Rabies Virus : ಸಾಮಾನ್ಯವಾಗಿ ಸೋಂಕಿತ ಪ್ರಾಣಿಯ ಕಡಿತದ ಮೂಲಕ ಹರಡುವ ಸೋಂಕು ಇದಾಗಿದ್ದು,ಬಾವಲಿಗಳು ಮತ್ತು ನರಿಗಳಂತಹ ಕಾಡು ಪ್ರಾಣಿಗಳ ಕೇಂದ್ರ ನರಮಂಡಲದ ಮೇಲೆ ರೇಬೀಸ್ ವೈರಸ್ ಪರಿಣಾಮ ಬೀರುತ್ತದೆ ಮತ್ತು ತಕ್ಷಣ ಚಿಕಿತ್ಸೆ ನೀಡದಿದ್ದರೆ ಮರವಾಗುವ ಸಂಭವವಿದೆ.
ಬೈರಾಪಟ್ಟಣ ಗ್ರಾಮದ ಮೋಹನ್ ಹಾಗೂ ಸ್ಪೂರ್ತಿ ದಂಪತಿಯ ಮಗು ಸಾತ್ವಿಕ್ ಪೇಂಟಾ ವ್ಯಾಕ್ಸಿನೇಷನ್ ಬಳಿಕ ಅಸ್ವಸ್ಥವಾಗಿದ್ದು ಕೆಲವೇ ಹೊತ್ತಿನಲ್ಲಿ ಅಸುನೀಗಿದೆ. ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ್ಯ ಅಂತ ಪೋಷಕರು ಆರೋಪ ಮಾಡಿದ್ದಾರೆ..
ಕೊವಿಡ್ ಲಸಿಕೆ ಪಡೆದ ಭಾರತೀಯರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ. ಲಸಿಕೆ ಪಡೆದವರ ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪಾಸ್ಪೋರ್ಟ್ ಸಂಖ್ಯೆಗಳು, ವೋಟರ್ ಐಡಿ, ಕುಟುಂಬ ಸದಸ್ಯರ ವಿವರಗಳು ಸೇರಿದಂತೆ ಎಲ್ಲಾ ಮಾಹಿತಿ ಸೋರಿಕೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರು ಟ್ವೀಟ್ ಮಾಡಿದ್ದಾರೆ.
Covid19 Cases : ಕಳೆದ 24 ಗಂಟೆಗಳಲ್ಲಿ 10,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 44,998 ಕ್ಕೆ ತಲುಪಿದೆ. ಇದರಿಂದ ಸಾರ್ವಜನಿಕರ ಆತಂಕ ಹೆಚ್ಚುತ್ತಿದೆ. ಅಲ್ಲದೆ, ಒಂದೇ ದಿನದಲ್ಲಿ ಹತ್ತು ಸಾವಿರ ದಾಟುತ್ತಿದ್ದಂತೆ ನಾಲ್ಕನೇ ಅಲೆ ತಲುಪುವ ಲಕ್ಷಣ ಹೆಚ್ಚಾಗುತ್ತಿದೆ.
Omicron New Variant: ಅಮೇರಿಕಾದಲ್ಲಿ ಕಂಡು ಬಂದಿರುವ ಇತ್ತೀಚಿನ ಕೊರೊನಾ ಪ್ರಕರಣಗಳಲ್ಲಿ ಒಮಿಕ್ರಾನ್ ನ ಹೊಸ ರೂಪಾಂತರಿಯಾಗಿರುವ BA.4.6 ಪ್ರಕರಣಗಳು ಶೇ.9 ಕ್ಕಿಂತ ಹೆಚ್ಚಾಗಿವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಾಹಿತಿ ನೀಡಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಈ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಇಲ್ಲಿಯವರೆಗೆ ಬೂಸ್ಟರ್ ಡೋಸ್ ಲಸಿಕೆ ಪಡೆಯದ ಕೋಟ್ಯಂತರ ಭಾರತೀಯರು ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ.
ಋತುಮಾನ ಸಂಬಂಧಿತ ಉಸಿರಾಟದ ವೈರಲ್ ಸೋಂಕು, ಇನ್ಫ್ಲುಯೆನ್ಸಾ, ಎಲ್ಲಾ ವಯೋಮಾನದ ಜನರ ಮೇಲೆ ಪರಿಣಾಮ ಬೀರುತ್ತದೆ. ಕೊಮೊರ್ಬಿಡಿಟಿಗಳಿರುವ ವ್ಯಕ್ತಿಗಳು ತೊಡಕುಗಳಿಂದ ಹೆಚ್ಚಿನ ಅಪಾಯದಲ್ಲಿರುತ್ತಾರೆ. ವಾರ್ಷಿಕ ಇನ್ಫ್ಲುಯೆನ್ಸಾ ಲಸಿಕೆಯು ಸೋಂಕನ್ನು ತಪ್ಪಿಸಲು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ತಂತ್ರವಾಗಿದ್ದು, ಜ್ವರ-ಸಂಬಂಧಿತ ತೊಡಕುಗಳ ಅಪಾಯವನ್ನು 70% ರಿಂದ 90% ರಷ್ಟು ಕಡಿಮೆ ಮಾಡುತ್ತದೆ
Vaccination: ಭಾರತದಲ್ಲಿ ಕರೋನಾ ವೈರಸ್ (Coronavirus) ವಿರುದ್ಧ ಲಸಿಕೆ ಅಭಿಯಾನವು (Vaccination) ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಈ ನಡುವೆ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ದೊಡ್ಡ ಸುದ್ದಿ ಬಂದಿದೆ. 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ.
