KSET Exam Dress Code: ಇದೇ ಜನವರಿ 13ರಂದು ನಡೆಯಲಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಗೆ ಎಂದರೆ ಕೆ ಸೆಟ್ ಪರೀಕ್ಷೆ (KSET exam) ಗೆ ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು ವಸ್ತ್ರ ಸಂಹಿತೆಯನ್ನು ಪ್ರಕಟಿಸಿದೆ.
ಜನವರಿ 13, 2024 ರಂದು ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಈ ಮಾರ್ಗಸೂಚಿಗಳನ್ನು ಹಾಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಇದನ್ನೂ ಓದಿ- KSET 2023 Admit Card: KSET 2023 ಅಡ್ಮಿಟ್ ಕಾರ್ಡ್ ಬಿಡುಗಡೆ: ಇಲ್ಲಿದೆ ಡೌನ್ಲೋಡ್ ಲಿಂಕ್
ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಪುರುಷರಿಗೆ ಡ್ರೆಸ್ ಕೋಡ್ ಈ ಕೆಳಕಂಡಂತಿದೆ:
* ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಪುರುಷರು ಪೂರ್ಣ ತೋಳಿನ ಶರ್ಟ್ಗಳನ್ನು ಧರಿಸುವಂತಿಲ್ಲ. ಮಾತ್ರವಲ್ಲ, ಜೀನ್ಸ್ ಪ್ಯಾಂಟ್, ಕುರ್ತಾ ಪೈಜಾಮ ಧರಿಸಲು ಕೂಡ ಅವರಿಗೆ ಅನುಮತಿ ಇರುವುದಿಲ್ಲ.
* ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಪುರುಷರು ಪರೀಕ್ಷಾ ನಿಯಮಕ್ಕೆ ಅಡ್ಡಿಯಾಗದಂತೆ, ಮುಜುಗರಕ್ಕೆ ಎಡೆಯಾಗದಂತೆ ಹಾಫ್ ತೋಳಿನ ಶರ್ಟ್ ಧರಿಸಬೇಕು. ಇದರೊಂದಿಗೆ ಸಾಧಾರಣ ಪ್ಯಾಂಟ್ ಎಂದರೆ (ಜೇಬು ಇಲ್ಲದ / ಕಡಿಮೆ ಜೇಬು ಇರುವ) ಪ್ಯಾಂಟ್ ಧರಿಸಲು ಅವಕಾಶವಿದೆ.
* ಪರೀಕ್ಷಾ ಕೊಠಡಿಯೊಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
* ಪುರುಷರು ಶೂ ಬದಲಿಗೆ ಫ್ಲಾಟ್ ಚಪ್ಪಲಿ ಧರಿಸಿರಬೇಕು.
* ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು, ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗ ಧರಿಸುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ- ಗೃಹ ರಕ್ಷಕ ದಳದ ನೇಮಕಾತಿಗೆ ಅರ್ಜಿ ಆಹ್ವಾನ: SSLC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ
ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಮಹಿಳೆಯರಿಗೆ ಡ್ರೆಸ್ ಕೋಡ್ ಈ ಕೆಳಕಂಡಂತಿದೆ:
* ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಕಸೂತಿ ಹೊಂದಿರುವ ಉಡುಪುಗಳು, ಹೂವುಗಳನ್ನು ಹೊಂದಿರುವ ಬಟ್ಟೆ, ಫ್ರಿಲ್ಡ್, ಬಟನ್ಗಳನ್ನು ಹೊಂದಿರುವ ಉಡುಪುಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಇದಲ್ಲದೆ, ಮಹಿಳೆಯರು ಫುಲ್ ತೋಳಿನ ಉಡುಪುಗಳು ಮತ್ತು ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವುದನ್ನು ನಿಷೇಧಿಸಲಾಗಿದೆ.
* ಕೆ-ಸೆಟ್ ಪರೀಕ್ಷೆಗ ಹಾಜರಾಗುವ ಮಹಿಳಾ ಅಭ್ಯರ್ಥಿಗಳು ಮುಜುಗರಕ್ಕೆ ಎಡೆಯಾಗದಂತೆ ಅರ್ಧ ತೋಳಿನ ಬಟ್ಟೆಗಳನ್ನು ಧರಿಸಬೇಕು.
* ಪರೀಕ್ಷೆಗೆ ಹಾಜರಾಗುವ ಮಹಿಳಾ ಅಭ್ಯರ್ಥಿಗಳಿಗೆ ಹೈ ಹೀಲ್ಸ್ ಚಪ್ಪಲಿ, ಇಲ್ಲವೇ ಶೂಗಳನ್ನು ಧರಿಸಲು ಅನುಮತಿ ಇಲ್ಲ.
* ಪರೀಕ್ಷಾ ಕೊಠಡಿ ಒಳಗೆ ಪ್ರವೇಶಿಸುವಾಗ ಮಹಿಳಾ ಅಭ್ಯರ್ಥಿಗಳು ತೆಳು ಅಡಿಭಾಗದ ಚಪ್ಪಲಿಗಳನ್ನು ಧರಿಸುವುದು ಕಡ್ಡಾಯವಾಗಿದೆ.
* ಮಂಗಳಸೂತ್ರ ಮತ್ತು ಕಾಲುಂಗುರಕ್ಕಿಲ್ಲ ನಿರ್ಬಂಧ:
ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಧರಿಸಲು ಯಾವುದೇ ನಿರ್ಬಂಧ ಹೇರಲಾಗಿಲ್ಲ. ಆದರೆ, ಯಾವುದೇ ಲೋಹದ ಆಭರಣಗಳನ್ನು ಧರಿಸಲು ಅನುಮತಿ ಇರುವುದಿಲ್ಲ.
ಇದಲ್ಲದೆ, ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷಾ ಹಾಲ್ ಒಳಗೆ ಪ್ರವೇಶಿಸುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೊಫೋನ್, ಬ್ಲೂಟೂತ್ ಸಾಧನ ಮತ್ತು ಕೈ ಗಡಿಯಾರವನ್ನು ತರಬಾರದು. ಮಾತ್ರವಲ್ಲ, ಯಾವುದೇ ರೀತಿಯ ಮಾಸ್ಕ್ ಧರಿಸುವಂತಿಲ್ಲ, ತಲೆಯ ಮೇಲೆ ಟೋಪಿ ಧರಿಸುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.