ದರ್ಶನ್‌ಗೆ ಬಳ್ಳಾರಿ ಜೈಲ್ ಸೇಫ್ ಅಲ್ಲ! 10 ಬಾರಿ ಬಳ್ಳಾರಿ ಜೈಲ್ ಬಂಧಿಯಾಗಿದ್ದ ಶಿಗ್ಲಿ ಬಸ್ಯನ ಶಾಕಿಂಗ್ ಹೇಳಿಕೆ!

Bellary Jail: ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಬರೋಬ್ಬರಿ ಹತ್ತು ಬಾರಿ ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿದ್ದ ಶಿಗ್ಲಿ ಬಸ್ಯ,  ಇಂದು ಬಳ್ಳಾರಿ ಜೈಲಿನ ಬಳಿ ದರ್ಶನ್ ಬಗ್ಗೆ ಪ್ರತಿಕ್ರಿಯಿಸಿದರು. 

Written by - Yashaswini V | Last Updated : Sep 9, 2024, 02:57 PM IST
  • ಈ ಹಿಂದೆ ಹಲವಾರು ಕೇಸ್ ಗಳಲ್ಲಿ 10 ಬಾರಿ ಬಳ್ಳಾರಿ ಜೈಲ್ ಬಂಧಿಯಾಗಿದ್ದ ಬಸ್ಯ
  • ವಿಚಾರಣಾದೀನ ಕೈದಿಯಾಗಿ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಬಂದಿದ್ದೇನೆ.
  • ಕೈದಿಗಳಿಗೆ ಸಮಸ್ಯೆ ಬಂದಾಗ ರಾಜ್ಯದಾದ್ಯಂತ ಹೋರಾಟ ಮಾಡುತ್ತಾ ಬಂದಿರುವೆ- ಶಿಗ್ಲಿ ಬಸ್ಯ
ದರ್ಶನ್‌ಗೆ ಬಳ್ಳಾರಿ ಜೈಲ್ ಸೇಫ್ ಅಲ್ಲ! 10 ಬಾರಿ ಬಳ್ಳಾರಿ ಜೈಲ್ ಬಂಧಿಯಾಗಿದ್ದ ಶಿಗ್ಲಿ ಬಸ್ಯನ ಶಾಕಿಂಗ್ ಹೇಳಿಕೆ!  title=

Bellary Jail Not Safe For Darshan: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ (Actor Darshan) ನೋಡಲು ಬಂದ ಶಿಗ್ಲಿ ಬಸ್ಯ, ದರ್ಶನ್ ಗೆ ಬಳ್ಳಾರಿ ಜೈಲ್ ಸೇಫ್ ಅಲ್ಲ ಎಂಬ ಶಾಕಿಂಗ್ ಹೇಳಿಕೆ (Shocking Statement) ನೀಡಿದ್ದಾರೆ. 

ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಬರೋಬ್ಬರಿ ಹತ್ತು ಬಾರಿ ಬಳ್ಳಾರಿ ಜೈಲಿನಲ್ಲಿ(Bellary Jail) ಬಂಧಿಯಾಗಿದ್ದ ಶಿಗ್ಲಿ ಬಸ್ಯ,  ಇಂದು ಬಳ್ಳಾರಿ ಜೈಲಿನ ಬಳಿ ದರ್ಶನ್ ಬಗ್ಗೆ ಪ್ರತಿಕ್ರಿಯಿಸುತ್ತಾ, ದರ್ಶನ್ ಗೆ ಬಳ್ಳಾರಿ ಜೈಲ್ ಸೇಫ್ ಅಲ್ಲ ಅಂತ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದೆ. ಬಳ್ಳಾರಿ ಜೈಲ್ ಕೊಲೆ ಆರೋಪಿ ದರ್ಶನ್ ಗೆ ಸೇಫ್ ಅಲ್ಲ (Bellary Jail Not Safe For Darshan) ಅಂತ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ- ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ 'ದರ್ಶನ್' ಧರಿಸಿದ್ದ ಬ್ರಾಂಡೆಡ್ ಟೀಶರ್ಟ್, ಕೂಲಿಂಗ್ ಗ್ಲಾಸ್, ಜೀನ್ಸ್ ಬೆಲೆ ಎಷ್ಟು ಗೊತ್ತಾ?

