Yamaha EMF: ಜಬರ್ದಸ್ತ್ ಲುಕ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ Yamaha ಇಲೆಕ್ಟ್ರಿಕ್ ಸ್ಕೂಟರ್

Yamaha ತನ್ನ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ EMF ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಸ್ವೈಪೆಬಲ್ ಬ್ಯಾಟರಿಗಳಿಗಾಗಿ ಕಂಪನಿಯು Gogoro ಜೊತೆ ಕೈಜೋಡಿಸಿದೆ.

Written by - Nitin Tabib | Last Updated : Jan 23, 2022, 10:25 PM IST
  • Yamaha EMF ಇಲೆಕ್ಟ್ರಿಕ್ ಬೈಕ್ ಬಿಡುಗಡೆ
  • ಸ್ವೈಪೆಬಲ್ ಬ್ಯಾಟರಿಗಳಿಗಾಗಿ ಕಂಪನಿಯು Gogoro ಜೊತೆ ಕೈಜೋಡಿಸಿದೆ
  • ಅದ್ಭುತ ಲುಕ್ ಜೊತೆಗೆ ಜಬರ್ದಸ್ತ್ ಸ್ಟೈಲ್
Yamaha EMF: ಜಬರ್ದಸ್ತ್ ಲುಕ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ Yamaha ಇಲೆಕ್ಟ್ರಿಕ್ ಸ್ಕೂಟರ್ title=
Yamaha EMF (File Photo)

ನವದೆಹಲಿ: ಯಮಹಾ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ EMF ಅನ್ನು ಬಿಡುಗಡೆ ಮಾಡಿದೆ. ಕಂಪನಿ ಇದನ್ನು ಗೊಗೊರೊ ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಿದೆ. 2019 ರಲ್ಲಿ EC-05 ನೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ವಿಭಾಗಕ್ಕೆ ಪ್ರವೇಶಿಸಿದ ನಂತರ ಇದು ಕಂಪನಿಯ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಯಮಹಾ ಮಾತ್ರವಲ್ಲ, ಹೀರೋ ಮೋಟೋಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿ ಗೊಗೊರೊ ಜೊತೆ ಸಹಭಾಗಿತ್ವವನ್ನು ಹೊಂದಿದೆ. ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ದೃಢವಾದ ನೆಟ್‌ವರ್ಕ್ ಮತ್ತು ಬ್ಯಾಟರಿಯ ಆರ್ಕಿಟೆಕ್ಟ್ ಗಳಂತಹ ಇತರ ಪ್ರಯೋಜನಗಳ ಜೊತೆಗೆ ಕೆಲವು ಪ್ರಯೋಜನಗಳ ದೃಷ್ಟಿಯಿಂದ ವಾಹನ ತಯಾರಕರು ಗೊಗೊರೊ ಜೊತೆ ಪಾಲುದಾರಿಕೆ ಹೊಂದಿದ್ದಾರೆ. ಇದು ಎರಡೂ ಕಂಪನಿಗಳಿಗೆ ಲಾಭದಾಯಕ ಒಪ್ಪಂದವಾಗಿದೆ.

ಇದನ್ನೂ ಓದಿ-SEBI Settlement Cycle: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರಿಗೊಂದು Big News! ಜಾರಿಯಾಗುತ್ತಿದೆ T+1 ಸೆಟಲ್ಮೆಂಟ್ ಸೈಕಲ್

