ಧಾರವಾಡ : ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಕೇಂದ್ರದಲ್ಲಿ, ಗ್ರಂಥಾಲಯ ವಿಜ್ಞಾನದ 4 ತಿಂಗಳ ಸರ್ಟಿಫೀಕೇಟ್ ಇನ್ ಲೈಬ್ರರಿ ಸೈನ್ಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: PSI Recruitment Scam : 'ಪಿಎಸ್ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು'
ಬೆಳಗಾವಿ ಕಂದಾಯ ವಿಭಾಗಳಿಗೆ ಒಳಪಡುವ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಕಾರವಾರ ವಿಜಯಪುರ, ಬಾಗಲಕೋಟ ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಬಹುದು.ಆಸಕ್ತರು ಉಪನಿರ್ದೇಶಕರು ಹಾಗೂ ಪ್ರಾಂಶುಪಾಲರು, ನಗರ ಕೇಂದ್ರ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಧಾರವಾಡ-580001 ಇವರ ಹೆಸರಿನಲ್ಲಿ ರೂ.20/-ಗಳ ಡಿಡಿಯನ್ನು ತುಂಬಿ ಅರ್ಜಿ ಪಡೆದು ಭರ್ತಿ ಮಾಡಿ, ಎಲ್ಲಾ ದೃಢೀಕೃತ ದಾಖಲೆಗಳೊಂದಿಗೆ ಮೇ 25 ರೊಳಗಾಗಿ ಸಲ್ಲಿಸಬೇಕು.
ಇದನ್ನೂ ಓದಿ: 'ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಬಿಜೆಪಿ ಮಂತ್ರಿಗಳಿಗೆ ಕಮಿಷನ್ ಹೋಗ್ತಾ ಇದೆ'
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2442183, 2441683 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.