ಹುಬ್ಬಳ್ಳಿಯ ಮಂಟೂರಿನ ಅಮೀನಾ ಬಾಗೆ ಅವರ ಮಗ ರಫೀಕ್ ಬಾಗೆ ಅವರ ವಿಮಾ ಕ್ಲೇಮ್‌ಗೆ ಸಂಬಂಧಿಸಿದಂತೆ ಪಿಎನ್‌ಬಿ ಮೆಟ್‌ಲೈಫ್ ಇನ್ಸೂರೆನ್ಸ್ ಕಂಪನಿಯ ಸೇವಾ ನ್ಯೂನತೆಗಾಗಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ರೂ.14,11,986 ವಿಮಾ ಮೊತ್ತವನ್ನು 9% ಬಡ್ಡಿಯೊಂದಿಗೆ, ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣ ವೆಚ್ಚವನ್ನು ಒಂದು ತಿಂಗಳೊಳಗೆ ನೀಡುವಂತೆ ಆದೇಶಿಸಿದೆ.
ಎದುರುದಾರ ಕೆನರಾ ಬ್ಯಾಂಕಿನವರು ತಮ್ಮ ವಕೀಲರ ಮೂಲಕ ಹಾಜರಾಗಿ ಆಕ್ಷೇಪಣೆ ಸಲ್ಲಿಸಿದ್ದರು. ದೂರುದಾರರು ವೈಯಕ್ತಿಕವಾಗಿ ಖಾತೆಯನ್ನು ಹೊಂದಿರಲಿಲ್ಲ. ಅದು ಪಾಲುದಾರಿಕೆ ಸಂಸ್ಥೆಯ ಕರೆಂಟ್ ಅಕೌಂಟ ಆಗಿತ್ತು, ಸದರಿ ಖಾತೆ ಕರೆಂಟ್ ಅಕೌಂಟ್ ಆಗಿದ್ದರಿಂದ ಬ್ಯಾಂಕ್ ನಿಗದಿತ ಶುಲ್ಕವನ್ನು ವಿಧಿಸುತ್ತಿತ್ತು
ಬೆಂಗಳೂರಿನ ಪ್ಲ್ಯಾಟಿನ ಗೃಹ ಪ್ರವೇಶ ದಿ:09/10/2022 ರಂದು ನಿಗದಿಯಾಗಿತ್ತು. ಅಂದು ಉಡುಗರೆಯ ಚೇರ ಸಮೇತ ಎಲ್ಲ ಫರ್ನಿಚರಗಳನ್ನು ಹೊಸ ಪ್ಲ್ಯಾಟಿಗೆ ತಂದು ಕೊಡುವುದಾಗಿ ರಾಯಲ್ ಓಕನವರು ಒಪ್ಪಿಕೊಂಡಿದ್ದರು. ಆದರೇ ನಿಗದಿತ ಸಮಯಕ್ಕೆ ಎಲ್ಲ ಫರ್ನಿಚರಗಳನ್ನು ಪ್ಲ್ಯಾಟನ ಗೃಹ ಪ್ರವೇಶಕ್ಕೆ ಎದುರುದಾರರು ಕೊಡಲಿಲ್ಲ.
ಧಾರವಾಡದ ಎಮ್ಮಿಕೇರಿಯ ನಾಗರಾಜ ಗೌರಮ್ಮನವರ ಎಂಬುವವರು ತಮ್ಮ ವಾಹನವನ್ನು ಎದುರುದಾರರ ಬಳಿ ದಿ:18/06/2022ರಿಂದ 17/06/2027ರವರೆಗೆ ವಿಮಾ ಪಾಲಸಿಯನ್ನು ಮಾಡಿಸಿದ್ದರು. ದಿ:24/04/2023ರಂದು ವಾಹನವು ಶಿಗ್ಗಾವದ ಸಮೀಪ ಅಪಘಾತಕ್ಕೀಡಾಗಿತ್ತು.ಅದರ ರಿಪೇರಿಯ ಅಂದಾಜು ಖರ್ಚು ರೂ.1,24,596/- ಆಗಿದ್ದು ಅದನ್ನು ಕೊಡುವಂತೆ ಎದುರುದಾರರಿಗೆ ವಿನಂತಿಸಿದ್ದರು.