ಕೊಲೆ ಆರೋಪಿ ದರ್ಶನ್ (Darshan) ಗೆ ಸಾಕಷ್ಟು ಅನಾನುಕೂಲಕರವಾದ ವಾತವರಣ ಸೃಷ್ಠಿ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಕೊಲೆ ಆರೋಪಿ. ಆ ಮಾತ್ರಕ್ಕೆ ಅವನನ್ನು ಟೇರೆರಿಸ್ಟ್ ಮಾದರಿಯಲ್ಲಿ ತೋರಿಸುವುದು ಒಳೆಯದಲ್ಲ ಎಂದು ಶಿಗ್ಲಿ ಬಸ್ಯ ಹೇಳಿದ್ದಾರೆ. 

ಇದನ್ನೂ ಓದಿ- ದರ್ಶನ್‌ ನನ್ನ ಗಾಡ್‌ ಫಾದರ್‌, ಅವರೇ ನನ್ನ ಬೆಳಸುತ್ತಿರೋದು.. ಅದಕ್ಕೆ ಜೈಲಿಗೆ ನೋಡಲು ಹೋಗಿದ್ದೆ : ಪೊಲೀಸರ ಮುಂದೆ ಚಿಕ್ಕಣ್ಣ ಹೇಳಿಕೆ

ದರ್ಶನ್ ಪ್ರಕರಣದಲ್ಲಿ ವಾದ ಮಾಡುವೆ ಎಂದ ಶಿಗ್ಲಿ ಬಸ್ಯ: 
ಇದೇ ಸಂದರ್ಭದಲ್ಲಿ ಕೈದಿಗಳಿಗೆ ಸಮಸ್ಯೆ ಬಂದಾಗ ರಾಜ್ಯದಾದ್ಯಂತ ಹೋರಾಟ ಮಾಡುತ್ತಾ ಬಂದಿರುವುದಾಗಿ ತಿಳಿಸಿದ ಶಿಗ್ಲಿ ಬಸ್ಯಾ (Shigli Basya),  ಇಂದು ದರ್ಶನ್ ಅವರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇನೆ. ಅವಕಾಶ ಮಾಡಿಕೊಟ್ಟರೆ ದರ್ಶನ್ ಭೇಟಿಯಾಗಿ ಪ್ರಕರಣದ ಬಗ್ಗೆ ಮಾತನಾಡುವೆ. ಬಳಿಕ ರೇಣುಕಾಸ್ವಾಮಿ ಮನೆಗೆ ಹೋಗಿ ಅವರ ಕುಟುಂಬದವರೊಟ್ಟಿಗೆ ಮಾತನಾಡುತ್ತೇನೆ.ಎಲ್ಲಿ ಕಿಡ್ಯಾಪ್ ಆಯ್ತು, ಈ ಘಟನೆ ಹೇಗೆ ನಡೆಯಿತು ಎಂಬಿತ್ಯಾದಿ ಮಾಹಿತಿಗಳ ಬಗ್ಗೆ ಸರ್ವೇ ಮಾಡುತ್ತೇನೆ. ನಂತರ ಚಾರ್ಜ್ ಶೀಟ್ ಪರಿಶೀಲಿಸಿ ಅದರ ಆಧಾರದ ಮೇಲೆ ಅರ್ಗ್ಯೂಮೆಂಟ್ ಮಾಡುವುದಾಗಿ ತಿಳಿಸಿದ್ದಾರೆ. 

ಈ ವೇಳೆ ಯಾವ ರೀತಿ ಅರ್ಗ್ಯೂಮೆಂಟ್ ಮಾಡುತ್ತೀರಿ ಎಂಬ ಬಗ್ಗೆ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಿಗ್ಲಿ ಬಸ್ಯ, ನನ್ನ ಮೇಲಿದ್ದ 262 ಪ್ರಕರಣಗಳಲ್ಲಿ ನಾನೇ ವಾದ ಮಾಡಿ ಗೆದ್ದಿದ್ದೇನೆ. ಸುಮಾರು 7 ಸೆಂಟ್ರಲ್ ಜೈಲಿನಲ್ಲಿದ್ದೆ 48 ಕೋರ್ಟ್ ಗಳಲ್ಲಿ ವಾದ ಮಾಡಿ ನ್ಯಾಯ ಪಡೆದಿದ್ದೇನೆ. ಸೆಕ್ಷನ್ ಗಳ ಬಗ್ಗೆ ಸಾಕಷ್ಟು ಅನುಭವ ನನಗೆ ಇದೆ.  ಈ ರೀತಿ ವಾದ ಮಾಡಿ ಪಬ್ಲಿಕ್ ಕೈದಿಗಳಿಗೂ ನಾನು ನ್ಯಾಯ ಕೊಡಿಸಿದ್ದೀನಿ ಅಂತ ಹೇಳಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
WhatsApp Channel- bit.ly/46lENGm
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
Twitter Link - https://bit.ly/3n6d2R8  ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News