BHIM UPI ಹಾಗೂ Rupay Card ಬಳಕೆದಾರರಿಗೆ ಭಾರಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ

Cabinet Decisions: ದೇಶದಲ್ಲಿ ಸಾಮಾನ್ಯ ಜನರ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟ ಇಂದು 2600 ಕೋಟಿ ರೂ.ಗಳ ಪ್ರೋತ್ಸಾಹ ಧನವನ್ನು ಘೋಷಿಸಿದೆ.  

Written by - Nitin Tabib | Last Updated : Jan 11, 2023, 05:29 PM IST
  • ಕೇಂದ್ರ ಸಚಿವ ಸಂಪುಟದ ಈ ನಿರ್ಧಾರಗಳ ಅಡಿಯಲ್ಲಿ ಬ್ಯಾಂಕ್‌ಗಳಿಗೂ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
  • ನೀವು ಪಾಯಿಂಟ್ ಆಫ್ ಸೇಲ್ (PoS) ಮತ್ತು ರುಪೇ ಕಾರ್ಡ್ ಮೂಲಕ ಮಾಡಲಾಗುವ
  • ಇ-ಕಾಮರ್ಸ್ ವಹಿವಾಟುಗಳಲ್ಲಿ ವಿವಿಧ ರೀತಿಯಲ್ಲಿ ಪ್ರೋತ್ಸಾಹವನ್ನು ಪಡೆಯಲು ಸಾಧ್ಯವಾಗಲಿದೆ.
BHIM UPI ಹಾಗೂ Rupay Card ಬಳಕೆದಾರರಿಗೆ ಭಾರಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ title=
Union Cabinet Decisions

Cabinet Meeting Decisions: ಪ್ರತಿ ಬುಧವಾರ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಪ್ರಮುಖ ನಿರ್ಧಾರಗಳಿಗೆ ಅನುಮೋದನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಇಂದು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಕೆಲ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಗಿದೆ. ಇದರಿಂದ, ಸಾರ್ವಜನಿಕರಿಗೆ ಹಣಕಾಸಿನ ವಹಿವಾಟು ಮತ್ತು ಡಿಜಿಟಲ್ ವಹಿವಾಟುಗಳು ಮತ್ತಷ್ಟು ಸುಲಭವಾಗಳಿವೆ ಮತ್ತು ಅವರಿಗೆ ಪ್ರೋತ್ಸಾಹ ಸಿಗಲಿದೆ.

ಇಂದು ಹೊರಬಿದ್ದ ನಿರ್ಧಾರಗಳು ಯಾವುವು?
ಇದಕ್ಕಾಗಿ ಕೇಂದ್ರ ಸಚಿವ ಸಂಪುಟವು ಸುಮಾರು 2600 ಕೋಟಿ ಮೌಲ್ಯದ ಪ್ರೋತ್ಸಾಹವನ್ನು ಘೋಷಿಸಿದೆ. ಇದರ ಅಡಿಯಲ್ಲಿ, ಜನರು 2022-23 ರ ಆರ್ಥಿಕ ವರ್ಷಕ್ಕೆ ರುಪೇ ಡೆಬಿಟ್ ಕಾರ್ಡ್ ಮತ್ತು BHIM UPI ಬಳಕೆಗೆ ಪ್ರೋತ್ಸಾಹವನ್ನು ಪಡೆಯಲಿದ್ದಾರೆ. ಈ ಪ್ರೋತ್ಸಾಹಕಗಳನ್ನು P2M (ಪರ್ಸನ್ ಟು ಮರ್ಚೆಂಟ್) ಆಧಾರದ ಮೇಲೆ ನೀಡಲಾಗುವುದು ಎನ್ನಲಾಗಿದೆ.

ಸುದ್ದಿಗೋಷ್ಠಿ ನಡೆಸಿದ ಸಂಪುಟ ಸಚಿವ ಭೂಪೇಂದ್ರ ಯಾದವ್ 
ಸಂಪುಟದಲ್ಲಿ ಕೈಗೊಂಡ ನಿರ್ಧಾರದ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಪುಟ ಸಚಿವ ಭೂಪೇಂದ್ರ ಯಾದವ್, ಕೇಂದ್ರ ಸರ್ಕಾರ ಘೋಷಿಸಿರುವ 2600 ಕೋಟಿ ರೂ.ಗಳ ಪ್ರೋತ್ಸಾಹಧನದಡಿಯಲ್ಲಿ MSMEಗಳು, ರೈತರು, ಕಾರ್ಮಿಕರು ಮತ್ತು ಕೈಗಾರಿಕೆಗಳು BHIM UPI ಅಡಿಯಲ್ಲಿ ಮಾಡಿದ ಪಾವತಿಗಳಿಗೆ ಅರ್ಹರಾಗಿರುತ್ತಾರೆ. ಸ್ವಲ್ಪ ರಿಯಾಯಿತಿ ಸಿಗಲಿದೆ. ಡಿಜಿಟಲ್ ಪಾವತಿಗಳನ್ನು ಸುಲಭ ಮತ್ತು ಸರ್ವಾಗಿಗ್ಸಲು ಕೇಂದ್ರ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ.