ಧಾರವಾಡ ತಾಲ್ಲೂಕಿನ ನಾರಾಯಣಪುರದ ವಾಸಿ ಮಾರುತಿ ಶಾನಬಾಗ್ ಎಂಬುವವರು ದಿ:22/12/2023 ರಂದು ರೂ.10,000/- ಕಿಮ್ಮತ್ತಿನ ಆಯುರ್ವೇದಿಕ್ ಆಹಾರ ಸಾಮಾನುಗಳನ್ನು ಮುಂಬೈಯಲ್ಲಿರುವ ಸಂತೋಷ ಎಂಬುವವರಿಗೆ ಎದುರುದಾರರಾದ ಎಸ್.ಆರ್.ಎಸ್. ಟ್ರಾವೆಲ್ಸ್‍ನವರ ಮುಖಾಂತರ ಸರ್ವಿಸ್ ಚಾರ್ಜ ಪಾವತಿಸಿ ಪಾರ್ಸಲ್ ಕಳುಹಿಸಿದ್ದರು. ಆದರೆ ಅದು ಸಂತೋಷ ಅವರಿಗೆ ತಲುಪಿರಲಿಲ್ಲ.
ಧಾರವಾಡದ ಪ್ರಸೇಂಟೇಶನ್ ಗಲ್ರ್ಸ ಹೈಸ್ಕೂಲಿನಲ್ಲಿ ಸಹಾಯಕ ಶಿಕ್ಷಕಿಯರಾದ ಭಾರತಿ ಭಾವಿಕಟ್ಟಿ ಮತ್ತು ರೀನಾ.ಆರ್ ದೂರ ಶಿಕ್ಷಣದ ಮೂಲಕ ಕುವೆಂಪು ವಿಶ್ವವಿದ್ಯಾಲಯದಿಂದ ತನ್ನ ಎಮ್.ಎಸ್.ಸಿ. ಪದವಿ ಪಡೆಯಲು ಧಾರವಾಡದ ಕೆ.ಸಿ.ಇ. ಪೌಂಡೇಷನ್ ಸಂಸ್ಥೆಯ ಮೂಲಕ 2021-22ನೇ ಇಸವಿಯಲ್ಲಿ ರೂ.35,400/- ಹಾಗೂ ರೂ.20,000/- ಪ್ರವೇಶ ಶುಲ್ಕ ಕಟ್ಟಿದ್ದರು.
ಹುಬ್ಬಳ್ಳಿಯ ತೋಳನಕೆರಿಯ ಅಮಿತ್ ಅಕ್ಕಿ ಎಂಬುವವರು ಹುಬ್ಬಳ್ಳಿಯ ಗಿರಿಯಾಸ್ ಶೋರೂಂನಲ್ಲಿ ರೂ.33,200/- ಕೊಟ್ಟು ಗೊದ್ರೇಜ್ ಏರ್ ಕಂಡಿಷನ್ ಯುನಿಟ್‍ನ್ನು ಖರೀದಿಸಿದ್ದರು. ಅದರ ಅಳವಡಿಕೆಗೆ ಹೆಚ್ಚಿನ ಮೊತ್ತ ರೂ.5,000/- ಸೇರಿ ದೂರುದಾರ ಒಟ್ಟು 38,200/- ಎದುರುದಾರರಿಗೆ ಪಾವತಿಸಿದ್ದರು. ಎದುರುದಾರರು ಗೊದ್ರೇಜ್‍ರವರು ಸದರಿ ಏರ್ ಕಂಡಿಷನ್‍ನ ಉತ್ಪಾದಕರಾಗಿರುತ್ತಾರೆ.
ಹುಬ್ಬಳ್ಳಿ ಕೇಶ್ವಾಪುರದ ವಾಸಿ ಮತ್ತು ಅಲ್ಲಿಯ ವ್ಯಾಪಾರಿ ಅರವಿಂದಕುಮಾರ ಜೈನ್‍ರವರು 23,456/- ವಿಮಾ ಹಣ ತುಂಬಿ 2023-24ನೇ ಅವಧಿಗೆ ಎದುರುದಾರ ಸ್ಟಾರ್ ಹೆಲ್ತ್ ವಿಮಾ ಕಂಪನಿಯಿಂದ ಡಯಾಬಿಟಿಸ್ ಸೇಫ್‍ಆರೋಗ್ಯ ವಿಮೆ ಪಡೆದಿದ್ದರು.
