ಇನ್ನೂ ITR ಫೈಲ್ ಮಾಡಿಲ್ಲವೇ? ಚಿಂತೆ ಬೇಡ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇನ್ನೂ ಇದೆ ಅವಕಾಶ

ಜನರು 31 ಜುಲೈ 2023 ರೊಳಗೆ ITR ಅನ್ನು ಸಲ್ಲಿಸಿದ್ದರೆ, ಹೆಚ್ಚುವರಿ ಶುಲ್ಕವನ್ನು ಕೂಡಾ ಪಾವತಿಸಬೇಕಾಗಿಲ್ಲ. ಇದುವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸದವರಿಗೆ ಇನ್ನೂ ಕೂಡಾ ಐಟಿಆರ್ ಸಲ್ಲಿಸಲು ಅವಕಾಶವಿದೆ. 

Written by - Ranjitha R K | Last Updated : Aug 8, 2023, 09:05 AM IST
  • ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಮುಗಿದಿದೆ.
  • ಇನ್ನು ಕೂಡಾ ಅನೇಕರು ITR ಸಲ್ಲಿಸುವುದು ಸಾಧ್ಯವಾಗಿಲ್ಲ.
  • ಈ ರೀತಿ ಡಿ. 31 ರೊಳಗೆ ತೆರಿಗೆ ರಿಟರ್ನ್ ಸಲ್ಲಿಸಬಹುದು
ಇನ್ನೂ ITR ಫೈಲ್ ಮಾಡಿಲ್ಲವೇ? ಚಿಂತೆ ಬೇಡ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇನ್ನೂ ಇದೆ ಅವಕಾಶ  title=

ಬೆಂಗಳೂರು : ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಮುಗಿದಿದೆ. ವೇತನ ಪಡೆಯುವ ವರ್ಗ 31 ಜುಲೈ 2023 ರೊಳಗೆ ITR ಸಲ್ಲಿಸಬೇಕಾಗಿತ್ತು. ಆದರೆ, ಇನ್ನು ಕೂಡಾ ಅನೇಕರು ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಸಾಧ್ಯವಾಗಿಲ್ಲ. ಇದುವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸದವರಿಗೆ ಇನ್ನೂ ಕೂಡಾ ಐಟಿಆರ್ ಸಲ್ಲಿಸಲು ಅವಕಾಶವಿದೆ. 

ಆದಾಯ ತೆರಿಗೆ ರಿಟರ್ನ್ :
ಜನರು 31 ಜುಲೈ 2023ರೊಳಗೆ ITR ಅನ್ನು ಸಲ್ಲಿಸಿದ್ದರೆ, ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇನ್ನು ಆಗಸ್ಟ್ 1, ರಿಂದ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವುದಾದರೆ ಅವರಿಗೆ ಡಿಸೆಂಬರ್ 31, 2023 ರವರೆಗೆ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ, ವಿಳಂಬ ಶುಲ್ಕವನ್ನು ಪಾವತಿಸಬೇಕಾಗಿ ಬರಬಹುದು.  

ಇದನ್ನೂ ಓದಿ : ಅತ್ಯಲ್ಪ ಹೂಡಿಕೆ ಮಾಡಿ ಈ ಸೂಪರ್ ಹಿಟ್ ವ್ಯವಸಾಯ ಆರಂಭಿಸಿ, ತಿಂಗಳಿಗೆ 8 ಲಕ್ಷ ಆದಾಯ ಕೊಡುತ್ತೇ!

ತೆರಿಗೆ ಪದ್ಧತಿ : 
ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವವರು 2022-23ರ ಹಣಕಾಸು ವರ್ಷದಲ್ಲಿ ತಮ್ಮ ಗಳಿಕೆಯನ್ನು ಡಿಸೆಂಬರ್ 31 ರೊಳಗೆ ಲೇಟ್ ಫೀಸ್  ಪಾವತಿಸುವ ಮೂಲಕ ಬಹಿರಂಗಪಡಿಸಬಹುದು. ಪ್ರಸ್ತುತ ಎರಡು ಆದಾಯ ತೆರಿಗೆ ಪದ್ಧತಿಗಳಿವೆ. ಇವುಗಳಲ್ಲಿ ಒಂದು ಹೊಸ ತೆರಿಗೆ ಪದ್ಧತಿ ಮತ್ತು ಒಂದು ಹಳೆಯ ತೆರಿಗೆ ಪದ್ಧತಿ. ಜನರು ತಮ್ಮ ಆದಾಯ ಮತ್ತು ಆದ್ಯತೆಗಳ ಪ್ರಕಾರ ITR ಅನ್ನು ಸಲ್ಲಿಸಲು ಈ ಯಾವುದೇ  ಪದ್ದತಿಯನ್ನು ಆಯ್ಕೆ ಮಾಡಬಹುದು.

ಮತ್ತೊಂದೆಡೆ, ಡಿಸೆಂಬರ್ 31, 2023 ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ತಮ್ಮ ಆದಾಯಕ್ಕೆ ಅನುಗುಣವಾಗಿ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜನರ ಆದಾಯವು ತೆರಿಗೆಗೆ ಒಳಪಡದಿದ್ದರೆ ಅವರು ವಿಳಂಬ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮತ್ತೊಂದೆಡೆ, ಜನರ ಆದಾಯವು ತೆರಿಗೆಗೆ ಒಳಪಟ್ಟಿದ್ದು, ಆದಾಯ 5 ಲಕ್ಷಕ್ಕಿಂತ ಕಡಿಮೆಯಿದ್ದರೆ, ಅವರು 1000 ರೂಪಾಯಿಗಳ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ, ಜನರ ಆದಾಯವು ವಾರ್ಷಿಕವಾಗಿ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಅಂತಹವರು ವಿಳಂಬ ಶುಲ್ಕವಾಗಿ 5000 ರೂ. ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : ಪಿಪಿ ಎಫ್ ನಲ್ಲಿ ಹೂಡಿಕೆ ಮಾಡಿದವರಿಗೆ ಗುಡ್ ನ್ಯೂಸ್ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News