ನೆಲ್ಸನ್ ಕಷ್ಟದ ಮುಂದೆ ನಮ್ಮದೇನೂ ಅಲ್ಲ..!

ಆ ಜೈಲಿನಲ್ಲಿ ಮಂಡೇಲಾ ಅವರನ್ನು ಇಟ್ಟಿದ್ದ ಕೋಣೆ ಹೆಚ್ಚು ಅಂದರೆ 08 ಅಡಿ ಉದ್ದ, 06 ಅಡಿ ಆಗಲ ಇದ್ದಿರಬಹುದು. ಕಿಟಕಿಯಲ್ಲಿ ಇಣುಕಿದರೆ ಸಮುದ್ರದ ಅಲೆಗಳು, ಪಕ್ಕದಲ್ಲಿ ಬಿಳಿ ಲೈಮ್ ಸ್ಟೋನ್ ಧರೆ. ಅದನ್ನು ನೋಡಿ ನೋಡಿ ಮಂಡೇಲಾ ಅವರಿಗೆ ಕಣ್ಣು ಕುಕ್ಕಿ ದೃಷ್ಟಿ ಮಂದವಾಗಿತ್ತು

Edited by - Manjunath N | Last Updated : Nov 21, 2024, 07:36 PM IST
  • ಮಂಡೇಲಾ ಅವರ ಬಗ್ಗೆ ಒಂದು ಸಿನಿಮಾ ಮಾಡುವಾಗ ಅವರ ಪಾತ್ರಧಾರಿ ನಟ ಆ ಕೋಣೆಯನ್ನು ನೋಡಲು ಹೋದ.
  • ಅಲ್ಲಿ ಮಂಡೇಲಾ ಎಂಥ ಮನಸ್ಥಿತಿಯಲ್ಲಿ ಇದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಒಂದು ವಾರ ಆ ಜೈಲಿನಲ್ಲಿ ತಂಗಲು ಬಯಸಿದ್ದ.
  • ಆದರೆ ಆ ನಟನಿಗೆ ಒಂದು ದಿನ ಸಹ ಕಳೆಯಲು ಆಗಲಿಲ್ಲ.
 ನೆಲ್ಸನ್ ಕಷ್ಟದ ಮುಂದೆ ನಮ್ಮದೇನೂ ಅಲ್ಲ..! title=

ಕರೋನಾ ಲಾಕ್ ಡೌನ್ ಯಾವಾಗ ಮುಗಿಯುತ್ತೋ ತಿಂಗಳಾನುಗಟ್ಟಲೆ ಕಾರಂಟೈನ್ ಶಿಕ್ಷೆ ಇನ್ನೊಂದಿಲ್ಲ.... ಈ ರೀತಿ ಮಾತುಗಳನ್ನು ಲಾಕ್ ಡೌನ್ ದಿನಗಳಲ್ಲಿ ಎಲ್ಲಾ ಕಡೆ ಪದೇ ಪದೇ ಕೇಳುತ್ತಿದ್ದೆವು ಅಲ್ವ..! ಪ್ರತಿ ಸಲ ಈ ಮಾತುಗಳನ್ನು ಕೇಳುವಾಗಲೆಲ್ಲ ನನಗೆ ನೆನಪಿಗೆ ಬಂದವರು, ಬರುವವರು ನೆಲ್ಸನ್ ಮಂಡೇಲಾ! ದಕ್ಷಿಣ ಆಫ್ರಿಕಾದ ತುದಿಯಲ್ಲಿರುವ ಕೇಪ್ ಟೌನ್ ನಗರದಿಂದ ಸುಮಾರು ಏಳು ಕಿಲೋ ಮೀಟರ್ ಬೋಟ್‌ನಲ್ಲಿ ಸಾಗಿದರೆ ರಾಬೈನ್ ಐಲ್ಯಾಂಡ್ ಸಿಗುತ್ತದೆ. ಇದು ಈಗ ಯುನೆಸ್ಕೊ ವರ್ಲ್ಡ್ ಹೆರಿಟೇಜ್ ತಾಣ, ಕಾರಣ ಈ ದ್ವೀಪದಲ್ಲಿ ಒಂದು ಜೈಲಿದೆ. ಆ ಜೈಲಿನಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಬಂಧಿಸಿ ಇಟ್ಟಿದ್ದರು. ವರ್ಣಭೇದ ನೀತಿ ವಿರುದ್ಧ ಹೋರಾಡಿದ ಮಂಡೇಲಾ ಒಟ್ಟು ಇಪ್ಪತ್ತೇಳು ವರ್ಷಗಳ ಕಾಲ ಸೆರೆಮನೆಯಲ್ಲಿದ್ದರು. ಆ ಪೈಕಿ ಹದಿನೆಂಟು ವರ್ಷಗಳನ್ನು ಅವರು ರಾನ್ ಐಲ್ಯಾಂಡಿನ ಜೈಲಿನಲ್ಲಿ ಕಳೆದಿದ್ದರು!

