ಬೆಂಗಳೂರು : 7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಭಾರೀ ಆಘಾತ ನೀಡಿದೆ. 18 ತಿಂಗಳ ಡಿಎ ಬಾಕಿಯನ್ನು ನಿರೀಕ್ಷಿಸುತ್ತಿದ್ದ ನೌಕರರಿಗೆ ಭಾರೀ ನಿರಾಸೆ ನೀಡಿದೆ. ಈ ಬಗ್ಗೆ ಹಣಕಾಸು ಸಚಿವಾಲಯ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ. 18 ತಿಂಗಳವರೆಗೆ ಬಾಕಿ ಡಿಎಯನ್ನು ಕೇಂದ್ರ ನೌಕರರಿಗೆ ನೀಡುವುದು ಸಾಧ್ಯವಿಲ್ಲ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಹೇಳಿದೆ.
ಕೊರಾನಾ ಅವಧಿಯಲ್ಲಿ ಸರ್ಕಾರ ಡಿಎ ಮತ್ತು ಪಿಂಚಣಿದಾರರ ಡಿಆರ್ ಅನ್ನು ನಿಲ್ಲಿಸಿತ್ತು. ಅಂದರೆ ಬಾಕಿ ಉಳಿದಿರುವ ಡಿಎ ಕರೋನಾ ಅವಧಿಯದ್ದು. ಇದೀಗ ಈ ಬಾಕಿ ಡಿಎ ಯನ್ನು ನೌಕರರಿಗೆ ಮೂರು ಕಂತುಗಳಲ್ಲಿ ನೀಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : Gold Price Today : ಎಷ್ಟಿದೆ ಚಿನ್ನ ಬೆಳ್ಳಿ ಬೆಲೆ? ಖರೀದಿಗೆ ಮುನ್ನ ನಿಮ್ಮ ನಗರದ ಬೆಲೆ ತಿಳಿಯಿರಿ
ಹಣಕಾಸು ಖಾತೆ ರಾಜ್ಯ ಸಚಿವರು ನೀಡಿದ ಮಾಹಿತಿ :
ರಾಜ್ಯಸಭಾ ಸಂಸದ ನರನ್-ಭಾಯ್ ಜೆ ರಥ್ವಾ ಅವರು ಸರ್ಕಾರಿ ನೌಕರರ ಬಾಕಿ ಉಳಿದಿರುವ 18 ತಿಂಗಳ ಡಿಎ ಬಾಕಿ ಹಣವನ್ನು ಸರ್ಕಾರ ನೀಡುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಸರ್ಕಾರ ಈ ಉತ್ತರ ನೀಡಿದೆ. ಡಿಎ ಬಾಕಿ ಬಿಡುಗಡೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎನ್ನುವುದನ್ನು ಸರ್ಕಾರ ಈ ವೇಳೆ ಸ್ಪಷ್ಟಪಡಿಸಿದೆ.
ಸರ್ಕಾರದ ಈ ಪ್ರತಿಕ್ರಿಯೆಗೆ ನೌಕರರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಈ ಹಣವನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದೆ. ಕೊರೊನಾ ಅವಧಿಯಲ್ಲಿ ಡಿಎ ಹೆಚ್ಚಿಸದಿದ್ದರೂ ನೌಕರರು ಕೆಲಸ ಮಾಡಿದ್ದಾರೆ. ಹೀಗಾಗಿ ಈ ಅವಧಿಯ ಡಿಎ ಹಣವನ್ನು ತಡೆ ಹಿಡಿಯುವುದು ಸರಿಯಲ್ಲ ಎಂದು ಹೇಳಿದೆ. ಅಲ್ಲದೆ, ಈ ಅವಧಿಯಲ್ಲಿ ತುಟ್ಟಿಭತ್ಯೆ ಬಿಡುಗಡೆ ಮಾಡದ ಕಾರಣ ಸರ್ಕಾರ ಸುಮಾರು 34,000 ಕೋಟಿ ರೂಪಾಯಿಯಷ್ಟನ್ನು ಉಳಿತಾಯ ಮಾಡಿತ್ತು.
ಇದನ್ನೂ ಓದಿ : Gas Cylinder Booking: ಹೊಸ ವರ್ಷಕ್ಕೂ ಮೊದಲೇ ಗುಡ್ ನ್ಯೂಸ್, 1000 ರೂ. ಕಡಿಮೆ ಬೆಲೆಯಲ್ಲಿ ಬುಕ್ ಮಾಡಿ ಗ್ಯಾಸ್ ಸಿಲಿಂಡರ್
ಹೊಸ ವರ್ಷದಲ್ಲಿ ಮತ್ತೆ ಹೆಚ್ಚಾಗಲಿದೆ ತುಟ್ಟಿ ಭತ್ಯೆ :
2020ರ ಜನವರಿ 1ರಿಂದ 2021ರ ಜೂನ್ 30ರ ವರೆಗಿನ 18 ತಿಂಗಳ ಡಿಎ ಬಾಕಿಯನ್ನು ಕೇಂದ್ರ ಸರ್ಕಾರ ಇನ್ನೂ ಪಾವತಿಸಿಲ್ಲ. ಇದೀಗ ಈ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ನಿರಾಕರಿಸಿದೆ. ಪ್ರಸ್ತುತ, ನೌಕರರು ಶೇಕಡಾ 38 ರ ದರದಲ್ಲಿ ಡಿಎ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಜನವರಿ ತಿಂಗಳಲ್ಲಿ ಅಂದರೆ ಹೊಸ ವರ್ಷದಲ್ಲಿ ಮತ್ತೊಮ್ಮೆ ಡಿಎಯಲ್ಲಿ ಹೆಚ್ಚಳವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.