ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಕಾನ್ಸ್‌ಟೇಬಲ್ (ಚಾಲಕ) ಗ್ರೂಪ್ 'ಸಿ' ನಾನ್ ಗೆಜೆಟೆಡ್‌ನ 458 ತಾತ್ಕಾಲಿಕ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಭಾರತದಾದ್ಯಂತ ಅರ್ಹ ಅಭ್ಯರ್ಥಿಗಳು ಜುಲೈ 26 ರ 11:59 PM ಗಿಂತ ಮೊದಲು ನೋಂದಾಯಿಸಲು ಕೋರಲಾಗಿದೆ. ಅರ್ಜಿದಾರರು 21 ರಿಂದ 27 ವರ್ಷ ವಯಸ್ಸಿನವರಾಗಿರಬೇಕು ಮತ್ತು 10 ನೇ ತರಗತಿ ಪಾಸ್ ಪ್ರಮಾಣಪತ್ರವನ್ನು ಹೊಂದಿರಬೇಕು. ಮಾನ್ಯ ಹೆವಿ ಡ್ರೈವಿಂಗ್ ಪರವಾನಗಿಯನ್ನು ಹೊಂದಿರಬೇಕು. UR, OBC ಮತ್ತು EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂಪಾಯಿ ಆಗಿದ್ದು, SC, ST ಮತ್ತು ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿರುವುದಿಲ್ಲ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಇಂದು ಜೂನ್ 27 ಪ್ರಾರಂಭಿಸಿದೆ. ಅರ್ಹ ಅಭ್ಯರ್ಥಿಗಳು CRPF ನ ಅಧಿಕೃತ ವೆಬ್‌ಸೈಟ್ recruitment.itbpolice.nic.in ಮೂಲಕ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Australia: ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ವೀಸಾ ನಿಯಮಗಳು
ನೇಮಕಾತಿ ವೇಳಾಪಟ್ಟಿಯ ಪ್ರಕಾರ, ITBP ಕಾನ್ಸ್‌ಟೇಬಲ್ ನೇಮಕಾತಿ 2023 ಗೆ ನೋಂದಾಯಿಸಲು ಕೊನೆಯ ದಿನಾಂಕ ಜುಲೈ 26 (ರಾತ್ರಿ 11:59). ಈ ನೇಮಕಾತಿ ಅಭಿಯಾನದ ಮೂಲಕ, ITBP ಕಾನ್ಸ್‌ಟೇಬಲ್ (ಚಾಲಕ) ಗ್ರೂಪ್ 'C' ನಾನ್-ಗೆಜೆಟೆಡ್ (ನಾನ್ ಮಿನಿಸ್ಟ್ರೀಯಲ್) ನ 458 ಖಾಲಿ ಹುದ್ದೆಗಳನ್ನು ತಾತ್ಕಾಲಿಕ ಆಧಾರದ ಮೇಲೆ ಭರ್ತಿ ಮಾಡುವ ಗುರಿ ಹೊಂದಿದೆ. ಆಯ್ಕೆಯಾದ ಅಭ್ಯರ್ಥಿಗಳು ಭಾರತದಲ್ಲಿ ಅಥವಾ ವಿದೇಶದಲ್ಲಿ ಎಲ್ಲಿಯಾದರೂ ಸೇವೆ ಸಲ್ಲಿಸಲು ಅವಕಾಶ ಪಡೆಯುತ್ತಾರೆ.
ಹುದ್ದೆಯ ವಿವರಗಳು
ಅ.ಸಂ | ವರ್ಗ | ಖಾಲಿ ಹುದ್ದೆಗಳು |
1 | UR | 195 |
2 | SC | 74 |
3 | ST | 37 |
4 | OBC | 110 |
5 | EWS | 42 |
TOTAL | 458 |
ವಯಸ್ಸಿನ ಮಿತಿ
ಅರ್ಜಿದಾರರು 21 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.
ಶೈಕ್ಷಣಿಕ ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10 ನೇ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನವಾಗಿರಬೇಕು. ಅಲ್ಲದೆ, ಅರ್ಜಿದಾರರು ಮಾನ್ಯ ಹೆವಿ ಡ್ರೈವಿಂಗ್ ಪರವಾನಗಿಯನ್ನು ಹೊಂದಿರಬೇಕು.
ITBP ಕಾನ್ಸ್‌ಟೇಬಲ್ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: recruitment.itbpolice.nic.in ನಲ್ಲಿ ITBP ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ, ಹೊಸ ಬಳಕೆದಾರ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ಹೊಸ ಪುಟವು ತೆರೆಯುತ್ತದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡಿ
ಹಂತ 4: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ
ಹಂತ 5: ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಅರ್ಜಿ ಶುಲ್ಕ
UR, OBC, ಮತ್ತು EWS ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ರೂ. 100 ಅರ್ಜಿ ಶುಲ್ಕ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: RITES Recruitment 2023: ಸಹಾಯಕ ಇಂಜಿನಿಯರ್ ಸೇರಿ ಹಲವು ಹುದ್ದೆಗಳು ಖಾಲಿ, 2 ಲಕ್ಷಕ್ಕೂ ಹೆಚ್ಚು ವೇತನ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.