Hubli News: ಪ್ರತಿಯೊಬ್ಬರೂ ಕೂಡ ನಮ್ಮ ಮಕ್ಕಳೂ ಒಂದು ಒಳ್ಳೆಯ ಶಾಲೆಯಲ್ಲಿ ಓದಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ, ಹಗಲಿರುಳು ದುಡಿದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಅವರನ್ನು ಒಳ್ಳೆಯ ನಾಗರೀಕರನ್ನಾಗಿ ಮಾಡುವುದಕ್ಕಾಗಿ ಶ್ರಮಿಸುತ್ತಾರೆ. ಹಲವೆಡೆ ತಾವಿರುವ ಊರಿನಲ್ಲಿ ಸೂಕ್ತ ವಿದ್ಯಾಭ್ಯಾಸ ಸಿಗದ ಕಾರಣ ಮಕ್ಕಳು ಬೇರೆಡೆ ಶಾಲೆಗೆ ಸೇರುವುದು ಮಾತ್ರವಲ್ಲ, ಅವರ ವಿದ್ಯಾಭ್ಯಾಸ ಸುಸೂತ್ರವಾಗಿ ನಡೆಯುವ ದೃಷ್ಟಿಯಿಂದ ಅವರನ್ನು ಒಳ್ಳೆಯ ಹಾಸ್ಟೆಲ್ ನಲ್ಲಿಯೂ ದಾಖಲಿಸಿರುತ್ತಾರೆ.
ಮಕ್ಕಳು ಎಂದ ಮೇಲೆ ತಪ್ಪು ಮಾಡುವುದು ಸಹಜವೇ. ಮಕ್ಕಳು ತಪ್ಪು ಮಾಡಿದಾಗ ಪೋಷಕರಾಗಲಿ, ಶಿಕ್ಷಕರಾಗಲಿ, ಹಾಸ್ಟೆಲ್ ವಾರ್ಡನ್ ಆಗಿರಲಿ ಅವರಿಗೆ ಬುದ್ದಿ ಹೇಳುವುದು, ಬುದ್ದಿ ಮಾತಿಗೆ ಬಗ್ಗದಿದ್ದಾಗ ಶಿಕ್ಷೆ ನೀಡಿಯಾದರೂ ಅವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿಯೇ ಮಾಡುತ್ತಾರೆ. ಹಾಸ್ಟೆಲ್ ನಲ್ಲಿರುವ ಮಕ್ಕಳಿಗೆ ಹಾಸ್ಟೆಲ್ ವಾರ್ಡನ್ ಪೋಷಕರ ಸ್ಥಾನದಲ್ಲಿರುತ್ತಾರೆ. ಆದರೆ, ತಂದೆ-ತಾಯಿಯ ಸ್ಥಾನದಲ್ಲಿದ್ದು, ಮಕ್ಕಳ ತಪ್ಪನ್ನು ಪ್ರೀತಿಯ ಮಾತುಗಳಿಂದ ತಿದ್ದಬೇಕಿದ್ದವರು ಮಕ್ಕಳ ತಪ್ಪಿಗೆ ಶಿಕ್ಷೆ ಅಂತ ಟಾಯ್ಲೆಟ್ ಸ್ವಚ್ಛ ಮಾಡುವಂತ ಶಿಕ್ಷೆ ನೀಡಿದರೇ ಹೇಗೆ..? ಮಕ್ಕಳು ಓದುವುದನ್ನು ಬಿಟ್ಟು ಟಾಯ್ಲೆಟ್ ಕ್ಲೀನ್ ಮಾಡುವುದು, ಹಾಸ್ಟೆಲ್ ಸ್ವಚ್ಛ ಮಾಡುವುದು ಮಾಡಿದರೇ ಓದುವುದು ಯಾವಾಗ..? ಅರೇ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಹಾಸ್ಟೆಲ್ ವಿದ್ಯಾರ್ಥಿಗಳ ನಿತ್ಯ ನರಕಯಾತನೆಯ ಕಥೆ...
ಇದನ್ನೂ ಓದಿ- Crime News : ವಿಧಾನಸೌಧಕ್ಕೆ ಚಾಕು ತಂದ ಮಹಿಳೆ..!
ಸಾಮಾನ್ಯವಾಗಿ, ಹಾಸ್ಟೆಲ್ ಎಂದೊಡನೆ, ಮಕ್ಕಳಾಗಲಿ ಪೋಷಕರಾಗಲಿ ಅಂಜುವುದು ಆಹಾರ ಸರಿ ಇರುವುದಿಲ್ಲ ಎಂಬ ಕಾರಣಕ್ಕೆ. ಆದರಿಲ್ಲಿ ಕಳಪೆ ಆಹಾರದ ಜೊತೆಗೆ ಇಲ್ಲಿನ ವಾರ್ಡನ್ ವರ್ತನೆ ಹತ್ತಾರು ವಿದ್ಯಾರ್ಥಿಗಳಿಗೆ ನರಕ ದರ್ಶನ ಮಾಡಿಸುತ್ತಿದೆ.
