷಾಂತ್ಯಕ್ಕೂ ಮುನ್ನವೇ ಮನೆ ಬುಕ್ ಮಾಡಿ... ಅಗ್ಗದ ದರದಲ್ಲಿ ಮನೆ ಖರೀದಿಗೆ SBI ನೀಡುತ್ತಿದೆ ಈ ಅವಕಾಶ

SBI e Auction: ವಿದಾಯ ಹೇಳುತ್ತಿರುವ 2020 ರಲ್ಲಿ ನಿಮ್ಮ ಕನಸಿನ ಮನೆಯನ್ನು ಕೈಗೆಟಕುವ ದರದಲ್ಲಿ ಖರೀದಿಸುವ ಮೂಲಕ ನೀವು ಈ ವರ್ಷವನ್ನು ಅವಿಸ್ಮರಣೀಯಗೊಳಿಸಬಹುದು. ಏಕೆಂದರೆ ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ನಿಮಗೆ ಈ ಅವಕಾಶ ಕಲ್ಪಿಸುತ್ತಿದೆ.

Last Updated : Dec 20, 2020, 09:51 PM IST
  • ವರ್ಷಾಂತ್ಯಕ್ಕೂ ಮುನ್ನವೇ ಮನೆ ಖರೀದಿಸಬೇಕೆ?
  • SBI ನೀಡುತ್ತಿದೆ ನಿಮಗೆ ಈ ಸುವರ್ಣಾವಕಾಶ.
  • ಡಿಸೆಂಬರ್ 30 ರಂದು SBI e-ಆಕ್ಷನ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
SBI e Auction: ವರ್ಷಾಂತ್ಯಕ್ಕೂ ಮುನ್ನವೇ ಮನೆ ಬುಕ್ ಮಾಡಿ... ಅಗ್ಗದ ದರದಲ್ಲಿ ಮನೆ ಖರೀದಿಗೆ SBI ನೀಡುತ್ತಿದೆ ಈ ಅವಕಾಶ title=
SBI e-Action (File Photo)

ನವದೆಹಲಿ: SBI e Auction: ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶೀಘ್ರದಲ್ಲಿಯೇ ಹಲವು ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ವಸತಿ, ವಾಣಿಜ್ಯ ಹಾಗೂ ಔದ್ಯೋಗಿಕ ವಲಯದ ಆಸ್ತಿಗಳು ಶಾಮೀಲಾಗಿರಲಿವೆ. ಈ ಹರಾಜು ಪ್ರಕ್ರಿಯೆಯಲ್ಲಿ ನೀವೂ ಕೂಡ ಪಾಲ್ಗೊಂಡು ನಿಮ್ಮ ನೆಚ್ಚಿನ ಸ್ಥಿರಾಸ್ತಿ ಅಥವಾ ಕನಸಿನ ಮನೆಯನ್ನು ಖರೀದಿಸಬಹುದು.  ಸಾಲ ಮರುಪಾವತಿಯಾಗದ ಆಸ್ತಿಗಳನ್ನು ಬ್ಯಾಂಕ್ ಹರಾಜಿಗಿಡುತ್ತದೆ.

ಇದನ್ನು ಓದಿ -ಎಸ್‌ಬಿಐ ಸೇರಿದಂತೆ ಈ 4 ದೊಡ್ಡ ಬ್ಯಾಂಕ್‌ಗಳ ಗ್ರಾಹಕರಿಗೆ Whatsapp ನೀಡುತ್ತಿದೆ ಈ ಸೌಲಭ್ಯ

ಹೆಸರು ನೊಂದಾಯಿಸಲು ಈ ಲಿಂಕ್ ಮೇಲೆ ಕ್ಲಿಕ್ಕಿಸಿ
ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಬ್ಯಾಂಕ್, "ಹಣ ಹೂಡಿಕೆಗಾಗಿ ನೀವು ಕೂಡ ಸ್ಥಿರಾಸ್ತಿಗಳ ಹುಡುಕಾಟದಲ್ಲಿ ನಿರತರಾಗಿರುವಿರಾ? ನಿಮ್ಮ ಉತ್ತರ ಹೌದು ಎಂದಾದಲ್ಲಿ SBI ಇ-ಆಕ್ಷನ್ ನಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ  https://bit.ly/2HeLyn0 ಲಿಂಕ್ ಮೇಲೆ ಕ್ಲಿಕ್ಕಿಸಿ .