ಲೈಟ್ ಬ್ಲೂ, ಡಾರ್ಕ್ ಗ್ರೀನ್ ಹಾಗೂ ಡಾರ್ಕ್ ಬ್ಲಾಕ್ ನಲ್ಲಿ ಲಭ್ಯವಿರಲಿದೆ
ಯಮಹಾ ಇಎಮ್‌ಎಫ್, ಕಂಪನಿಗೆ ಸ್ಟೈಲಿಂಗ್‌ನ ಹೊಸ ಯುಗ ಆರಂಭಿಸಿದೆ ಎಂದೇ ಹೇಳಬಹುದು. ವಿನ್ಯಾಸ, ನೋಟ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಇದು ಇತರ ಯಮಹಾ ಸ್ಕೂಟರ್‌ಗಳಿಗಿಂತ ಭಿನ್ನವಾಗಿದೆ. ಕಂಪನಿಯು ಈ ಸ್ಕೂಟರ್ ಅನ್ನು ತಿಳಿ ನೀಲಿ, ಗಾಢ ಹಸಿರು ಮತ್ತು ಗಾಢ ಕಪ್ಪು ಬಣ್ಣಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ನಾವು ವೈಶಿಷ್ಟ್ಯಗಳನ್ನು ನೋಡಿದರೆ, ಇದರಲ್ಲಿ ಫ್ಲಾಟ್ ಫ್ರಂಟ್ ಏಪ್ರನ್, ಎಲ್ಇಡಿ ಹೆಡ್ಲೈಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವಿಶಿಷ್ಟ ಶೈಲಿಯ ಎಲ್ಇಡಿ ಲೈಟ್ಗಳು ಮತ್ತು ಸಿಂಗಲ್ ಪೀಸ್ ಸೀಟ್ ನೀಡಲಾಗಿದೆ. ಇದಲ್ಲದೆ, ಕೆಲವು ವಸ್ತುಗಳನ್ನು ಇಡಲು ನೆಲದ ಮೇಲೆ ಸಣ್ಣ ಸಂಗ್ರಹ ಪೆಟ್ಟಿಗೆಯನ್ನು ನೀಡಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ ಸುಮಾರು 2.77 ಲಕ್ಷ ರೂಪಾಯಿಗಳಾಗಿದೆ.

ಇದನ್ನೂ ಓದಿ-Budget 2022: ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ, 8 ವರ್ಷಗಳ ಬಳಿಕ ಸಿಗಲಿದೆ ಈ ಲಾಭ!

3.5 ಸೆಕೆಂಡ್ ನಲ್ಲಿ ಈ ಸ್ಕೂಟರ್ 0-50 ಕಿ.ಮಿ/ಗಂಟೆ ವೇಗ ಪಡೆಯುತ್ತದೆ
ಇದು ಫ್ಲೀಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಮತ್ತು ಲಾಸ್ಟ್ ಪಾರ್ಕಿಂಗ್ ಲೊಕೇಶನ್‌ನಂತಹ ವೈಶಿಷ್ಟ್ಯಗಳೊಂದಿಗೆ ಸಂಪರ್ಕಿತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. Yamaha EMF ಅನ್ನು ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾಗಿದೆ. ಇದು 110.30 PS ಪವರ್ ಮತ್ತು 26 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತಿದೆ. 3.5 ಸೆಕೆಂಡುಗಳಲ್ಲಿ, ಈ ಸ್ಕೂಟರ್ 0-50 ಕಿಮೀ / ಗಂ ವೇಗವನ್ನು ಪಡೆಯುತ್ತದೆ. ಸ್ಕೂಟರ್‌ನಿಂದ ಬ್ಯಾಟರಿ ಬೇರ್ಪಡುತ್ತದೆ ಮತ್ತು ಇಲ್ಲಿಯೇ ಗೊಗೊರೊ ಸೌಲಭ್ಯಗಳು ಪ್ರಾರಂಭವಾಗುತ್ತವೆ. ಮುಂಭಾಗದಲ್ಲಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಕಾಂಬಿ ಬ್ರೇಕಿಂಗ್‌ನೊಂದಿಗೆ ಬರುವ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ-Post Office ನಿಯಮಗಳಲ್ಲಿ ಬದಲಾವಣೆ, ಇನ್ಮುಂದೆ ಕೇವಲ ಪಾಸ್ಬುಕ್ ನಿಂದ ನೀವು ಈ ಕೆಲಸ ಮಾಡಲು ಸಾಧ್ಯವಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News