>> ರುಪೇ ಕಾರ್ಡ್ ಮೂಲಕ ವಹಿವಾಟುಗಳು ಈ ದೊಡ್ಡ ಪ್ರೋತ್ಸಾಹವನ್ನು ಪಡೆಯಲಿವೆ
>> ರುಪೇ ಕಾರ್ಡ್ ಮೂಲಕ ಡಿಜಿಟಲ್ ಪಾವತಿಗೆ ಶೇಕಡಾ 0.4 ರಷ್ಟು ಪ್ರೋತ್ಸಾಹಧನ ನೀಡಲಾಗುವುದು ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ.
>> ಇದೆ ರೀತಿ BHIM UPI ಮೂಲಕ 2000 ರೂಪಾಯಿಗಿಂತ ಕಡಿಮೆ ವಹಿವಾಟು ನಡೆಸಿದರೆ ಶೇಕಡಾ 0.25 ರಷ್ಟು ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
>> ವಿಮೆ, ಮ್ಯೂಚುವಲ್ ಫಂಡ್‌ಗಳು, ಆಭರಣಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇತರ ವಿಭಾಗಗಳಂತಹ ಉದ್ಯಮ ಬಳಕೆಗಾಗಿ BHIM UPI ಮೂಲಕ ಡಿಜಿಟಲ್ ಪಾವತಿಗಳಿಗೆ ಈ ಪ್ರೋತ್ಸಾಹವನ್ನು ಶೇಕಡಾ 0.15 ಕ್ಕೆ ನಿಗದಿಪಡಿಸಲಾಗಿದೆ.

ಕೇಂದ್ರ ಸಚಿವ ಸಂಪುಟದ ಈ ನಿರ್ಧಾರಗಳ ಅಡಿಯಲ್ಲಿ ಬ್ಯಾಂಕ್‌ಗಳಿಗೂ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ನೀವು ಪಾಯಿಂಟ್ ಆಫ್ ಸೇಲ್ (PoS) ಮತ್ತು ರುಪೇ ಕಾರ್ಡ್ ಮೂಲಕ ಮಾಡಲಾಗುವ ಇ-ಕಾಮರ್ಸ್ ವಹಿವಾಟುಗಳಲ್ಲಿ ವಿವಿಧ ರೀತಿಯಲ್ಲಿ ಪ್ರೋತ್ಸಾಹವನ್ನು ಪಡೆಯಲು ಸಾಧ್ಯವಾಗಲಿದೆ. ಕಡಿಮೆ ಮೌಲ್ಯದ BHIM-UPI ವಹಿವಾಟುಗಳ ಮೇಲೆ ನೀವು ಕೆಲವು ಪ್ರೋತ್ಸಾಹವನ್ನು ಪಡೆಯುತ್ತೀರಿ.

ಯುಪಿಐ ಪಾವತಿಯ ಮೂಲಕ ಮಾಡಿದ ವಹಿವಾಟಿನ ಸಂಖ್ಯೆಯು ಡಿಸೆಂಬರ್‌ನಲ್ಲಿ 12 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ, ಇದು ದೇಶದ ಒಟ್ಟು ಜಿಡಿಪಿಯ ಶೇಕಡಾ 54 ರಷ್ಟಿದೆ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ. ಇದನ್ನು ಮತ್ತಷ್ಟು ಹೆಚ್ಚಿಸಲು, ಈ 2600 ಕೋಟಿ ರೂ.ಗಳ ಐಟಂ ಅಡಿಯಲ್ಲಿ ಗರಿಷ್ಠ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ-Income Tax: ಈ ಜನರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ, ಬಜೆಟ್ ಗೂ ಮುನ್ನವೇ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ

ಯೋಜನೆಯಡಿಯಲ್ಲಿ, ಪ್ರಸಕ್ತ ಹಣಕಾಸು ವರ್ಷದಲ್ಲಿ 'ಪಾಯಿಂಟ್ ಆಫ್ ಸೇಲ್' (ಪಿಒಎಸ್) ಪಾವತಿ ಯಂತ್ರಗಳು ಮತ್ತು ರುಪೇ ಮತ್ತು ಯುಪಿಐ ಬಳಸಿ ಇ-ಕಾಮರ್ಸ್ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕ್‌ಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಇದು ದೃಢವಾದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುತ್ತದೆ. ಕಡಿಮೆ ವೆಚ್ಚದ ಮತ್ತು ಬಳಸಲು ಸುಲಭವಾದ UPI ಲೈಟ್ ಮತ್ತು UPI 123 ಪೇ ಅನ್ನು ಸಹ ಯೋಜನೆಯ ಅಡಿಯಲ್ಲಿ ಪ್ರಚಾರ ಮಾಡಲಾಗುವುದು.

ಇದನ್ನೂ ಓದಿ-Small Loan: ಹೊಸ ವರ್ಷಾರಂಭದಲ್ಲಿಯೇ ಮೋದಿ ಸರ್ಕಾರದ ಮಹತ್ವದ ಘೋಷಣೆ, ಈ ಜನರಿಗೆ ಸಿಗಲಿದೆ 5000 ರೂ.ಧನಸಹಾಯ

ಮೂರು ಹೊಸ ಸಹಕಾರ ಸಂಘಗಳ ರಚನೆಗೆ ಘೋಷಣೆ
ದೇಶಾದ್ಯಂತ ಮೂರು ಹೊಸ ಸಹಕಾರ ಸಂಘಗಳನ್ನು ರಚಿಸುವುದಾಗಿಯೂ ಈ ಸಂಧರ್ಭದಲ್ಲಿ ಘೋಷಿಸಲಾಗಿದೆ ಎಂದು ಭೂಪೇಂದ್ರ ಯಾದವ್ ತಿಳಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News