ಕ್ರಾಂತಿಯ ಬಗ್ಗೆ ಸುಮ್ನೆ ಚರ್ಚೆ ನಡೆಯುತ್ತಿದೆ ಅಷ್ಟೆ
ಪಕ್ಷದೊಳಗೆ ಈ ಬಗ್ಗೆ ಯಾವ ಚರ್ಚೆ ನಡೆಯುತ್ತಿಲ್ಲ
ತಿಂಗಳ ಅಂತ್ಯದಲ್ಲಿ ಸಂಪುಟ ಪುನಾರಚನೆ ಆಗುತ್ತೆ
ನನಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ
Karnataka Cabinet reshuffle : ರಾಜ್ಯ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿಗೆ ಮುಹೂರ್ಥ ಫಿಕ್ಸ್ ಆಗಿದೆ. ಸಚಿವ ಸಂಪುಟ ಪುನರ್ ರಚನೆ ಆಗೋದು ಬಹುತೇಕ ಕನ್ಫರ್ಮ್ ಆಗಿದ್ದು, ಸಚಿವರಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.ನಿನ್ನೆ ರಾತ್ರಿ ಸಿಎಂ ಡಿನ್ನರ್ ಮೀಟಿಂಗ್ ಮುಗಿಸಿ ಬಹುತೇಕ ಸಚಿವರು,ಟೆನ್ಷನ್ ನಿಂದಲೇ ಮನೆಗಳಿಗೆ ತೆರಳಿದ್ದಾರೆ.. ಕೆಲವರು ಮಂತ್ರಿಗಿರಿ ಉಳಿಸಿಕೊಳ್ಳಲು ತೀವ್ರ ಕಸರತ್ತು ಶುರುಮಾಡಿದ್ದಾರೆ.
ಡಿನ್ನರ್ ಮೀಟಿಂಗ್‌ನಲ್ಲಿ 6 ವಿಷಯಗಳ ಬಗ್ಗೆ ಚರ್ಚೆ
ಸರ್ಕಾರಿ ಆಸ್ತಿಗಳಲ್ಲಿ RSS ಚಟುವಟಿಕೆ ಬ್ಯಾನ್ ವಿಚಾರ
ಸಚಿವ ಸಂಪುಟ ಪುನರ್ ರಚನೆ ಮತ್ತು ಸಮೀಕ್ಷೆ ಬಗ್ಗೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮತ್ತು
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ
ಬಿಹಾರ್ ವಿಧಾನಸಭೆ ಚುನಾವಣೆ ಹಾಗೂ ಅನುದಾನ
ಬಳಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ
ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ನೇರ ಮಾತುಕತೆ
ನವೆಂಬರ್ ಕ್ರಾಂತಿ ಮಧ್ಯೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಕರೆದಿದ್ದಾರೆ. ಆಪ್ತ ಶಾಸಕ, ಸಚಿವರಿಗೆ ಊಟಕ್ಕೆ ಆಹ್ವಾನ ನೀಡಿರುವ ಸಿಎಂ ಸಚಿವರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸಂಪುಟ ಪುನಾರಚನೆ ಮುನ್ನ ಸಿಎಂ ಔತಣಕೂಟ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನವೆಂಬರ್ ವೇಳೆಗೆ ಸಂಪುಟ ಪುನಾರಚನೆ ಸಾಧ್ಯತೆ
14 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ
ಬಿಹಾರ ಚುನಾವಣೆ ಬಳಿಕ ಭಾರೀ ಬದಲಾವಣೆ
ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್,
ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್,
ಸಿಎಂ ಸಿದ್ದರಾಮಯ್ಯ ಔತಣಕೂಟ ಆಯೋಜನೆ
ಸಚಿವರಿಗೆ ದಿಢೀರ್ ಡಿನ್ನರ್ ಮೀಟಿಂಗ್ ಆಯೋಜನೆ
ಸೋಮವಾರ ರಾತ್ರಿ ಸಚಿವರನ್ನು ಊಟಕ್ಕೆ ಆಹ್ವಾನ
ಕಾವೇರಿ ನಿವಾಸದಲ್ಲಿ ನಡೆಯಲಿರುವ ಡಿನ್ನರ್ ಮೀಟಿಂಗ್
ಮೀಟಿಂಗ್ ನೆಪದಲ್ಲಿ ಪಕ್ಷದೊಳಗಿನ ವಿದ್ಯಮಾನಗಳ ಬಗ್ಗೆ ಚರ್ಚೆ
ನವೆಂಬರ್ ವೇಳೆಗೆ ಸಂಪುಟ ಪುನಾರಚನೆಯ ಗುಸುಗುಸು
14-16 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಸಾಧ್ಯತೆ
