ಕಡಿಮೆ ಬಂಡವಾಳದಿಂದ ವ್ಯಾಪಾರ ಆರಂಭಿಸಿ, ಕೈ ತುಂಬ ಆದಾಯ ಗಳಿಸಿ

How To Start Low Cost Business: ಕರೋನವೈರಸ್ ಬಿಕ್ಕಟ್ಟಿನ ಮಧ್ಯೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ವ್ಯವಹಾರಗಳು ಸಹ ಮುಚ್ಚಿವೆ. ಆದಾಯದ ಸಮಸ್ಯೆ ಎಲ್ಲೆಡೆ ಕಂಡು ಬರುತ್ತಿದೆ.

Written by - Ranjitha R K | Last Updated : Jun 29, 2021, 12:11 PM IST
  • ಕಟ್ಲರಿ ವ್ಯವಹಾರವು ನಿಮಗೆ ಬಂಪರ್ ಲಾಭವನ್ನು ನೀಡುತ್ತದೆ
  • ಈ ವ್ಯವಹಾರದಲ್ಲಿ ಸರ್ಕಾರ ನಿಮಗೆ ಸಹಾಯ ಮಾಡುತ್ತದೆ.
  • ಇದಕ್ಕಾಗಿ ನೀವು ಪಿಎಂ ಮುದ್ರಾ ಯೋಜನೆಯಡಿ ಯಾವುದೇ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬಹುದು.
ಕಡಿಮೆ ಬಂಡವಾಳದಿಂದ ವ್ಯಾಪಾರ ಆರಂಭಿಸಿ, ಕೈ ತುಂಬ ಆದಾಯ ಗಳಿಸಿ title=
ಈ ವ್ಯವಹಾರದಲ್ಲಿ ಸರ್ಕಾರ ನಿಮಗೆ ಸಹಾಯ ಮಾಡುತ್ತದೆ. (file photo)

ನವದೆಹಲಿ : How To Start Low Cost Business: ಕರೋನವೈರಸ್ ಬಿಕ್ಕಟ್ಟಿನ ಮಧ್ಯೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ವ್ಯವಹಾರಗಳು ಸಹ ಮುಚ್ಚಿವೆ. ಆದಾಯದ ಸಮಸ್ಯೆ ಎಲ್ಲೆಡೆ ಕಂಡು ಬರುತ್ತಿದೆ. ಹಾಗಿದ್ದರೆ ಕಡಿಮೆ ಬಂಡವಾಳದ ಮೂಲಕ ವ್ಯವಹಾರ (low budget business) ಮಾಡಿ ಆದಾಯದ ಮೂಲ ಹುಟ್ಟು ಹಾಕಿದರೆ ಹೇಗೆ?  ಹೌದು ಕಡಿಮೆ ಬಂಡವಾಳ ಹೂಡಿ ಅಧಿಕ ಲಾಭ ಪಡೆಯುವ ವ್ಯವಹಾರಗಳ ಮಾಹಿತಿಯನ್ನು ಇಲ್ಲಿ ನೀಡಲಿದ್ದೇವೆ. 

ಕಟ್ಲರಿ ತಯಾರಿಕೆ ಒಂದು ಉತ್ತಮ ಆಯ್ಕೆ : 
ಕಡಿಮೆ ವೆಚ್ಚದ ಹೂಡಿಕೆಯಿಂದ ಅಧಿಕ ಲಾಭ ಗಳಿಸುವ ವ್ಯವಹಾರವೆಂದರೆ (How To Start Low Cost Business) ಲೋಹದಿಂದ ತಯಾರಿಸಿದ ಕಟ್ಲರಿಗಳ ಉತ್ಪಾದನಾ ಘಟಕ. ಇದಕ್ಕಾಗಿ ನೀವು ಸರ್ಕಾರದ ಮುದ್ರಾ ಯೋಜನೆಯಡಿ ಸಾಲವನ್ನು ಸಹ ಪಡೆಯಬಹುದು.

ಇದನ್ನೂ ಓದಿ :  Gold-Silver Rate : ಆಭರಣ ಪ್ರಿಯರ ಗಮನಕ್ಕೆ : ಇಲ್ಲಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ

ಇವು ಲಾಭ ನೀಡುವ ಉತ್ಪನ್ನಗಳು : 
ಕಟ್ಲರಿಗೆ ಎಲ್ಲಾ ಮನೆಗಳಲ್ಲಿ ಬೇಡಿಕೆಯಿದ್ದೇ ಇರುತ್ತದೆ. ಹಾಗಾಗಿ ಈ ವ್ಯವಹಾರ ನಿಮಗೆ ನಿಶ್ಚಿತವಾಗಿಯೂ ಲಾಭ ತಂದು ಕೊಡುತ್ತದೆ.  ಈ ವ್ಯವಹಾರದಲ್ಲಿ (Business) ಕಟ್ಲೇರಿ ಮಾತ್ರವಲ್ಲ, ಕೃಷಿಯಲ್ಲಿ ಬಳಸುವ ಕೆಲವು ಪ್ರಮುಖ ಸಾಧನಗಳನ್ನು ಕೂಡಾ ಮಾಡಬಹುದು. 

