SBI ಗ್ರಾಹಕರಿಗೆ ಪ್ರಮುಖ ಮಾಹಿತಿ: ಈ ದಿನ ಬ್ಯಾಂಕಿಂಗ್ ಸೇವೆಗಳಲ್ಲಿ ತೊಂದರೆಯಾಗಬಹುದು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಖಾತೆಯಲ್ಲಿ ಪ್ರಮುಖ ಮಾಹಿತಿಯನ್ನು ನೀಡಿದೆ. ನವೆಂಬರ್ 22 ರಂದು ಐಎನ್‌ಬಿ / ಯೋನೊ / ಯೋನೊ ಲೈಟ್ ಬಳಸುವಾಗ ಬ್ಯಾಂಕಿನ ಗ್ರಾಹಕರು ಕೆಲವು ಅನಾನುಕೂಲತೆಗಳನ್ನು ಹೊಂದಿರಬಹುದು ಎಂದು ಬ್ಯಾಂಕ್ ಹೇಳಿದೆ.

Last Updated : Nov 21, 2020, 09:55 AM IST
  • ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯವಾಗಿದೆ.
  • ಬ್ಯಾಂಕಿನಿಂದ ಅಗತ್ಯವಿರುವ ಪ್ರತಿಯೊಂದು ಮಾಹಿತಿಯನ್ನು ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ತನ್ನ ಗ್ರಾಹಕರಿಗೆ ನೀಡಲಾಗುತ್ತದೆ.
  • ಇತ್ತೀಚೆಗೆ ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಮಾಹಿತಿಯನ್ನು ನೀಡಿದೆ.
SBI ಗ್ರಾಹಕರಿಗೆ ಪ್ರಮುಖ ಮಾಹಿತಿ: ಈ ದಿನ ಬ್ಯಾಂಕಿಂಗ್ ಸೇವೆಗಳಲ್ಲಿ ತೊಂದರೆಯಾಗಬಹುದು title=

ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯವಾಗಿದೆ. ಬ್ಯಾಂಕಿನಿಂದ ಅಗತ್ಯವಿರುವ ಪ್ರತಿಯೊಂದು ಮಾಹಿತಿಯನ್ನು ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ತನ್ನ ಗ್ರಾಹಕರಿಗೆ ನೀಡಲಾಗುತ್ತದೆ. ಅಗತ್ಯ ಮಾಹಿತಿಯನ್ನು ನೀಡುವುದರ ಜೊತೆಗೆ ವದಂತಿಗಳನ್ನು ತಪ್ಪಿಸಲು ಮತ್ತು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಆಗಾಗ್ಗೆ ಎಚ್ಚರಿಕೆ ನೀಡುತ್ತದೆ. ಇತ್ತೀಚೆಗೆ ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಮಾಹಿತಿಯನ್ನು ನೀಡಿದೆ.

ನವೆಂಬರ್ 22 ರಂದು ಸೇವೆಗಳಲ್ಲಿ ಸಮಸ್ಯೆ ಉಂಟಾಗಬಹುದು:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಅಧಿಕೃತ ಖಾತೆಯಲ್ಲಿ ಪ್ರಮುಖ ಮಾಹಿತಿಯನ್ನು ನೀಡಿದೆ. ನವೆಂಬರ್ 22 ರಂದು ಐಎನ್‌ಬಿ (INB)/ ಯೋನೊ (YONO) / ಯೋನೊ ಲೈಟ್ (YONO Lite) ಸೇವೆಯನ್ನು ಬಳಸುವಾಗ ಬ್ಯಾಂಕಿನ ಗ್ರಾಹಕರು ಕೆಲವು ಅನಾನುಕೂಲತೆಗಳನ್ನು ಹೊಂದಿರಬಹುದು ಎಂದು ಬ್ಯಾಂಕ್ ಹೇಳಿದೆ. ಅಂದರೆ ಈ ದಿನ ನೀವು ಈ ಅಪ್ಲಿಕೇಶನ್‌ಗಳನ್ನು ಬಳಸುವಾಗ ಕೆಲವು ರೀತಿಯ ತಾಂತ್ರಿಕ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಬ್ಯಾಂಕ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಎಸ್‌ಬಿಐ ಖಾತೆದಾರರಿಗೆ ಗುಡ್ ನ್ಯೂಸ್, ಇನ್ಮುಂದೆ ನಿಮ್ಮ ಡೆಬಿಟ್ ಕಾರ್ಡ್ ಆಗಲಿದೆ ಇನ್ನೂ ಪವರ್ ಫುಲ್

ಗ್ರಾಹಕರಿಗೆ ಬ್ಯಾಂಕಿನಿಂದ ಮನವಿ :
ನವೆಂಬರ್ 22 ರಂದು ಕೆಲವು ತಾಂತ್ರಿಕ ಕೆಲಸದ ಹಿನ್ನಲೆಯಲ್ಲಿ ಗ್ರಾಹಕರಿಗೆ ಈ ಸೇವೆಗಳನ್ನು ಉಪಯೋಗಿಸುವಲ್ಲಿ ತೊಂದರೆ ಎದುರಾಗಬಹುದು. ಈ ವೇಳೆ ದಯವಿಟ್ಟು ಸಹಕರಿಸಿ ಎಂದು  ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಮನವಿ ಮಾಡಿದೆ. ಮಾಹಿತಿಯ ಪ್ರಕಾರ ಬ್ಯಾಂಕ್ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ವೇದಿಕೆಯನ್ನು ನವೀಕರಿಸಲಿದೆ. ಆದ್ದರಿಂದ ಬ್ಯಾಂಕಿಗೆ ಸಂಬಂಧಿಸಿದ ಆನ್‌ಲೈನ್ ಸೇವೆಗಳಲ್ಲಿ ಅಡೆತಡೆಗಳು ಎದುರಾಗುತ್ತವೆ ಎಂದು ತಿಳಿದುಬಂದಿದೆ.

SBI ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ

ನಿಮ್ಮ ಉತ್ತಮ ಅನುಭವಕ್ಕಾಗಿ ನಾವು ನಮ್ಮ ಇಂಟರ್ನೆಟ್ ಬ್ಯಾಂಕಿಂಗ್ (Internet Banking) ಪ್ಲಾಟ್‌ಫಾರ್ಮ್ ಅನ್ನು ಅಪ್‌ಗ್ರೇಡ್ ಮಾಡುತ್ತಿದ್ದೇವೆ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಅಲ್ಲದೆ ನಿಮಗೇನಾದರೂ ತುರ್ತು ಕೆಲಸಗಳಿದ್ದರೆ ಅದನ್ನು ಇಂದೇ ಪೂರ್ಣಗೊಳಿಸಿಕೊಳ್ಳಿ. ನವೆಂಬರ್ 22 ರಂದು ನಿಮ್ಮ ಬ್ಯಾಂಕಿಂಗ್ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಅಸಮಾಧಾನಗೊಳ್ಳಬೇಡಿ ಎಂದು ನಮ್ಮ ಗೌರವಾನ್ವಿತ ಗ್ರಾಹಕರಿಗೆ ನಾವು ವಿನಂತಿಸುತ್ತೇವೆ ಎಂದು ಬ್ಯಾಂಕ್ ಹೇಳಿದೆ.
 

Trending News