ಆ ಜೈಲಿನಲ್ಲಿ ಮಂಡೇಲಾ ಅವರನ್ನು ಇಟ್ಟಿದ್ದ ಕೋಣೆ ಹೆಚ್ಚು ಅಂದರೆ 08 ಅಡಿ ಉದ್ದ, 06 ಅಡಿ ಆಗಲ ಇದ್ದಿರಬಹುದು. ಕಿಟಕಿಯಲ್ಲಿ ಇಣುಕಿದರೆ ಸಮುದ್ರದ ಅಲೆಗಳು, ಪಕ್ಕದಲ್ಲಿ ಬಿಳಿ ಲೈಮ್ ಸ್ಟೋನ್ ಧರೆ. ಅದನ್ನು ನೋಡಿ ನೋಡಿ ಮಂಡೇಲಾ ಅವರಿಗೆ ಕಣ್ಣು ಕುಕ್ಕಿ ದೃಷ್ಟಿ ಮಂದವಾಗಿತ್ತು. ಅವರನ್ನು ಬಿಡುಗಡೆ ಮಾಡಿದಾಗ, ನೂರಾರು ಫೋಟೋಗ್ರಾಫರ್ ಗಳು ತಮ್ಮ-ತಮ್ಮ ಕ್ಯಾಮರಾಗಳಿಂದ ಒಂದೇ ಸಲ ಫ್ಲಾಶ್ ಲೈಟ್ ಬಳಸಿ ಕ್ಲಿಕ್ಕಿಸಿದಾಗ ಫ್ಲಾಶ್ ಬಳಸದಂತೆ ಅವರಿಗೆ ಮಂಡೇಲಾ ವಿನಂತಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಿ, ಆ ಪುಟ್ಟ ಕೋಣೆಯಲ್ಲಿ ಬರೆಯಲು ತಮಗೆ ಟೇಬಲ್ ಕೊಡುವಂತೆ ಮಂಡೇಲಾ ಮನವಿ ಮಾಡಿಕೊಂಡರೂ ಕೂಡ ಕೊಡಲಿಲ್ಲ. ಆ ಕೋಣೆಯಲ್ಲಿ ಟಿವಿ, ರೇಡಿಯೋ, ಮೊಬೈಲ್, ಪತ್ರಿಕೆ, ಪುಸ್ತಕ ಹೀಗೆ ಏನೂ ಇರಲಿಲ್ಲ. ಹರಿದ ಜಮಖಾನ, ಚಾದರ, ಬಕೆಟ್, ಕಸದ ಡಬ್ಬ, ಬಟ್ಟಲು. ಲೋಟ ಮತ್ತು ಸ್ಕೂಲು ಹೊರತಾಗಿ ಏನೂ ಇರಲಿಲ್ಲ. ಅಂಥ ಕೋಣೆಯಲ್ಲಿ ಮಂಡೇಲಾ ಏಕಾಂಗಿಯಾಗಿ ಬರೋಬ್ಬರಿ ಹದಿನೆಂಟು ವರ್ಷಗಳನ್ನು ಕಳೆದರು. ತಮ್ಮ ಯೌವನದ ಮಹತ್ವದ ವರ್ಷಗಳನ್ನು ಅದೇ ಕೋಣೆಯಲ್ಲಿ ಕಳೆದರು.

 ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ

ಮಂಡೇಲಾ ಅವರ ಬಗ್ಗೆ ಒಂದು ಸಿನಿಮಾ ಮಾಡುವಾಗ ಅವರ ಪಾತ್ರಧಾರಿ ನಟ ಆ ಕೋಣೆಯನ್ನು ನೋಡಲು ಹೋದ. ಅಲ್ಲಿ ಮಂಡೇಲಾ ಎಂಥ ಮನಸ್ಥಿತಿಯಲ್ಲಿ ಇದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಒಂದು ವಾರ ಆ ಜೈಲಿನಲ್ಲಿ ತಂಗಲು ಬಯಸಿದ್ದ. ಆದರೆ ಆ ನಟನಿಗೆ ಒಂದು ದಿನ ಸಹ ಕಳೆಯಲು ಆಗಲಿಲ್ಲ. ಆತ ಅಲ್ಲಿಂದ ಅದೇ ದಿನ ವಾಪಸ್ ಬಂದುಬಿಟ್ಟ, ಆ ಜೈಲು ಕೋಣೆ ಹೇಗಿದ್ದಿರಬಹುದು ಊಹಿಸಿ? ಮುಂದೊಂದು ದಿನ ಅದೇ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಮೊದಲನೆಯ ಸಲ ರಾಷ್ಟ್ರಪತಿ ಆದ ನಂತರ, ತನ್ನ ಸುರಕ್ಷೆಯ ಸೈನಿಕರ ಜೊತೆಯಲ್ಲಿ ಒಂದು ಹೋಟೆಲ್‌ಗೆ ಊಟ ಮಾಡುವುದಕ್ಕೆ ಹೋಗಿದ್ದರು. ಎಲ್ಲರೂ ತಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಿ ಊಟಕ್ಕೆ ಎದುರು ನೋಡುತ್ತಿದ್ದರು. ಅದೇ

ಸಮಯದಲ್ಲಿ ಮಂಡೇಲಾ ಅವರ ಕುರ್ಚಿಯ ಎದುರುಗಡೆ ಒಬ್ಬ ವ್ಯಕ್ತಿ ಊಟಕ್ಕೆ ಅಪ್ಪಣೆ ಕೊಟ್ಟ ಊಟಕ್ಕೋಸ್ಕರ ಎದುರು ನೋಡುತ್ತಿದ್ದನು. ನೆಲ್ಸನ್ ಮಂಡೇಲಾ ತನ್ನ ಸುರಕ್ಷೆಯ ಸೈನಿಕರಿಗೆ ಹೇಳಿದರು. ಆ ವ್ಯಕ್ತಿಯನ್ನು ಕೂಡ ತನ್ನ ಟೇಬಲ್ ಮೇಲೆ ಬಂದು ಕುಳಿತುಕೊಳ್ಳಲಿ ಎಂದು. ಆ ವ್ಯಕ್ತಿ ಬಂದು ನೆಲ್ಸನ್ ಮಂಡೇಲಾ ಅವರ ಟೇಬಲ್ ಮೇಲೆ ಬಂದು ಕುಳಿತುಕೊಂಡನು ಎಲ್ಲರೂ ಊಟ ಮಾಡಲು ಶುರು ಮಾಡಿದರು. ಆ ವ್ಯಕ್ತಿಯೂ ಕೂಡ ಊಟ ಮಾಡಲು ಶುರು ಮಾಡಿದನು ಆದರೆ ಆ ವ್ಯಕ್ತಿಯ ಕೈಗಳು ನಡುಗುತ್ತಿದ್ದವು. ಬೇಗನೆ ಊಟ ಮಾಡಿ ಆ ವ್ಯಕ್ತಿ ತಲೆ ಬಗ್ಗಿಸಕೊಂಡು ಆ ಹೋಟೆಲ್ ನಿಂದ ಹೊರಗಡೆ ಹೋದನು. ಆ ವ್ಯಕ್ತಿ ಹೊರಗಡೆ ಹೋದ ನಂತರ ಮಂಡೇಲಾ ಅವರ ಸುರಕ್ಷೆಯ ಅಧಿಕಾರಿ ಹೇಳಿದನು. ಸರ್ ಅವರಿಗೆ ಜ್ವರ ಬಂದಿರಬಹುದು ಊಟ ಮಾಡುವಾಗ ಕೈಗಳು ನಡುಗುತ್ತಿದ್ದವು ಎಂದರು.

