Bengaluru Crime News: ಗಲಾಟೆ ವೇಳೆ ಪತ್ನಿಯ ಬೆರಳನ್ನು ಕಚ್ಚಿ, ಕಚ್ಚಿ ತಿಂದ ಪತಿಯೊಬ್ಬ ನಿನ್ನನ್ನೂ ಕೂಡ ಕೊಂದು ಇದೇ ರೀತಿ ತಿನ್ನುವುದಾಗಿ ಪತ್ನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಸುಮಾರು 23ವರ್ಷಗಳ ಹಿಂದೆ ಪುಷ್ಪ ಎಂಬಾಕೆಗೆ ವಿಜಯಕುಮಾರ್ ಎಂಬಾತನ ಜೊತೆ ಮದುವೆಯಾಗಿತ್ತು. ಎರಡು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿರುವ ಈ ದಂಪತಿಗೆ ಒಬ್ಬ ಗಂಡು ಮಗ ಕೂಡ ಇದ್ದಾನೆ. ಆದರೆ, ಸೈಕೋ ಪತಿಯ ಮಾಸಿಕ ಮತ್ತು ದೈಹಿಕ ಹಿಂಸೆಯಿಂದ ಬೇಸತ್ತ ಹೆಂಡತಿ ಮಗನೊಂದಿಗೆ ಬೇರೆ ಮನೆಯಲ್ಲಿ ವಾಸವಿದ್ದಳು.
ಇದನ್ನೂ ಓದಿ- Raichur News: ಅನೈತಿಕ ಸಂಬಂಧ ಶಂಕೆ ಪತಿಯಿಂದ ಪತ್ನಿ ಕೊಲೆ
ಪತ್ನಿ ಪುಷ್ಟ ಮಗ ಬೇರೆ ಮನೆಯಲ್ಲಿದ್ದರೂ ಬಿಡದ ರಾಕ್ಷಸ ಪತಿ ಕಳೆದ ಜುಲೈ 28ನೇ ತಾರೀಕು ಶುಕ್ರವಾರದ ದಿನ ಅವರ ಮನೆಗೆ ಹೋಗಿ ಕಾಲು ಕೆರೆದು ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಆಗಿದ್ದು ಇದೇ ಸಂದರ್ಭದಲ್ಲಿ ಪತ್ನಿ ಪುಷ್ಪಾಳ ಎಡಗೈ ಬೆರಳನ್ನು ಕಚ್ಚಿ ಕಚ್ಚಿ ತಿಂದಿದ್ದಾನೆ. ಮಾತ್ರವಲ್ಲಎ, ನಿನ್ನನ್ನೂ ಇದೇ ರೀತಿ ಕೊಂದು ತಿನ್ನುವುದಾಗಿ ಬೆದರಿಕೆ ಹಾಗಿದ್ದಾನೆ. ಇಷ್ಟಕ್ಕೆ ತೃಪ್ತನಾಗದ ರಾಕ್ಷಸ ಪತಿ ರೌಡಿಶೀಟರ್ ಗಳನ್ನ ಬಿಟ್ಟು ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ.
ಇದನ್ನೂ ಓದಿ- ʼಜೋಡಿ ಕೊಲೆʼ ಮಾಡಿ ಎಸ್ಕೇಪ್ ಆದ ರೀಲ್ಸ್ ಸ್ಟಾರ್ ʼಜೋಕರ್ ಫಿಲಿಕ್ಸ್ʼ ..! ಬಂಧನಕ್ಕೆ ಬಲೆ ಬೀಸಿದ ಖಾಕಿ ಪಡೆ
ಸದ್ಯ ಪತಿಯ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದಾಗಿ ಬೇಸತ್ತಿರುವ ಪುಷ್ಪ ತನ್ನ ಪತಿ ವಿಜಯ್ ಕುಮಾರ್ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.