Southern Railway News: ದೇಶಾದ್ಯಂತ ಹೆಚ್ಚಾಗುತ್ತಿರುವ ಕೊವಿಡ್ (Covid-19) ಪ್ರಕರಣಗಳ ಸಂಖ್ಯೆ ಹಿನ್ನೆಲೆ ದಕ್ಷಿಣ ರೇಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು, ಲೋಕಲ್ ಟ್ರೇನ್ (Local Train) ಗಳಲ್ಲಿ 'ನೋ ವ್ಯಾಕ್ಸಿನ್, ನೋ ಎಂಟ್ರಿ' (No Vaccine, No Entry) ನೀತಿಯನ್ನು ಜಾರಿಗೊಳಿಸಲಾಗಿದೆ. ಅಂದರೆ, ಯಾತ್ರೆಗಾಗಿ ಕೊರೊನಾ ವ್ಯಾಕ್ಸಿನ್ ನ ಎರಡೂ ಪ್ರಮಾಣಗಳನ್ನು ಕಡ್ಡಾಯಗೊಳಿಸಲಾಗಿದೆ.
Omicron Testing Kit: ಭಾರತದಲ್ಲಿ ಓಮಿಕ್ರಾನ್ ಅಂಕಿ-ಅಂಶಗಳು 1800 ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಒಮಿಕ್ರಾನ್ (Omicron) ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ, ಒಮಿಕ್ರಾನ್ ನ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯ ದೆಹಲಿಯಾಗಿದೆ.
ಡಿಸೆಂಬರ್ 25, 2021 ರಂದು, ಪ್ರಧಾನಿ ನರೇಂದ್ರ ಮೋದಿ ಅವರು 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದಾಗಿ ಘೋಷಿಸಿದರು. ಜ.3ರ ಸೋಮವಾರದಿಂದ ಆರಂಭಿಸಲಾಗುವುದು ಎಂದು ಹೇಳಿದ್ದರು.
Corona Latest News - ಕೊರೊನಾ ವೈರಸ್ ನ ಹೊಸ ರೂಪಾಂತರಿ ದೇಶದ 11 ರಾಜ್ಯಗಳಿಗೆ ತಲುಪಿದೆ. ನಿತ್ಯ ಓಮಿಕ್ರಾನ್ ಸೋಂಕಿನ ಹೊಸ ಪ್ರಕರಣಗಳು ದೃಢಪಡುತ್ತಿವೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆಯನ್ನು ನೀಡಿದೆ.
Vaccination: ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಕರೋನಾ ಲಸಿಕೆ ಪಡೆಯಲು ಹೋಗಿ 7.4 ಕೋಟಿ ರೂಪಾಯಿ ಗೆದ್ದಿದ್ದಾರೆ. ಈ ಹಣವನ್ನು 'ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್ ಲಾಟರಿ ಸಿಸ್ಟಮ್' ಅಡಿಯಲ್ಲಿ ನೀಡಲಾಗಿದೆ.
ಇಂದಿಗೂ ದೇಶದ ಅನೇಕ ಭಾಗಗಳಲ್ಲಿ ವ್ಯಾಕ್ಸಿನೇಷನ್ ವೇಗವು ಬಹಳ ನಿಧಾನವಾಗಿ ಸಾಗುತ್ತಿದೆ. ದೇಶದಲ್ಲಿರುವ 40 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 50 ಪ್ರತಿಶತ ಜನರು ಕರೋನಾ ಲಸಿಕೆಯ ಮೊದಲ ಡೋಸ್ ಕೂಡಾ ಹಾಕಿಸಿಕೊಂಡಿಲ್ಲ.
ಭಾರತದಲ್ಲಿ 100 ಕೋಟಿ ಕರೋನಾ ಲಸಿಕೆ ಡೋಸ್ ಪೂರ್ಣಗೊಳ್ಳುವ ಸಮಯದಲ್ಲಿ, ಎಲ್ಲಾ ರೈಲ್ವೆ ನಿಲ್ದಾಣಗಳು , ಎಲ್ಲಾ ವಿಮಾನ ನಿಲ್ದಾಣಗಳು, ವಿಮಾನಗಳು, ಬಸ್ ನಿಲ್ದಾಣಗಳನ್ನು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಬಗ್ಗೆ ಘೋಷಿಸಲಾಗುವುದು.
ಈ ವೈರಲ್ ವಿಡಿಯೋದಲ್ಲಿ ತಮಾಷೆ ವಿಷಯವೆಂದರೆ ತರಕಾರಿ ಮಾರಾಟಗಾರರ ಧ್ವನಿಯಲ್ಲಿ "ಲಸಿಕೆ, ಲಸಿಕೆ. ಪೆಹ್ಲಾ ಡೋಸ್ ದೂಸ್ರಾ ಡೋಸ್ (ಮೊದಲ ಡೋಸ್, ಎರಡನೇ ಡೋಸ್)'' ಎಂದು ಆತನ ಹಾಡುವ ವಿಧಾನ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಸಂಜೆ 6 ಗಂಟೆಯವರೆಗೆ, ಭಾರತವು ಒಂದು ದಿನದಲ್ಲಿ 1.09 ಕೋಟಿ ಡೋಸ್ಗಳ ಅತ್ಯುನ್ನತ ದಾಖಲೆಯನ್ನು ಸಾಧಿಸಿದೆ ಎಂದು ಹೇಳಿದರು. ಐದು ದಿನಗಳಲ್ಲಿ ಎರಡನೇ ಬಾರಿಗೆ ಒಂದು ಕೋಟಿಗಿಂತ ಹೆಚ್ಚು ಕರೋನಾ ಡೋಸ್ಗಳನ್ನು ನೀಡಿರುವ ಈ ಸಾಧನೆಗಾಗಿ ಅವರು ಇಡೀ ದೇಶವನ್ನು ಶ್ಲಾಘಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.