ಬೆಂಗಳೂರು :ಮಹಿಳೆಯರು ಹೂಡಿಕೆ ಮಾಡುವ ಮೂಲಕ ಖಾತರಿಯ ಆದಾಯವನ್ನು ಪಡೆಯಲು ಬಯಸುವುದಾದರೆ ಈ ಸುದ್ದಿ ನಿಮಗಾಗಿ ಆಗಿದೆ.ಮೋದಿ ಸರ್ಕಾರವು 2023ರಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು. ಇದನ್ನು'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ'ಎಂದು ಕರೆಯಲಾಗುತ್ತದೆ.ಇದು ಅಲ್ಪಾವಧಿಯ ಹೂಡಿಕೆ ಯೋಜನೆ.ಇದರಲ್ಲಿ ಯಾವುದೇ ಮಹಿಳೆ ಹೂಡಿಕೆ ಮಾಡಬಹುದು.ಈ ಯೋಜನೆಯಲ್ಲಿ ಗ್ರಾಹಕರು 7.50 ಪ್ರತಿಶತ ಚಕ್ರಬಡ್ಡಿಯನ್ನು ಪಡೆಯುತ್ತಾರೆ.
ಎಷ್ಟು ಹೂಡಿಕೆ ಮಾಡಬಹುದು ? :
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಮುಕ್ತಾಯ ಅವಧಿಯು 2 ವರ್ಷಗಳು.ಈ ಯೋಜನೆಯಡಿ ಯಾವುದೇ ಮಹಿಳೆ 1000 ರೂ.ನಿಂದ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಯಾವುದೇ ವಯಸ್ಸಿನ ಮಹಿಳೆಯರು ಖಾತೆಯನ್ನು ತೆರೆಯಬಹುದು.18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯಾಗಿದ್ದರೆ ಪೋಷಕರ ಮೇಲ್ವಿಚಾರಣೆಯಲ್ಲಿ ಖಾತೆಯನ್ನು ತೆರೆಯಬಹುದು.
ಇದನ್ನೂ ಓದಿ : EPFO ಸದಸ್ಯರಿಗೆ ಉಚಿತವಾಗಿ ಸಿಗುತ್ತದೆ ಈ ಸೌಲಭ್ಯ, ಆದರೆ ನಿಯಮ ಗೊತ್ತಿರಲಿ!
ಖಾತೆ ತೆರೆಯುವುದು ಹೇಗೆ ? :
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ,ಅಂಚೆ ಕಚೇರಿ ಅಥವಾ ಸರ್ಕಾರಿ ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯಬಹುದು. ಖಾತೆ ತೆರೆಯುವ ಸಮಯದಲ್ಲಿ ನೀವು ಫಾರ್ಮ್ ಅನ್ನು ಸಲ್ಲಿಸಿ, KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.ಅದಕ್ಕಾಗಿ ನಿಮಗೆ ಆಧಾರ್ ಕಾರ್ಡ್,ಪ್ಯಾನ್ ಕಾರ್ಡ್ ಮತ್ತು ಪಾಸ್ಪೋರ್ಟ್ ಅಳತೆಯ ಫೋಟೋ ಬೇಕಾಗುತ್ತದೆ.ಇದಾದ ನಂತರ ಎರಡು ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು.
ಮೆಚ್ಯೂರಿಟಿಯ ಮೊದಲು ಹಣವನ್ನು ಹಿಂಪಡೆಯಬಹುದು :
ಈ ಯೋಜನೆಯಡಿಯಲ್ಲಿ ಸರ್ಕಾರವು ಅಕಾಲಿಕ ಹಿಂಪಡೆಯುವಿಕೆಗೂ ಅವಕಾಶ ಕಲ್ಪಿಸಿದೆ. ಈ ಯೋಜನೆಯಡಿಯಲ್ಲಿ, ಖಾತೆದಾರನು 1 ವರ್ಷದ ನಂತರ ತನ್ನ ಠೇವಣಿಯ ಶೇಕಡಾ 40 ರಷ್ಟು ಹಿಂಪಡೆಯಬಹುದು.ಇದರ ಹೊರತಾಗಿ, ಯಾವುದೇ ಸಂದರ್ಭದಲ್ಲಿ ಖಾತೆದಾರರು ಮರಣಹೊಂದಿದರೆ,ನಾಮಿನಿ ಇದನ್ನು ಕ್ಲೈಮ್ ಮಾಡಬಹುದು. ಖಾತೆದಾರರು ಯಾವುದೇ ಕಾರಣಕ್ಕೂ ಅವಧಿಗೆ ಮುನ್ನವೇ ಖಾತೆಯನ್ನು ಮುಚ್ಚಿದರೆ ಶೇ.7.50ರ ಬದಲಿಗೆ ಶೇ.5.50 ಬಡ್ಡಿದರ ಸಿಗುತ್ತದೆ.
ಇದನ್ನೂ ಓದಿ : FD ಹೂಡಿಕೆ ಮಾಡುವವರಿಗೊಂದು ಗುಡ್ ನ್ಯೂಸ್, ಈ ಬ್ಯಾಂಕ್ ಗಳಲ್ಲಿ PPF-SSY ಗಿಂತ ಹೆಚ್ಚು ಬಡ್ಡಿ ಸಿಗುತ್ತಿದೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.