ಖರ್ಚು ಎಷ್ಟು ತಗುಲಲಿದೆ: 
ಸೆಟಪ್ ಮಾಡಲು 1.8 ಲಕ್ಷ ರೂ ಅಗತ್ಯವಿರುತ್ತದೆ. ಇದರಲ್ಲಿ ವೆಲ್ಡಿಂಗ್ ಸೆಟ್, ಬಫಿಂಗ್ ಮೋಟರ್, ಡ್ರಿಲ್ಲಿಂಗ್ ಮೆಷಿನ್, ಬೆಂಚ್ ಗ್ರೈಂಡರ್, ಹ್ಯಾಂಡ್ ಡ್ರಿಲ್ಲಿಂಗ್, ಹ್ಯಾಂಡ್ ಗ್ರೈಂಡರ್, ಬೆಂಚ್, ಪ್ಯಾನಲ್ ಬೋರ್ಡ್ ಮತ್ತು ಇತರ ಸಾಧನಗಳೂ ಸೇರಿವೆ. ಇದಲ್ಲದೆ ಕಚ್ಚಾ ಸಾಮಗ್ರಿಗಳಿಗಾಗಿ ಸುಮಾರು 1,20,000 ರೂ ಖರ್ಚಾಗುತ್ತದೆ. ಇದಲ್ಲದೆ, ಕಾರ್ಮಿಕರ ವೇತನ (salary) ಎಲ್ಲಾ ಸೇರಿ ಸುಮಾರು  30 ಸಾವಿರ ಖರ್ಚು ಬರಬಹುದು. ಒಟ್ಟಾರೆಯಾಗಿ 3 ರಿಂದ 3.3 ಲಕ್ಷ ಖರ್ಚು ತಗಲಬಹುದು. 

ಇದನ್ನೂ ಓದಿ : EPFO: ಈ ನೌಕರರಿಗೆ ಸಿಗಲಿದೆ ಹೆಚ್ಚಿನ ವೇತನ ; ನಿಮಗೂ ಸಿಗಲಿದೆಯೇ ಸರ್ಕಾರದ ಯೋಜನೆಯ ಲಾಭ ?

ನೀವು ಕೇವಲ 1.14 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ :
ಈ ವ್ಯವಹಾರದಲ್ಲಿ ಮಾಡಿದ ಖರ್ಚಿನಲ್ಲಿ ನೀವು ಕೇವಲ 1.14 ಲಕ್ಷ ರೂಗಳ ಖರ್ಚನ್ನು ಮಾತ್ರ ತೋರಿಸಬೇಕಾಗುತ್ತದೆ. . ಉಳಿದ ಖರ್ಚಿಗೆ ನೀವು ಸರ್ಕಾರದ ಸಹಾಯವನ್ನು ತೆಗೆದುಕೊಳ್ಳಬಹುದು. ಸರ್ಕಾರದಿಂದ ಮುದ್ರಾ ಯೋಜನೆಯಡಿ (mudra scheme) ಈ ವ್ಯವಹಾರಕ್ಕಾಗಿ ನಿಮಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. 

ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ್ ಮಂತ್ರಿ ಮುದ್ರ ಸಾಲ (pradhan manthri mudra scheme) ಯೋಜನೆಯಡಿ ಈ ಸಾಲಕ್ಕಾಗಿ ಯಾವುದೇ ಬ್ಯಾಂಕ್ ನಲ್ಲಿ (Bank) ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದರಲ್ಲಿ ಹೆಸರು, ವಿಳಾಸ, ವ್ಯವಹಾರ ವಿಳಾಸ, ಶಿಕ್ಷಣ, ಪ್ರಸ್ತುತ ಆದಾಯ ಮತ್ತು ಎಷ್ಟು ಸಾಲದ ಅಗತ್ಯವಿದೆ ಎಂಬ ಮಾಹಿತಿಯನ್ನು ನೀಡಬೇಕು. ಇದರ ನಂತರ ಯಾವುದೇ ಬ್ಯಾಂಕ್‌ಗೆ ಭೇಟಿ ನೀಡಿ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News