KCET Results 2022: ಸಿಇಟಿ ಫಲಿತಾಂಶ ಘೋಷಣೆ ದಿನಾಂಕ ಪ್ರಕಟ

KCET Results 2022: ಕರ್ನಾಟಕ ಪರಿಕ್ಷಾ ಪ್ರಾಧಿಕಾರ CET ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ಘೋಷಿಸಿದೆ. ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

Written by - Chetana Devarmani | Last Updated : Jul 25, 2022, 05:28 PM IST
  • ಸಿಇಟಿ ಫಲಿತಾಂಶ ಘೋಷಣೆ ದಿನಾಂಕ ಪ್ರಕಟ
  • ದಿನಾಂಕ ತಿಳಿಸಿದ ಕರ್ನಾಟಕ ಪರಿಕ್ಷಾ ಪ್ರಾಧಿಕಾರ
  • ಪ್ರಾಧಿಕಾರದ ವೆಬ್​ಸೈಟ್‌ನಲ್ಲಿ ಫಲಿತಾಂಶ ಬಿಡುಗಡೆ
KCET Results 2022: ಸಿಇಟಿ ಫಲಿತಾಂಶ ಘೋಷಣೆ ದಿನಾಂಕ ಪ್ರಕಟ   title=
ಫಲಿತಾಂಶ

KCET Results 2022: ಕರ್ನಾಟಕ ಪರಿಕ್ಷಾ ಪ್ರಾಧಿಕಾರ CET ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ಘೋಷಿಸಿದೆ. ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ವೆಬ್​ಸೈಟ್​ kea.kar.nic.in ರಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ. ಜೂನ್ 16, 17 ಮತ್ತು 18ರಂದು ಸಿಇಟಿ ಪರೀಕ್ಷೆ ನಡೆದಿದ್ದವು. ಸಿಇಟಿ ಪರೀಕ್ಷೆ ನಡೆಸುವಾಗ ಸಿಬಿಎಸ್​ಇ ಮತ್ತು ಐಸಿಎಸ್​ಇ ಪಠ್ಯಕ್ರಮದಲ್ಲಿ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಅವಕಾಶ ಕೊಡಲಾಗಿತ್ತು. 

ಇದನ್ನೂ ಓದಿ: ಜಗತ್ತಿನ ಅತ್ಯಂತ ಪುಟ್ಟ ರಾಷ್ಟ್ರಗಳಿವು .! ಭಾರತದ ನಗರಗಳಿಗಿಂತಲೂ ಸಣ್ಣ ದೇಶಗಳಿವು

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಜುಲೈ 30 ರಂದು ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಸೋಮವಾರ ತಿಳಿಸಿದ್ದಾರೆ. ಸಿಇಟಿ ಪರೀಕ್ಷೆಯನ್ನು ಸುಮಾರು 2.2 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ.

ಸಿಬಿಎಸ್​ಇ ಮತ್ತು ಐಸಿಎಸ್​ಇ ಪಠ್ಯಕ್ರಮದಲ್ಲಿ 12ನೇ ತರಗತಿ ಓದಿದ ವಿದ್ಯಾರ್ಥಿಗಳು ಕೆಇಎ ವೆಬ್​ಸೈಟ್ ​ಮೂಲಕ ಅಂಕಗಳನ್ನು ಅಪ್​ಲೋಡ್ ಮಾಡಲು ನಾಳೆ ಸಂಜೆಯವರೆಗೆ ಅವಕಾಶ ನೀಡಲಾಗಿದೆ. ಈ ಮೊದಲು ಸಿಇಟಿ ಫಲಿತಾಂಶವನ್ನು ಜುಲೈ 17ರಂದು ಪ್ರಕಟಿಸುವುದಾಗಿ ಪರೀಕ್ಷಾ ಪ್ರಾಧಿಕಾರ ಹೇಳಿತ್ತು. ಆದರೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗ ಫಲಿತಾಂಶ ಬಂದಿರಲಿಲ್ಲ. ಇವರ ರಿಸಲ್ಟ್‌ ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಣೆ ತಡವಾಗಿದೆ. 

ಇದನ್ನೂ ಓದಿ: ಕೈಗೆ ಕಟ್ಟುವ ದಾರಕ್ಕೂ ಇದೆ ನಿಯಮ: ಪಾಲಿಸದಿದ್ದರೆ ಸಂಭವಿಸಬಹುದು ಭಾರೀ ಅನಾಹುತ!

12ನೇ ತರಗತಿಯಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಡಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಈ ವರ್ಷ ಸಿಇಟಿಗೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಈಗ ಅವರ ಫಲಿತಾಂಶಗಳು (ಸಿಬಿಎಸ್‌ಇ, ಐಸಿಎಸ್‌ಇ) ಬಂದಿದ್ದು, ಸಿಇಟಿ ಬರೆದ ವಿದ್ಯಾರ್ಥಿಗಳು ಮಂಗಳವಾರ ಸಂಜೆಯೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ತಮ್ಮ ಅಂಕಪಟ್ಟಿಗಳನ್ನು ಅಪ್‌ಲೋಡ್ ಮಾಡಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಫಲಿತಾಂಶ ಪ್ರಕಟಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಜುಲೈ 30ರ ಶನಿವಾರದಂದು ಫಲಿತಾಂಶ ಪ್ರಕಟಿಸಲಾಗುವುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News