ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯ, ಪೂಜೆಯ ಸಮಯದಲ್ಲಿ ಕೈಗೆ ದಾರವನ್ನು ಕಟ್ಟಲಾಗುತ್ತದೆ. ಈ ದಾರವನ್ನು ಸುಖಾ ಸುಮ್ಮನೆ ತಯಾರು ಮಾಡಲಾಗುವುದಿಲ್ಲ. ಬದಲಾಗಿ ಹತ್ತಿಯಿಂದ ಈ ದಾರವನ್ನು ತಯಾರಿಸಿ ಅದನ್ನು ಶುದ್ಧಗೊಳಿಸಿ, ಪೂಜೆಯ ಸಂದರ್ಭಗಳಲ್ಲಿ ಕೈಗೆ ಕಟ್ಟಲಾಗುತ್ತದೆ.
ಇದನ್ನೂ ಓದಿ: ಈ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ .! ರಿಟರ್ನ್ ಸಲ್ಲಿಸುವ ಮೊದಲು ತಿಳಿದುಕೊಳ್ಳಬೇಕಾದ ಸಂಗತಿ
ಈ ದಾರವು ಗಾಢ ಕೆಂಪು ಮತ್ತು ಹಳದಿ ಬಣ್ಣವನ್ನು ಹೊಂದಿರುತ್ತದೆ. ಇದು ಹತ್ತಿಯಿಂದ ಮಾಡಲ್ಪಟ್ಟಿದ್ದು, ಅದರ ಬಣ್ಣವು ಬೇಗನೆ ಮಸುಕಾಗುತ್ತದೆ. ಇನ್ನು ಜನರು ಯೋಚಿಸದೆ ಅವುಗಳನ್ನು ಕೈಯಿಂದ ತೆಗೆದುಕೊಳ್ಳುತ್ತಾರೆ. ಆದರೆ, ದಾರವನ್ನು ಕಟ್ಟಲು ಮತ್ತು ತೆಗೆಯಲು ಹಿಂದೂ ಧರ್ಮದಲ್ಲಿ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸದೆ ದಾರವನ್ನು ಕಟ್ಟಿದರೆ ಅಥವಾ ಅವುಗಳನ್ನು ಎಲ್ಲೆಂದರಲ್ಲಿ ಎಸೆದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಇನ್ನು ಈ ದಾರವನ್ನು ಕಟ್ಟಲು ಮತ್ತು ತೆಗೆಯಲು ಇರುವ ನಿಯಮಗಳೇನು ಎಂದು ತಿಳಿಯೋಣ.
ಈ ಪವಿತ್ರ ದಾರದ ಮಹತ್ವವನ್ನು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಅವುಗಳನ್ನು ಯಾವರೀತಿ ಕಟ್ಟಬೇಕು, ತೆಗೆಯಬೇಕು ಅಥವಾ ಬದಲಾಯಿಸಬೇಕು ಎಂಬುದಕ್ಕೆ ನಿಯಮಗಳನ್ನು ಮಾಡಲಾಗಿದೆ. ಈ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ದಾರವನ್ನು ಬದಲಾಯಿಸಬೇಕು.
ಹಿಂದೂ ಧರ್ಮದಲ್ಲಿ, ಮಂಗಳ ಕಾರ್ಯಗಳನ್ನು ಮಾಡುವಾಗ ಕೈಗೆ ಈ ಪವಿತ್ರ ದಾರವನ್ನು ಕಟ್ಟಲಾಗುತ್ತದೆ. ಈ ದಾರ ಕಟ್ಟುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ ದಾರವನ್ನು ಕೈಯಲ್ಲಿ ಕಟ್ಟಿಕೊಂಡರೆ ಜೀವನದಲ್ಲಿನ ಸಂಕಷ್ಟಗಳು ದೂರವಾಗುತ್ತವೆ. ಆದರೆ, ದಾರವನ್ನು ಕಟ್ಟಿದ ನಂತರ ಅದು ಶೀಘ್ರದಲ್ಲೇ ಬಣ್ಣ ಕಳೆದುಕೊಂಡು ಮಸುಕಾಗುತ್ತದೆ. ಹೀಗಾಗಿ, ಜನರು ಅದನ್ನು ತೆಗೆಯಲು ಅಥವಾ ಬದಲಾಯಿಸಲು ನಿರ್ಧರಿಸುತ್ತಾರೆ.
ಈ ದಾರವನ್ನು ಯಾವಾಗಲೂ ಕೈಗಳಲ್ಲಿ ಮೂರು ಅಥವಾ ಐದು ಸುತ್ತುಗಳನ್ನು ಮಾಡಿ ಕಟ್ಟಬೇಕು. ಅಷ್ಟೇ ಅಲ್ಲದೆ, ಮಂಗಳವಾರ ಮತ್ತು ಶನಿವಾರದಂದು ಈ ಪವಿತ್ರ ದಾರ ಕಟ್ಟಿದರೆ ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಈ ಎರಡು ದಿನಗಳಲ್ಲಿ ಪವಿತ್ರ ದಾರವನ್ನು ಕಟ್ಟಬಹುದು. ಇನ್ನು ಬೆಸ ಸಂಖ್ಯೆಯ ದಿನಗಳಲ್ಲಿ ನೀವು ಅದನ್ನು ತೆಗೆದುಹಾಕಬಹುದು. ಈ ಬೆಸ ಸಂಖ್ಯೆಯ ದಿನಗಳಲ್ಲಿ ಮಂಗಳವಾರ ಅಥವಾ ಶನಿವಾರ ಬರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ: ರೈತರೆ ಗಮನಿಸಿ : ತಪ್ಪದೆ ಈ ವಾರ ಈ ಕೆಲಸ ಮಾಡಿ, ಇಲ್ಲದಿದ್ದರೆ ಖಾತೆಗೆ ₹2000 ಬರಲ್ಲ
ಇನ್ನು ಹೆಣ್ಣು ಮಕ್ಕಳು ಯಾವ ಕೈಗೆ ಈ ದಾರವನ್ನುಕಟ್ಟಬೇಕು ಎಂಬ ಗೊಂದಲವಿರುತ್ತದೆ. ಹೀಗಾಗಿ ಮಹಿಳೆಯರು ಬಲಗೈಗೆ ದಾರ ಕಟ್ಟಿದರೆ, ವಿವಾಹಿತ ಮಹಿಳೆಯರು ಎಡಗೈಗೆ ಕಟ್ಟಬಹುದು. ಗಂಡು ಮಕ್ಕಳು ಬಲಗೈಗೆ ಈ ದಾರವನ್ನು ಕಟ್ಟಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.