ಬಿಹಾರ್ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ
ರಾಜ್ಯ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್‌ನಿಂದ ದೆಹಲಿಗೆ ತುರ್ತು ಬುಲಾವ್ ಬಂದಿದ್ದು, ಜೂನ್ 5 ಅಥವಾ 6 ರಂದು ಈ ಮಹತ್ವದ ಭೇಟಿ ನಡೆಯುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಯ ಕುರಿತು ಹೇಳಿಕೆ ನೀಡಿದ್ದು, ಅಕಾಂಕ್ಷಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಹಗರಣಗಳ ತನಿಖೆ, ಸಿಎಂ ವಿಚಾರಣೆ ಮುಗಿದ ನಂತರ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ಮುಂದಾಗುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಿಂದ ವಾಪಸ್ ಆದ ನಂತರ, ಇಬ್ಬರು ನಾಯಕರು ಪರಸ್ಪರ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಸಿಎಂ ಡಿಸಿಎಂ ಪಕ್ಷದ ಆಂತರಿಕ ವಿಚಾರವಾಗಿ ದೆಹಲಿಗೆ ತೆರಳಿದ್ದಾರೆ
ಸಚಿವ ಸಂಪುಟ ವಿಸ್ತರಣೆ ಮಾಡುವ ಅಧಿಕಾರ ಸಿಎಂ ಡಿಸಿಎಂಗೆ ಇದೆ
ಅವರು ಯಾವುದೇ ಪಟ್ಟಿ ಹಿಡಿದುಕೊಂಡು ದೆಹಲಿಗೆ ತೆರಳಿಲ್ಲ ಅದರ ಬಗ್ಗೆ ಅವರನ್ನೇ ಕೇಳಬೇಕು
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಮೊದಲಿಂದಲೂ ಚರ್ಚೆ ಇದೆ ಅದು ಹೊಸದೇನಲ್ಲ
ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈಬಗ್ಗೆ ಚರ್ಚೆ ಇದೆ
Cabinet Reshuffle: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಿಡಬ್ಲುಸಿ ಸಭೆಗಾಗಿ ದೆಹಲಿಗೆ ಹೋಗಿದ್ದಾರೆ. ಸಚಿವ ಸಂಪುಟ ಪುನಾರಚನೆ ಹೋಗಿದ್ದಲ್ಲ. ಈ ಕುರಿತು ಯಾವುದೇ ಚರ್ಚೆಗಳು ಆಗಿಲ್ಲ.
MUDA and Valmiki Corporation scam: ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಸಚಿವ ಸಂಪುಟ ಪುನರಚನೆ ಮಾಡುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯನವರು, ಯಾವುದೇ ಸಚಿವ ಸಂಪುಟ ರಚನೆ ಇಲ್ಲ, ನಾನೇ ಚೀಫ್ ಮಿನಿಸ್ಟರ್ ಆಗಿರುತ್ತೇನೆ ಅಂತಾ ಸ್ಪಷ್ಟನೆ ನೀಡಿದ್ದಾರೆ.
Andra Pradesh : ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಆಂಧ್ರಪ್ರದೇಶ ತನ್ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮಿತ್ರ ಪಕ್ಷವಾದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎನ್ ಡಿ ಎ ಮೈತ್ರಿಕೂಟ ಸರ್ಕಾರದ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ತಮ್ಮ ಮೊದಲ ಸಂಪುಟ ಸಭೆಯನ್ನು ನಡೆಸಿದ್ದಾರೆ.ಈ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ಮೊದಲ ನಿರ್ಧಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.