ಇದನ್ನು ಓದಿ-WhatsApp Payment Goes Live:ದೇಶಾದ್ಯಂತ WhatsAppನ ಹಣ ಪಾವತಿ ಸೇವೆ ಆರಂಭ

ಡಿಸೆಂಬರ್ 30 ರಂದು ನಡೆಯಲಿದೆ ಈ ಹರಾಜು ಪ್ರಕ್ರಿಯೆ
ಈ ಕುರಿತು ಮಾಹಿತಿ ನೀಡಿರುವ ಬ್ಯಾಂಕ್ (SBI), ಹರಜಿಗಿಡಲಾಗುವ ಫ್ರೀ ಹೋಲ್ಡ್ ಅಥವಾ ಲೀಜ್ ಹೋಲ್ಡ್ ಆಸ್ತಿಯ ಸ್ಥಾನವನ್ನು ಅದರ ಮ್ಯಾಪ್ ಹಾಗೂ ಇತರೆ ಮಾಹಿತಿಗಳೊಂದಿಗೆ ಸಾರ್ವಜನಿಕ ನೋಟಿಸ್ ಬ್ಯಾಂಕ್ ಜಾರಿಗೊಳಿಸುತ್ತದೆ ಎಂದು ಹೇಳಿದೆ. ಒಂದು ವೇಳೆ ನೀವೂ ಕೂಡ ಇ-ಆಕ್ಷನ್ ಮೂಲಕ ಆಸ್ತಿ ಖರೀದಿಸಲು ಬಯಸುತ್ತಿದ್ದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪ್ರಕ್ರಿಯೆ ಹಾಗೂ ಆಸ್ತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಹರಾಜು ಪ್ರಕ್ರಿಯೆ ಡಿಸೆಂಬರ್ 30 ರಂದು ನಡೆಯಲಿದೆ.

ಇದನ್ನು ಓದಿ- SBI Alert! Google Search ಮೂಲಕ ಸೈಟ್ ಪ್ರವೇಶಿಸುವ ಮೊದಲು ಈ ನಂಬರ್ ಮತ್ತು ಲಿಂಕ್ ನೆನಪಿಡಿ

ಆಸ್ತಿಗಳ ಪಟ್ಟಿಯಲ್ಲಿ ಎಷ್ಟು ಆಸ್ತಿಗಳಿವೆ
ಮುಂದಿನ ೭ ದಿನಗಳಲ್ಲಿ 758 ವಸತಿ, 251 ಕಮರ್ಷಿಯಲ್, 98 ಔದ್ಯೋಗಿಕ ಮತ್ತು ಮುಂದಿನ 30 ದಿನಗಳಲ್ಲಿ 3032 ವಸತಿ, 844 ವಾಣಿಜ್ಯ ಹಾಗೂ 410 ಔದ್ಯೋಗಿಕ ಆಸ್ತಿಗಳು ಈ ಪಟ್ಟಿಯಲ್ಲಿ ಶಾಮೀಲಾಗಿವೆ.

ಇದನ್ನು ಓದಿ-Paytm ಪಾವತಿಯಲ್ಲಿ ಪಡೆಯಿರಿ ಇನ್ನಷ್ಟು ಲಾಭ, ಕಂಪನಿ ನೀಡಿದೆ ಈ ಆಫರ್

ಹರಾಜು ಪ್ರಕ್ರಿಯೆ ಯಾಕೆ?
ಯಾವ ಆಸ್ತಿಗಳ ಮಾಲೀಕರು ಆಸ್ತಿಗಾಗಿ ಪಡೆದ ಸಾಲವನ್ನು ಮರುಪಾವತಿಸಿಲ್ಲವೋ ಅಥವಾ ಹಲವು ಬಾರಿ ನೋಟಿಸ್ ಸಿಕ್ಕ ಬಳಿಕವೂ ಯಾವುದೇ ಒಂದು ಕಾರಣದ ಹಿನ್ನೆಲೆ ಸಾಲ ಮರುಪಾವತಿಸಿಲ್ಲವೋ ಅವರಿಗೆ ಸೇರಿದ ಮನೆ ಅಥವಾ ಪ್ರಾಪರ್ಟಿ ಬ್ಯಾಂಕ್ ತನ್ನ ವಶಕ್ಕೆ ಪಡೆಯುತ್ತದೆ ಮತ್ತು ಅವುಗಳ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಹಣವನ್ನು ಮರಳಿ ಪಡೆಯುತ್ತವೆ.
ಇದನ್ನು ಓದಿ-ಎಸ್‌ಬಿಐನ ಈ ಖಾತೆಯ ಮೂಲಕ ವ್ಯವಹಾರ ಆಗಲಿದೆ ಸುಲಭ

ಕಾಲಕಾಲಕ್ಕೆ ಈ ಹರಾಜು ಪ್ರಕ್ರಿಯೆ ನಡೆಯುತ್ತದೆ
ಭಾರತೀಯ ಸ್ಟೇಟ್ ಬ್ಯಾಂಕ್ ಕಾಲ-ಕಾಲಕ್ಕೆ ಈ ರೀತಿಯ ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸುತ್ತದೆ. ಈ ಹರಾಜು ಪ್ರಕ್ರಿಯೆ ಮೂಲಕ ಆಸ್ತಿಯನ್ನು ಮಾರಾಟ ಮಾಡಿ ಬ್ಯಾಂಕ್ ಬಾಕಿ ಹಣವನ್ನು ವಸೂಲಿ ಮಾಡುತ್ತದೆ.

Trending News