ನವದೆಹಲಿ : ಗ್ರಾಹಕರ ನೆಚ್ಚಿನ ಕಾರುಗಳಾದ ಟಿಯಾಗೊ ಮತ್ತು ಟಿಗೊರ್‌ನ ಸಿಎನ್‌ಜಿ ರೂಪಾಂತರಗಳನ್ನು ಟಾಟಾ ಮೋಟಾರ್ಸ್ (Tata Motors) ಭಾರತದಲ್ಲಿ ಬಿಡುಗಡೆ ಮಾಡಿದೆ . ಇವುಗಳಲ್ಲಿ, ಟಾಟಾ ಟಿಯಾಗೊ iCNG ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 6.10 ಲಕ್ಷ ರೂಪಾಯಿಗಳು. ಇದರ ಟಾಪ್ ಮಾಡೆಲ್ ಬೆಲೆ 7.53 ಲಕ್ಷಕ್ಕೆ ಏರುತ್ತದೆ. ಟಾಟಾ ಟಿಗೋರ್ iCNG ನ ಎಕ್ಸ್ ಶೋರೂಂ ಬೆಲೆ 7.70 ಲಕ್ಷದಿಂದ 8.30 ಲಕ್ಷದವರೆಗೆ ಇರಲಿದೆ. Tata Tiago iCNG ಯನ್ನು ನಾಲ್ಕು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. XE, XM, XT ಮತ್ತು XZ+, ಆದರೆ Tigor iCNG ಅನ್ನು XZ ಮತ್ತು XZ+ ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.
ಸ್ಟ್ಯಾಂಡರ್ಡ್ ಮಾಡೆಲ್ ಗೆ ಹೋಲಿಸಿದರೆ ಇದರ ತೂಕ 100 ಕೆಜಿ ಹೆಚ್ಚು :
ಟಾಟಾ ಮೋಟಾರ್ಸ್ (Tata Motors) ಎರಡೂ ಹೊಸ ಕಾರುಗಳಿಗೆ iCNG ತಂತ್ರಜ್ಞಾನವನ್ನು ನೀಡಿದೆ. ಅವುಗಳ ತೂಕವು ಸ್ಟ್ಯಾಂಡರ್ಡ್ ಮಾಡೆಲ್‌ಗಿಂತ 100 ಕೆಜಿ ಹೆಚ್ಚಾಗಿರುತ್ತದೆ. ಗ್ರೌಂಡ್ ಕ್ಲಿಯರೆನ್ಸ್ ವಿಷಯದಲ್ಲಿ ಎರಡೂ ಕಾರುಗಳು ಉತ್ತಮವಾಗಿದ್ದು, ಅವುಗಳಿಗೆ ಕ್ರಮವಾಗಿ 168 ಎಂಎಂ ಮತ್ತು 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಕಂಪನಿಯು ಈ ಎರಡೂ ಕಾರುಗಳನ್ನು ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಇವುಗಳಲ್ಲಿ ರೈನ್ ಸೆನ್ಸಿಂಗ್ ವೈಪರ್‌ಗಳು, ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ಪ್ರೀಮಿಯಂ ಬ್ಲಾಕ್ ಮತ್ತು ಬೇಸ್ ಇಂಟೀರಿಯರ್‌ಗಳು ಮತ್ತು ಡ್ಯುಯಲ್-ಕಲರ್ ರೂಫ್ ಸೇರಿವೆ. ಈ ಎಲ್ಲಾ ಹೊಸ ವೈಶಿಷ್ಟ್ಯಗಳು Tigor iCNG ನ XZ ಪ್ಲಸ್ ಮಾದರಿಯಲ್ಲಿ ಲಭ್ಯವಿರುತ್ತವೆ. Tiago iCNG ನ ಎಲ್ಲಾ ವೈಶಿಷ್ಟ್ಯಗಳು ಪ್ರಸ್ತುತ ಮಾದರಿಯಂತೆಯೇ ಇವೆ.
ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಖುಲಾಯಿಸಿದ ಅದೃಷ್ಟ, ಈ ತಿಂಗಳು ವೇತನ ಹೆಚ್ಚಳದೊಂದಿಗೆ ಆಗಲಿದೆ ಮತ್ತೊಂದು ಘೋಷಣೆ
CNG ಅನ್ನು ಮರುಪೂರಣ ಮಾಡಬಹುದಾದ ಆಧುನಿಕ ನೋಜಲ್ :
"ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ (Fuel price hike) ಮಾರುಕಟ್ಟೆಯಲ್ಲಿ ಸಿಎನ್‌ಜಿ (CNG) ವಾಹನಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಟಾಟಾ ಮೋಟಾರ್ಸ್‌ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ಹೆಡ್ ಶೈಲೇಶ್ ಚಂದ್ರ ಹೇಳಿದ್ದಾರೆ. ಈ ಕಾರಣದಿಂದಾಗಿಯೇ , ಟಾಟಾ ಟಿಗೊರ್ (Tigor iCNG) ಮತ್ತು ಟಿಯಾಗೊ ಸಿಎನ್‌ಜಿ (Tiago iCNG) ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಎರಡೂ ಕಾರುಗಳಿಗೆ ಆಧುನಿಕ ನೋಜ್ಯಲ್ ನೀಡಲಾಗಿದೆ. ಇದರಿಂದ ಸಿಎನ್‌ಜಿಯನ್ನು ವೇಗವಾಗಿ ತುಂಬುವುದು ಸಾಧ್ಯವಾಗುತ್ತದೆ. ಅಲ್ಲದೆ CNG ತುಂಬುವ ವೇಳೆ, ಕಾರಿನ ಎಂಜಿನ್ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ. ಇದು ಇಂಧನ ತುಂಬುವ ವೇಳೆ ಕಾರನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಅತಿ ಕಡಿಮೆ ಬೆಲೆಯಲ್ಲಿ ಮನೆ ಮತ್ತು ಮಳಿಗೆ ಖರೀದಿಸುವ ಅವಕಾಶ ನೀಡುತ್ತಿದೆ ಈ ಬ್ಯಾಂಕ್, ಶೀಘ್ರವೇ ಹೀಗೆ ನೊಂದಾಯಿಸಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.