ಧಾರವಾಡದ ಕೊಟ್ಟಣದ ಓಣಿ ನಿವಾಸಿ ಸುಮನ್ ಅತ್ತಿಗೇರಿ ಎಂಬುವವರು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರದ ಗ್ರಾಹಕಳಾಗಿದ್ದು, ಆ ಬ್ಯಾಂಕಿನಲ್ಲಿ ತನ್ನ ಉಳಿತಾಯ ಖಾತೆಯನ್ನು ಹೊಂದಿ ತನ್ನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತಾಳೆ. ಹೀಗಿರುವಾಗ ತನ್ನ ಪತಿಯ ಆರೋಗ್ಯದ ಖರ್ಚಿನ ಸಲುವಾಗಿ ಹಾಗೂ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಸಕಾಲಧನ ಸಹಕಾರಿ ಸಂಘದಿಂದ ರೂ.80,000/- ಸಾಲ ಪಡೆದಿದ್ದು, ಆ ಮೊತ್ತವನ್ನು ಸಹಕಾರಿ ಸಂಘದವರು ತನ್ನ ಖಾತೆಗೆ ದಿನಾಂಕ:22/05/2024ರಂದು ವರ್ಗಾವಣೆ ಮಾಡಿರುತ್ತಾರೆ.
ಗ್ರಾಹಕ ನ್ಯಾಯಾಲಯವು ಇತ್ತೀಚೆಗೆ ಎಲೆಕ್ಟ್ರಿಕ್ ವಾಹನ ತಯಾರಕರಿಗೆ ದೋಷಪೂರಿತ ದ್ವಿಚಕ್ರ ವಾಹನವನ್ನು ಒದಗಿಸಿದ್ದಕ್ಕಾಗಿ ಖರೀದಿದಾರರಿಗೆ ರೂ 1.48 ಲಕ್ಷ ಪಾವತಿಸಲು ಆದೇಶಿಸಿದೆ. ಮನೆಯ ಹೊರಗೆ ವಾಹನವನ್ನು ನಿಲ್ಲಿಸಿದ್ದಾಗ ಅದಕ್ಕೆ ದೋಷಯುಕ್ತ ಬ್ಯಾಟರಿಯಿಂದಾಗಿ ಏಕಾಏಕಿ ಬೆಂಕಿ ಹೊತ್ತುಕೊಂಡಿದೆ.
ಗದಗ, ಶಿರಟ್ಟಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನ 22 ಜನದೂರುದಾರರು ಹುಬ್ಬಳ್ಳಿಯ ಆಶೀರ್ವಾದ್ ಡೆವಲ್ಪರ್ಸ್‍ಜತೆ ಧಾರವಾಡದ ಸತ್ತೂರಿನಲ್ಲಿ ಪ್ಲಾಟ್ ಖರೀದಿಸಲು 2012 ನೇ ಇಸ್ವಿಯಲ್ಲಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಎಲ್ಲ ದೂರುದಾರರು ಖರೀದಿ ಒಪ್ಪಂದದ ಮುಂಗಡ ಹಣವನ್ನು ಆಶೀರ್ವಾದ ಡೆವಲ್ಪರ್ಸ್ 2010 ರಿಂದ 2012 ಇಸ್ವಿವರೆಗೆ ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್‍ನ ಪಾಲುದಾರರಾದ ಶಿವನಗೌಡ ಪಾಟೀಲ ಎಂಬುವವರು ಇಟಿಗಟ್ಟಿ ಗ್ರಾಮದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದ ಇಟಿಗಟ್ಟಿ ಲೇಔಟನಲ್ಲಿ, ಹುಬ್ಬಳ್ಳಿಯ ಅಧ್ಯಾಪಕ ನಗರ ನಿವಾಸಿ ನಾಗರತ್ನ ಮುಂಡರಗಿ ಮತ್ತು ಧಾರವಾಡದ ಸತ್ತೂರ ನಿವಾಸಿ ಮೋಹನ ಡೊಂಬರ ಎಂಬುವವರು ಸೈಟ್ ಪಡೆದುಕೊಳ್ಳಲು ಇಚ್ಚಿಸಿ ಪೃಥ್ವಿ ಡವಲಪರ್ಸ್‍ಜೊತೆ ಪ್ಲಾಟ ನಂ.9, 10 ಮತ್ತು 11ರ ಬಗ್ಗೆ ಮಾರಾಟದ ಒಪ್ಪಂದ ಮಾಡಿಕೊಂಡು, ಒಂದೊಂದು ಸೈಟಿಗೆ ರೂ.5,63,600/- ರೂಪಾಯಿ ಹಣ ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಕಮಲಾ ಬಡಿಗೇರ ಎಂಬುವವರು 2020 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎದುರುದಾರ ಎಸ್.ಎಸ್ ವಿ ಶೇಲ್ಟರ್ಸ್‍ನ ವಿಜಯಕುಮಾರ ಕಬಾಡಿ ರವರಿಂದ 875 ಚ.ಅಡಿ ವಿಸ್ತ್ರೀರ್ಣದ ಮಳಿಗೆಯನ್ನು ಖರೀಸಿದ್ದರು. ಅದಕ್ಕೆ ಅವರು ರೂ.27,41,080/-ಗಳಿಗೆ ಹಣ ಸಂದಾಯ ಮಾಡಿದ್ದರು.
