ಬೆಂಗಳೂರು : ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮದಂತೆ. ತಂಡದ ಆಟಗಾರರು ದೇವರಂತೆ. ಈ ಆಟಗಾರರಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಳ್ಳಲು ಜನರು ಅತ್ಯಂತ ಉತ್ಸುಕರಾಗಿರುತ್ತಾರೆ. ಅದು ವೈಯಕ್ತಿಕವಾಗಿರಲಿ ಅಥವಾ ವೃತ್ತಿಗೆ ಸಂಬಂಧಪಟ್ಟದ್ದಾಗಿರಲಿ.ಭಾರತೀಯ ಕ್ರಿಕೆಟ್ ತಂಡದಲ್ಲಿ ಕಡಿಮೆ ಶಿಕ್ಷಣ ಪಡೆದ ಆಟಗಾರ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೀ ಇದ್ದರೆ ಆ ಬಗ್ಗೆ ಮಾಹಿತಿ ಇಲ್ಲಿದೆ.
ಯಾರದ್ದು ಯಾವ ಪದವಿ :
unstop.comನ ವರದಿಯ ಪ್ರಕಾರ, 2023 ರ ಐಸಿಸಿ ಪುರುಷರ ವಿಶ್ವಕಪ್ ಟೀಂ ಇಂಡಿಯಾದ ಹೆಚ್ಚಿನ ಆಟಗಾರರು 12 ನೇ ತರಗತಿಗಿಂತ ಹೆಚ್ಚು ಓದಿದ್ದೇ ಇಲ್ಲ. ಈ ಆಟಗಾರರ ಪೈಕಿ ಕೆಲವೇ ಕೆಲವರು ಮಾತ್ರ ಪದವಿ ಹೊಂದಿದ್ದಾರೆ. ಹಾಗಿದ್ದರೂ ಕ್ರಿಕೆಟ್ ನಲ್ಲಿ ತಾವು ಏನನ್ನು ಸಾಧಿಸಬೇಕು ಅಂದುಕೊಂಡಿದ್ದರೋ ಅದನ್ನು ಸಾಧಿಸಿ ಬಿಟ್ಟಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ಕಡಿಮೆ ಶಿಕ್ಷಣ ಪಡೆದ ಆಟಗಾರ :
ಶಿಖರ್ ಧವನ್ :
ಶಿಖರ್ ಧವನ್ ಅವರನ್ನು ಭಾರತೀಯ ಕ್ರಿಕೆಟ್ ತಂಡದ ಗಬ್ಬರ್ ಎಂದೇ ಕರೆಯಲಾಗುತ್ತದೆ. ಧವನ್ 12 ನೇ ಕ್ಲಾಸ್ ಪಾಸ್ ಆಗಿದ್ದು, ಮುಂದೆ ಓದಲಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರೀತಿಯಲ್ಲಿ ತನಗಾದ ಮೋಸದ ವಿಚಾರದಿಂದ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ : ವಿಕಲಚೇತನರ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನ
ಎಂಎಸ್ ಧೋನಿ :
ಧೋನಿ ಬಿ.ಕಾಂ.ಗೆ ಪ್ರವೇಶ ಪಡೆದರೂ ಪರೀಕ್ಷೆಗೆ ಹಾಜರಾಗಿಲ್ಲ.ಹೀಗಾಗಿ ಪದವಿ ಕೂಡಾ ಪಡೆದಿಲ್ಲ.ಧೋನಿಯ ವಿದ್ಯಾರ್ಹತೆ ಕೂಡಾ 12ನೇ ತರಗತಿವರೆಗೆ ಮಾತ್ರ.
ವಿರಾಟ್ ಕೊಹ್ಲಿ :
12ನೇ ತರಗತಿಯ ನಂತರ ವಿರಾಟ್‌ಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಮೂಡಿದ್ದು ಕಾಲೇಜಿನಟ್ಟ ಮುಖ ಮಾಡಲೇ ಇಲ್ಲ.
ಜಸ್ಪ್ರೀತ್ ಬುಮ್ರಾ :
ಭಾರತದ ಆಕ್ರಮಣಕಾರಿ ಬೌಲರ್ ಬುಮ್ರಾ ಅಹಮದಾಬಾದ್‌ನ ನಿರ್ಮಾಣ್ ಹೈಸ್ಕೂಲ್‌ನಲ್ಲಿ ಓದಿದ್ದಾರೆ. ಯಾರ ಓದಿ ಕೂಡಾ 12ನೇ ತರಗತಿವರೆಗೆ ಮಾತ್ರ.
ಸಚಿನ್ ತೆಂಡೂಲ್ಕರ್ :
ಮಾಸ್ಟರ್ ಬ್ಲಾಸ್ಟರ್ ತಮ್ಮ ಬಾಲ್ಯವನ್ನು ಕ್ರಿಕೆಟ್‌ಗೆ ಮೀಸಲಿಟ್ಟರು.ಅವರು 16 ನೇ ವಯಸ್ಸಿನಲ್ಲಿ ಆಟವಾಡಲು ಪ್ರಾರಂಭಿಸಿದರು ಹಾಗಾಗಿ ಶಿಕ್ಷಣವನ್ನು ಪೂರ್ಣಗೊಳಿಸಲಿಲ್ಲ.
ಇದನ್ನೂ ಓದಿ : Konkan Railway: ಕೊಂಕಣ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ
ಶುಭಮನ್ ಗಿಲ್ :
ವರದಿಯ ಪ್ರಕಾರ, ಶುಭ್‌ಮನ್ ಎಂದಿಗೂ ಕಾಲೇಜು ಮೆಟ್ಟಿಲು ಹತ್ತಿಯೇ ಇಲ್ಲ. ಬದಲಿಗೆ ತಮ್ಮ ಸಮಯವನ್ನು ಕ್ರಿಕೆಟ್‌ಗೆ ಮೀಸಲಿಟ್ಟರು. ಶುಭ್‌ಮನ್ 10ನೇ ತರಗತಿವರೆಗೆ ಮಾತ್ರ ಶಾಲೆ ಕಲಿತಿರುವುದು.ಇವರು ತ ಮ್ಮ ಬೌಂಡರಿ ಹಾಗೂ ಸಿಕ್ಸರ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ.ಇತ್ತೀಚೆಗಷ್ಟೇ ತಮ್ಮ ಅಫೇರ್‌ನಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು.
ಹಾರ್ದಿಕ್ ಪಾಂಡ್ಯ :
ಆರ್ಥಿಕ ಕಾರಣದಿಂದ ಹಾರ್ದಿಕ್ ಪಾಂಡ್ಯ 9ನೇ ತರಗತಿಗಿಂತ ಹೆಚ್ಚು ಓದಿರಲಿಲ್ಲ. ಆದರೆ ಅದೃಷ್ಟವಶಾತ್, ಕ್ರಿಕೆಟ್ ಕಡೆಗೆ ಅವರ ಪ್ರೀತಿ ಮತ್ತು ಸಮರ್ಪಣೆ ಫಲ ನೀಡಿತು. ಪತ್ನಿಯೊಂದಿಗೆ ವಿಚ್ಛೇದನ ಪಡೆದಿರುವ ಕಾರಣ ಹಾರ್ದಿಕ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.