Air India Express : 141 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನದಲ್ಲಿ ಅಗ್ನಿ ಅವಘಡ!

ವಿಮಾನ ಸಂಖ್ಯೆ IX 442 ಮಸ್ಕತ್‌ನಿಂದ ಕೊಚ್ಚಿಗೆ ಟೇಕ್ ಆಫ್ ಆಗಬೇಕಿತ್ತು. ಆಗ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದೆ.

Written by - Channabasava A Kashinakunti | Last Updated : Sep 14, 2022, 04:07 PM IST
  • ಮಸ್ಕತ್ ನಿಂದ ಕೊಚ್ಚಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ
  • ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆ
  • ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದರೆ
Air India Express : 141 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನದಲ್ಲಿ ಅಗ್ನಿ ಅವಘಡ! title=

Air India Express Flight : ಮಸ್ಕತ್ ನಿಂದ ಕೊಚ್ಚಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ವಿಮಾನ ಸಂಖ್ಯೆ IX 442 ಮಸ್ಕತ್‌ನಿಂದ ಕೊಚ್ಚಿಗೆ ಟೇಕ್ ಆಫ್ ಆಗಬೇಕಿತ್ತು. ಆಗ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದೆ.

ರದ್ದಾದ ವಿಮಾನ

ಮಾಹಿತಿಯ ಪ್ರಕಾರ, ಇಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ನೋಡಿದ ತಕ್ಷಣ ಟೇಕ್-ಆಫ್ ಅನ್ನು ರದ್ದುಗೊಳಿಸಲಾಯಿತು ಮತ್ತು ಎಲ್ಲಾ ಪ್ರಯಾಣಿಕರನ್ನು ಇಳಿಸಲಾಗಿದೆ. ಆದ್ರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ : PM Modi : ಕೇಂದ್ರದಿಂದ ಪಿಎಂ ಮೋದಿ ಜನ್ಮದಿನದಂದು ರಕ್ತದಾನ ಅಭಿಯಾನ, ನೀವು ದಾನ ಮಾಡಬಹುದು

ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದರೆ

 ಅಪಘಾತದ ಸಂಭವಿಸಿದ ಸಮಯದಲ್ಲಿ ವಿಮಾನದಲ್ಲಿ 141 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು. ಪ್ರಸ್ತುತ, ಎಂಜಿನಿಯರ್‌ಗಳ ತಂಡವು ವಿಮಾನವನ್ನು ಪರಿಶೀಲಿಸುತ್ತಿದೆ. ಈ ಘಟನೆಯ ನಂತರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಮಸ್ಕತ್‌ನಿಂದ ಕೊಚ್ಚಿಗೆ ಪ್ರಯಾಣಿಕರನ್ನು ಕರೆತರಬಹುದಾಗಿದೆ.

ಕೆಲವು ತಿಂಗಳ ಹಿಂದೆಯೂ ಇಂತಹ ದೂರು ಬಂದಿತ್ತು

ಸುಮಾರು ಎರಡು ತಿಂಗಳ ಹಿಂದೆ ಕ್ಯಾಲಿಕಟ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಸುಟ್ಟ ವಾಸನೆ ಬಂದ ನಂತರ ಮಸ್ಕತ್ ಕಡೆಗೆ ತಿರುಗಬೇಕಾಗಿತ್ತು.

ಇದನ್ನೂ ಓದಿ : Goa Politics : ಕಾಂಗ್ರೆಸ್ ಬಿಗ್ ಶಾಕ್ : ಗೋವಾದ 8 ಜನ ಕೈ ಶಾಸಕರು ಬಿಜೆಪಿ ಸೇರ್ಪಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News