ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಎ.ವಿದ್ಯಾಲಕ್ಷ್ಮಿ

Second PUC Result: ಮೊದಲ ರ‍್ಯಾಂಕ್ ಪಡೆದಿರುವ ಎ.ವಿದ್ಯಾಲಕ್ಷ್ಮಿ ಇಲ್ಲಿನ ಬೈರೇದೇವರಕೊಪ್ಪದ ಚೌಗುಲ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. 

Written by - Yashaswini V | Last Updated : Apr 10, 2024, 03:28 PM IST
  • ಮೊದಲ ರ‍್ಯಾಂಕ್ ಪಡೆದಿರುವ ಎ.ವಿದ್ಯಾಲಕ್ಷ್ಮಿ
  • ಬೈರೇದೇವರಕೊಪ್ಪದ ಚೌಗುಲ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ.
  • ಎ. ವಿದ್ಯಾಲಕ್ಷ್ಮಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 97 ರಷ್ಟು ಅಂಕ ಪಡೆದಿದ್ದರು.
ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಎ.ವಿದ್ಯಾಲಕ್ಷ್ಮಿ title=

Second PUC Result A Vidyalakshmi Scored First Rank: ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮಿ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾಳೆ. 

ಮೊದಲ ರ‍್ಯಾಂಕ್ (First Rank) ಪಡೆದಿರುವ ಎ.ವಿದ್ಯಾಲಕ್ಷ್ಮಿ ಇಲ್ಲಿನ ಬೈರೇದೇವರಕೊಪ್ಪದ ಚೌಗುಲ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ (Student). ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದರು. 

ಇದನ್ನೂ ಓದಿ- 2nd PUC Result 2024 Karnataka: ದ್ವಿತೀಯ ಪಿಯುಸಿ ಫಲಿತಾಂಶ, ಆನ್‌ಲೈನ್‌ನಲ್ಲಿ ಈ ರೀತಿ ರಿಸಲ್ಟ್ ಚೆಕ್ ಮಾಡಿ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (Second PUC Exam) ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 598 ಪಡೆಯುವ ಮೂಲಕ  ಎ.ವಿದ್ಯಾಲಕ್ಷ್ಮಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. ಈ ಕುರಿತು ಮಹಾವಿದ್ಯಾಲಯದ ಮುಖ್ಯಸ್ಥರು, ಪ್ರಚಾರ್ಯರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ .

ಇದನ್ನೂ ಓದಿ- Railway Jobs: ಹುಬ್ಬಳ್ಳಿಯಲ್ಲಿ ತಿಂಗಳಿಗೆ 2.80 ಲಕ್ಷ ಸಂಬಳ ನೀಡುವ ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ

ಮೂಲತಃ ತಮಿಳುನಾಡು ರಾಜ್ಯದವರಾದ ಇವರು 2002 ರಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವಿದ್ಯಾಲಕ್ಷ್ಮಿ ಪ್ರಾಥಮಿಕ ಹಂತದಿಂದಲೂ ಓದಿನಲ್ಲಿ ಮುಂದೆ ಇದ್ದ ವಿದ್ಯಾರ್ಥಿನಿ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 97 ರಷ್ಟು ಅಂಕ ಪಡೆದಿದ್ದಳು. ತಂದೆ ಎಸ್. ಅಖಿಲೇಶ್ವರನ್  ಹಿರಿಯ ಸೆಕ್ಷನ್ ಇಂಜಿನಿಯರ್  ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News