SBI Hikes MCLR: ಎಸ್‌ಬಿಐ ಗ್ರಾಹಕರಿಗೆ ಶಾಕಿಂಗ್ ಸುದ್ದಿ .! ಹೆಚ್ಚಾಗಲಿದೆ ಸಾಲದ ಇಎಂಐ

SBI Hikes MCLR: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಎಂಸಿಎಲ್‌ಆರ್ ಅನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.  ಈ ಹೆಚ್ಚಲದ ಹಿನ್ನೆಲೆಯಲ್ಲಿ , ಗ್ರಾಹಕರ ಮನೆ-ಸ್ವಯಂ-ವೈಯಕ್ತಿಕ ಸಾಲವು ದುಬಾರಿಯಾಗಿದೆ . 

Written by - Ranjitha R K | Last Updated : Apr 18, 2022, 12:26 PM IST
  • 10 ಬೇಸಿಸ್ ಪಾಯಿಂಟ್‌ಗಳಷ್ಟು MCLR ಹೆಚ್ಚಳ
  • ಈ ಬದಲಾವಣೆಯು ಏಪ್ರಿಲ್ 15 ರಿಂದ ಜಾರಿಗೆ ಬಂದಿದೆ.
  • ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ದುಬಾರಿಯಾಗಲಿದೆ.
 SBI Hikes MCLR: ಎಸ್‌ಬಿಐ ಗ್ರಾಹಕರಿಗೆ ಶಾಕಿಂಗ್ ಸುದ್ದಿ .!  ಹೆಚ್ಚಾಗಲಿದೆ ಸಾಲದ ಇಎಂಐ title=
SBI Hikes MCLR (file photo)

ಬೆಂಗಳೂರು : SBI Hikes MCLR: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ, ನಿಮ್ಮ ಪಾಲಿಗೆ ಇದೊಂದು ಪ್ರಮುಖ ಸುದ್ದಿಯಾಗಿರಲಿದೆ. ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸಾಲದ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು ಗ್ರಾಹಕರಿಗೆ ಆಘಾತವನ್ನುಂಟು ಮಾಡಿದೆ. ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, ಈ ಬದಲಾವಣೆಯು ಏಪ್ರಿಲ್ 15 ರಿಂದ ಜಾರಿಗೆ ಬಂದಿದೆ.

ಸಾಲದ EMI ಹೆಚ್ಚಾಗುತ್ತದೆ :
ಎಂಸಿಎಲ್ ಆರ್ ಹೆಚ್ಚಳದಿಂದ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ದುಬಾರಿಯಾಗಲಿದೆ. ಇದು ನಿಮ್ಮ EMI ಮೇಲೆ ನೇರ ಪರಿಣಾಮ ಬೀರುತ್ತದೆ. SBI ನ ವೆಬ್‌ಸೈಟ್ ಪ್ರಕಾರ, ಗ್ರಾಹಕರಿಗೆ  ಮೂರು ತಿಂಗಳವರೆಗೆ ಮಾರ್ಜಿನಲ್ ಕಾಸ್ಟ್ ಲೆಂಡಿಂಗ್ ರೇಟ್ (MCLR) ದರವು 6.65% ರ ಬದಲಿಗೆ 6.75% ಆಗಿರುತ್ತದೆ.

ಇದನ್ನೂ ಓದಿ : Bank Opening Hours Changed: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ ! ಬ್ಯಾಂಕ್ ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಹೊಸ ಟೈಮಿಂಗ್

ಹೊಸ ದರಗಳು ಇಲ್ಲಿವೆ : 
ಇದಲ್ಲದೇ 6 ತಿಂಗಳಿಗೆ ಶೇ.6.95ರ ಬದಲಾಗಿ ಎಂಸಿಎಲ್‌ಆರ್ ಶೇ.7.05ರಷ್ಟಿರುತ್ತದೆ. ಅದೇ ಸಮಯದಲ್ಲಿ, ಒಂದು ವರ್ಷದ MCLR ಗೆ 7.10%, ಎರಡು ವರ್ಷಗಳಿಗೆ 7.30% ಮತ್ತು ಮೂರು ವರ್ಷಗಳಿಗೆ 7.40. ಆಗಿರುತ್ತದೆ. 

ಎಂಸಿಎಲ್ಆರ್ ಎಂದರೇನು?
MCLR ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 2016 ರಲ್ಲಿ ಪರಿಚಯಿಸಿತು. ಇದು ಯಾವುದೇ ಹಣಕಾಸು ಸಂಸ್ಥೆಯ ಆಂತರಿಕ ಮಾನದಂಡವಾಗಿದೆ. MCLR ಪ್ರಕ್ರಿಯೆಯಲ್ಲಿ, ಸಾಲದ ಕನಿಷ್ಠ ಬಡ್ಡಿ ದರವನ್ನು ನಿಗದಿಪಡಿಸಲಾಗುತ್ತದೆ. 

ಇದನ್ನೂ ಓದಿ : Life insurance policy : ಜೀವ ವಿಮಾ ಪಾಲಿಸಿ ಖರೀದಿಸುವ ನೆನಪಿರಲಿ 5 ವಿಷಯಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News