ಹಾಸ್ಟೆಲ್ ಆವರಣದಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಮಕ್ಕಳು. ನಾವು ಯಾವುದೇ ಶಿಕ್ಷೆ ಕೊಟ್ಟಿಲ್ಲ ಎನ್ನುತ್ತಿರುವ ವಾರ್ಡನ್ ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ವಿದ್ಯಾನಗರದ ಎಂವಿಪಿ ಕಸ್ತೂರಿ ಬಾ ಬಾಲಿಕಾಶ್ರಮದಲ್ಲಿ. ಹೌದು.. ಮಹಿಳಾ ವಿದ್ಯಾಪೀಠದಲ್ಲಿರುವ ಹಾಸ್ಟೆಲ್ ನಲ್ಲಿ ಸ್ವಚ್ಚತೆಗೆ ಪ್ರತ್ಯೇಕವಾದ ಸಿಬ್ಬಂದಿ ಇದ್ದರೂ ಕೂಡ ವಿದ್ಯಾರ್ಥಗಳಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿಸುವ ಶಿಕ್ಷೆ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿಗಳೇ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಹಿಳಾ ವಿದ್ಯಾಪೀಠದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅನುದಾನಿತ ಹಾಸ್ಟೆಲ್ ನಲ್ಲಿ ಇಂತಹದೊಂದ ಗಂಭೀರ ಆರೋಪ ಕೇಳಿ ಬಂದಿದ್ದು, ಸ್ವತಃ ವಿದ್ಯಾರ್ಥಿಗಳೇ ಸುರಿಯುವ ಮಳೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಸರ್ಕಾರ ಶಿಕ್ಷಣ ಸೇವೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಒಂದಿಲ್ಲೊಂದು ರೀತಿಯಲ್ಲಿ ಹಲವಾರು ಯೋಜನೆ ಜಾರಿಗೊಳಿಸುತ್ತಲೇ ಇದೆ. ಆದಾಗ್ಯೂ, ಅನುದಾನಿತ ಹಾಸ್ಟೆಲ್ ಒಂದರಲ್ಲಿ ಈ ರೀತಿಯಾಗಿ ನಿತ್ಯ ವಿದ್ಯಾರ್ಥಿಗಳಿಗೆ ಶೌಚಾಲಯ ಸ್ವಚ್ಛಗೊಳಿಸುವ ಶಿಕ್ಷೆ ಯಾವುದೇ ರೀತಿಯ ನರಕಕ್ಕೂ ಕಡಿಮೆಯಿಲ್ಲ ಎಂಬುದಕ್ಕೆ ಹಿಡಿದ ಕೈಗನ್ನಡಿ ಅಂತಿದೆ. ಪೋಷಕರ ಸ್ಥಾನದಲ್ಲಿ ನಿಂತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಬೇಕಿರುವ ಹಾಸ್ಟೆಲ್ ವಾರ್ಡನ್ ನ ಈ ಅಮಾನವೀಯತೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದೆ. ಮಾತ್ರವಲ್ಲ, ಅಲ್ಲಿರುವ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಓದುವುದಕ್ಕೂ ಕೂಡ ಪೂರಕವಾದ ವಾತಾವರಣವೂ ಸಹ ಇಲ್ಲದಂತಾಗಿದೆ.
ಇದನ್ನೂ ಓದಿ- ವೀಕೆಂಡ್ ಮಸ್ತಿ, ಎಣ್ಣೆ ಏಟು: ಸಿಲಿಕಾನ್ ಸಿಟಿಯಲ್ಲಿ 2 ಅಪಘಾತ, ಯುವತಿಯರ ರಂಪಾಟ
ಒಟ್ಟಿನಲ್ಲಿ ಹಾಸ್ಟೆಲ್ ಜೀವನ ಮಕ್ಕಳ ಬದುಕಿಗೆ ಬಹುದೊಡ್ಡ ನೋವನ್ನುಂಟು ಮಾಡಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ವಿಚಾರಿಸಿದರೇ ಈ ಬಗ್ಗೆ ನಮಗೆ ಗೊತ್ತೇ ಇಲ್ಲ. ಈಗಷ್ಟೇ ಈ ಕುರಿತು ನಮ್ಮ ಗಮನಕ್ಕೆ ಬಂದಿದ್ದು, ಘಟನೆ ಕುರಿತಂತೆ ಕೂಲಂಕುಷವಾಗಿ ಪರಿಶೀಲಿಸಿ ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳುವುದಾಗಿ ಭರವಸೆಯ ಮಾತುಗಳನ್ನಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.