ಧಾರವಾಡದ ಕೆ.ಎಚ್.ಬಿ. ಕಾಲೋನಿಯ ಹನುಮಂತಪ್ಪ ನಾಯಕರವರು ಮೈಸೂರಿನ ಶ್ರೀಗುರು ಮಲ್ಲೇಶರಿಯಲ್ ವ್ಯಾಲ್ಯು ಕಾರ್ಪೊರೇಟನ ಮೆಂಬರ್ ಆಗಿದ್ದರು. ಅವರು 30x40 ಸೈಜಿನ ಪ್ಲಾಟಗೆ ಕಂತುಗಳ ಮೂಖಾಂತರ ಒಟ್ಟು ರೂ.3,16,800/- ತುಂಬಿದ್ದರು. ಈ ಬಗ್ಗೆ ಎದುರುದಾರರು ಸೈಟ್ ಕೊಡುವ ಬಗ್ಗೆ ಬರವಸೆ ಕೊಟ್ಟು ದಿ.07/10/2014 ರಂದು ಕರಾರು ಪತ್ರ ಬರೆದುಕೊಟ್ಟಿದ್ದರು.
ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಚೇತನ ಅಥಣಿ ಅನ್ನುವವರು 2017ರಲ್ಲಿ ರಾಯಭಾಗನ ಎಸ್.ಎಸ್.ಗೋಲ್ಡನ್ ಕಂಪನಿಗೆ ಸದಸ್ಯರಾಗಿದ್ದರು. ಎದುರುದಾರರ ಜಾಹಿರಾತಿಗೆ ಮಾರು ಹೋಗಿ ಅವರು ದಿ:30/06/2017 ರಂದು ರೂ.3,50,000/- ಹಣ ನೀಡಿದ್ದರು.
ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಮಹಾಂತೇಶ ಹೂಲಿ ಅನ್ನುವವರು ಸೈಟ್ ಖರೀದಿಸಿ ಮನೆ ಕಟ್ಟಿಕೊಳ್ಳಲು ದಿ:22/09/2022 ರಂದು ಹುಬ್ಬಳ್ಳಿಯ ವಿದ್ಯಾನಗರದ ರೆಪ್ಕೋ ಹೋಮ ಫೈನಾನ್ಸ್‍ರವರಿಂದ ರೂ.12 ಲಕ್ಷ ಸಾಲ ಪಡೆದಿದ್ದರು.
ಜಿಲ್ಲೆಯ ಕಲಘಟಗಿ ಅಕ್ಕಿ ಓಣಿಯ ನಿವಾಸಿ ಅರುಣ್ ಕುಂಬಾರ ಎಂಬುವವರು ದಿನಾಂಕ:28/09/2022 ರಂದು ಒಬ್ಬ ಮಲೀಕ್ ಇಸ್ಮಾಯಿಲ್ ಎನ್ನುವವರ ಮಧ್ಯಸ್ಥಿಕೆಯಲ್ಲಿ ಹುಬ್ಬಳ್ಳಿಯ ಸ್ಯಾಮ್ ಔಟ್‍ಫಿಟ್ ಪ್ಯಾಶನ್ ಪ್ರೈವೇಟ್ ಲಿ. ಇವರಿಂದ ರೂ.38,640/- ಮೌಲ್ಯದ ಬಟ್ಟೆಗಳ ಬಾಕ್ಸ್‍ಗಳನ್ನು ಖರೀದಿಸಿದ್ದರು.
ಹುಬ್ಬಳ್ಳಿ ಶೆಟ್ಟರ ಕಾಲನಿಯ ನಿವಾಸಿ ಅಶೋಕ ಶದ್ಮಾಕರ್ ರವರು ಎದುರುದಾರರಾದ ಬೆಳಗಾವಿಯ ನಿಖಿತಾರವರಿಂದ ಅಕ್ಟೋಬರ್-2022 ಹೈಡ್ರೋಪಾವರ್ ಉಪಕರಣ ಖರೀದಿಸಿದ್ದರು. ಅದಕ್ಕೆ ಅವರು ಒಟ್ಟು ರೂ.14,00,015/- ಹಣ ಎದುರುದಾರರಿಗೆ ಕೊಟ್ಟಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.