Maggi ಸೇರಿದಂತೆ Nestleಯ 60 ಶೇದಷ್ಟು ಉತ್ಪನ್ನಗಳು 'Unhealthy'; ಕಂಪನಿಯೇ ಒಪ್ಪಿಕೊಂಡ ಸತ್ಯ

ವರದಿಯಲ್ಲಿ ನೆಸ್ಲೆಯ  60 ಪ್ರತಿಶತ ಉತ್ಪನ್ನಗಳು ಆರೋಗ್ಯಕರ ವಿಭಾಗದಲ್ಲಿ ಬರುವುದಿಲ್ಲ ಎಂದು ಹೇಳಿದೆ. ಕಂಪನಿಯು ಈಗ ತನ್ನ ಉತ್ಪನ್ನಗಳಲ್ಲಿ ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಹೊಸ ತಂತ್ರವನ್ನು ರೂಪಿಸುತ್ತಿದೆ ಎಂದು ಹೇಳಿದೆ.  

Written by - Ranjitha R K | Last Updated : Jun 2, 2021, 03:40 PM IST
  • ಮತ್ತೊಮ್ಮೆ ಸುದ್ದಿಯಲ್ಲಿರುವ ನೆಸ್ಲೆ
  • ಕಂಪನಿಯ ವರದಿಯಲ್ಲೇ ಬಯಲಾಯಿತು ಆಘಾತಕಾರಿ ಸತ್ಯ
  • ಗ್ರಾಹಕರು ತಿಳಿದುಕೊಳ್ಳಲೇ ಬೇಕಾದ ಅಂಶ ವರದಿಯಲ್ಲಿ ಬಹಿರಂಗ
Maggi ಸೇರಿದಂತೆ Nestleಯ 60 ಶೇದಷ್ಟು ಉತ್ಪನ್ನಗಳು 'Unhealthy'; ಕಂಪನಿಯೇ ಒಪ್ಪಿಕೊಂಡ ಸತ್ಯ title=
ಮತ್ತೊಮ್ಮೆ ಸುದ್ದಿಯಲ್ಲಿರುವ ನೆಸ್ಲೆ (file photo zee news)

ನವದೆಹಲಿ : ನೆಸ್ಲೆ (Nestle) ಕಂಪನಿಯ ಮ್ಯಾಗಿ (Maggi) ಮತ್ತೊಮ್ಮೆ ಸುದ್ದಿಯಲ್ಲಿದೆ. ಹೌದು ನೆಸ್ಲೆ ಉತ್ಪನ್ನಗಳಲ್ಲಿ 60 ಪ್ರತಿಶತ ಉತ್ಪನ್ನಗಳು ಆರೋಗ್ಯಕರವಾಗಿಲ್ಲ. ಅಂದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬ ವರದಿ ಬಹಿರಂಗವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದು ಯಾರೋ ಮಾಡಿರುವ ಆರೋಪ ಅಲ್ಲ. ಬದಲಿಗೆ, ನೆಸ್ಲೆ ತನ್ನ ವರದಿಯಲ್ಲಿಯೇ ಈ ವಿಚಾರವನ್ನು ಬಹಿರಂಗಪಡಿಸಿದೆ. 

ನೆಸ್ಲೆಯ  60% ಉತ್ಪನ್ನಗಳು  'Unhealthy' :
ಈ ಬಗ್ಗೆ Financial Times ನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ. ಈ ವರದಿಯಲ್ಲಿ ನೆಸ್ಲೆಯ (Nestle) 60 ಪ್ರತಿಶತ ಉತ್ಪನ್ನಗಳು ಆರೋಗ್ಯಕರ ವಿಭಾಗದಲ್ಲಿ ಬರುವುದಿಲ್ಲ ಎಂದು ಹೇಳಿದೆ. ಕಂಪನಿಯು ಈಗ ತನ್ನ ಉತ್ಪನ್ನಗಳಲ್ಲಿ ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಹೊಸ ತಂತ್ರವನ್ನು ರೂಪಿಸುತ್ತಿದೆ ಎಂದು ಹೇಳಿದೆ.  

ಇದನ್ನೂ ಓದಿ : 7th Pay Commission: DAಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟ

“ಉತ್ಪನ್ನಗಳು ಪೌಷ್ಠಿಕಾಂಶದ ಮಾನದಂಡಗಳನ್ನು ಪೂರೈಸುತ್ತಿಲ್ಲ”: 
ಕಂಪನಿಯ ಅನೇಕ ಉತ್ಪನ್ನಗಳು ಆರೋಗ್ಯ (health) ಮತ್ತು ಪೋಷಣೆಯ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ, ತನ್ನ ಉತ್ಪನ್ನಗಳಲ್ಲಿ 60 ಪ್ರತಿಶತಕ್ಕಿಂತಲೂ ಹೆಚ್ಚು ಉತ್ಪನ್ನಗಳು ಆರೋಗ್ಯಕರವಾಗಿಲ್ಲ (unhealthy) ಎನ್ನುವ ಸತ್ಯವನ್ನು ಕಂಪನಿಯೇ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ. ಇನ್ನು ಕೆಲವು ಉತ್ಪನ್ನಗಳನ್ನು ಎಷ್ಟೇ ಮಾರ್ಪಡಿಸಿದರೂ ಎಂದಿಗೂ ಆರೋಗ್ಯಕರವಾಗಿರುವುದಿಲ್ಲ ಎನ್ನುವುದನ್ನು ಕೂಡಾ ಕಂಪನಿ ಹೇಳಿದೆ ಎಂದು ವರದಿ ಹೇಳುತ್ತದೆ.