ನೆಲ್ಸನ್ ಮಂಡೇಲಾ ನಸು ನಗುತ್ತಾ ಹೇಳಿದರು. ಆ ವ್ಯಕ್ತಿ ರೋಗ ಗ್ರಸ್ತನಲ್ಲ. ನಾನು ಯಾವ ಜೈಲಿನಲ್ಲಿ ಬಂಧಿಯಾಗಿದ್ದನೋ ಆ ಜೈಲಿನ ಜೈಲರ್ ಆ ವ್ಯಕ್ತಿ ಆಗಿದ್ದನು. ನನಗೆ ಬಹಳ ಹಿಂಸೆ ಕೊಟ್ಟಿದ್ದನು ಏಟು ತಿಂದು. ತಿಂದು ಸುಸ್ತಾಗಿ ನೀರು ಕೇಳಿದಾಗ, ಆ ವ್ಯಕ್ತಿ ನೀರು ಬೇಕಾ ಕುಡಿ ಎಂದು ನನ್ನ ಮುಖದ ಮೇಲೆ ಮೂತ್ರ ಮಾಡುತ್ತಿದ್ದನು. ಈಗ ನಾನು ರಾಷ್ಟ್ರಪತಿ ಆಗಿದ್ದೇನೆ. ಆ ವ್ಯಕ್ತಿಗೆ ಮನವರಿಕೆ ಆಗಿದೆ. ತಾನು ಮಾಡಿದ ಕೆಲಸಕ್ಕೆ ಈಗ ತನಗೆ ಭಯಂಕರ ಶಿಕ್ಷೆ ಆಗಬಹುದು ಎಂದು. ಆದರೆ ಅದು ನನ್ನ ಚರಿತ್ರೆ ಅಲ್ಲ. ನನಗೆ ಅನಿಸುತ್ತದೆ ದ್ವೇಷದ ಭಾವನೆಯಿಂದ ಕೆಲಸ ಮಾಡಿದರೆ ಅದು ವಿನಾಶಕ್ಕೆ ದಾರಿ ಮಾಡಿ ಕೊಡುತ್ತದೆ. ಧೈರ್ಯ ಮತ್ತು ಸಹಿಷ್ಣುತೆ ಇದ್ದರೆ ಮಾನಸಿಕ ಪರಿಪಕ್ವತೆ ಪೂರ್ಣವಾಗಿ ಸಾಧಿಸುತ್ತದೆ ಎಂದಿದ್ದ ಆ ಶಾಂತಿ ಧೂತ.

ಲೇಖಕರು: ಡಾ. ಡಿ.ಸಿ. ರಾಮಚಂದ್ರ

-ಶ್ರೀ ಕ್ಷೇತ್ರ ಆದಿಚುಂಚನಗಿರಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

 

Trending News