ಕೇವಲ 37% ಉತ್ಪನ್ನಗಳು ಉತ್ತಮ ರೇಟಿಂಗ್ ಹೊಂದಿವೆ :
ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಆಸ್ಟ್ರೇಲಿಯಾದ ಹೆಲ್ತ್ ಸ್ಟಾರ್ ರೇಟಿಂಗ್ ವ್ಯವಸ್ಥೆಯಲ್ಲಿ, ಪ್ರಾಣಿಗಳ ಆಹಾರ ಮತ್ತು ವೈದ್ಯಕೀಯ ಪೌಷ್ಠಿಕಾಂಶವನ್ನು ಹೊರತುಪಡಿಸಿ ನೆಸ್ಲೆಯ ಆಹಾರ ಮತ್ತು ಪಾನೀಯ ಉತ್ಪನ್ನಗಳಲ್ಲಿ ಕೇವಲ 37% ಉತ್ಪನ್ನಗಳು ಮಾತ್ರ 5 ರಲ್ಲಿ 3.5 ಕ್ಕಿಂತ ಹೆಚ್ಚು ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ : PM Kusum: ರೈತರ ಆದಾಯದ ಮೇಲೆ ವಂಚಕರ ಕಣ್ಣು, ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಸಿದ ಸರ್ಕಾರ

ನೆಸ್ಲೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ  ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಮ್ಯಾಗಿ, Nescafe ಮತ್ತು KitKatನಂತಹ ಉತ್ಪನ್ನಗಳನ್ನು ವಿಶ್ವದ ಅನೇಕ ದೇಶಗಳಲ್ಲಿ ಮಾರಾಟ ಮಾಡುತ್ತದೆ.  ನೆಸ್ಲೆಯ (Nestle) ಪ್ರಕಾರ ಕೆಲವು ಉತ್ಪನ್ನಗಳು ಎಂದಿಗೂ ಆರೋಗ್ಯಕರವಾಗಿರಲಿಲ್ಲ. ಅಂದರೆ ಈ ಉತ್ಪನ್ನಗಳಲ್ಲಿ ಎಷ್ಟೇ ಸುಧಾರಣೆ ತಂದರೂ, ಅವುಗಳನ್ನು ಆರೋಗ್ಯಕರವಾಗಿ ಮಾರ್ಪಡಿಸಲು ಸಾಧ್ಯವಾಗಲೇ ಇಲ್ಲ. ಅಂದರೆ ಈ ಉತ್ಪನ್ನಗಳು ಎಂದಿಗೂ ಆರೋಗ್ಯಕರವಾಗಿರಲು ಸಾಧ್ಯವೇ ಇಲ್ಲ ಎಂದು ಕಂಪನಿ ಹೇಳಿದೆ. ಹೀಗಾಗಿ ಕಂಪನಿ ಇದೀಗ ಸಂಪೂರ್ಣ ಪೋರ್ಟ್ ಪೋಲಿಯೋವನ್ನೇ ಬದಲಾಯಿಸುವ ಬಗ್ಗೆ ಯೋಚಿಸುತ್ತಿದೆ.  

ನೆಸ್ಲೆಯಿಂದ ಬಂದ ಉತ್ತರ ಇದು : 
ಈ ವರದಿ ಮುನ್ನೆಲೆಗೆ ಬರುತ್ತಿದ್ದಂತೆ, ನೆಸ್ಲೆ ಯಿಂದ ಉತ್ತರ ಬಂದಿದೆ. ಪೌಷ್ಠಿಕ ಉತ್ಪನ್ನಗಳನ್ನು ಮಾತ್ರ ಗ್ರಾಹಕರಿಗೆ (customers) ಮಾರಾಟ ಮಾಡಲು ಪ್ರಯತ್ನಿಸುವುದಾಗಿ ಕಂಪನಿ ಹೇಳಿದೆ. ಉತ್ಪನ್ನಗಳಲ್ಲಿ ಸಕ್ಕರೆ (Sugar) ಮತ್ತು ಸೋಡಿಯಂ (Sodium) ಪ್ರಮಾಣವನ್ನು ಕಡಿಮೆ ಮಾಡಿರುವುದಾಗಿಯೂ ಹೇಳಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News