ಕೆಲಸ ಅರಸಿ ವಿದೇಶಕ್ಕೆ ತೆರಳಿದ ಕನ್ನಡಿಗರಿಗೆ ಸಂಕಷ್ಟ : ದೇಶಕ್ಕೆ ವಾಪಸ್‌ ಕರೆಸಿಕೊಳ್ಳುವಂತೆ ಪ್ರಧಾನಿಗೆ ಮನವಿ

Abroad Job Fraud: ಅಂದ ಹಾಗೆ ಬೀದರ್ ಹಾಗೂ ಕಲ್ಬುರ್ಗಿ ಜಿಲ್ಲೆಯ 14 ಜನ ಯುವಕರು ಕಲ್ಬುರ್ಗಿ ಮೂಲದ ಮಧ್ಯವರ್ತಿಗಳಿಗೆ ತಲಾ ಒಂದೊಂದು ಲಕ್ಷ ರು. ಹಣ ನೀಡಿ ಉಜ್ಬೇಕಿಸ್ತಾನ ದೇಶದಲ್ಲಿ ಕೆಲಸಕ್ಕೆ ಅರಸಿ ಹೋಗಿದ್ದಾರೆ. ಮಧ್ಯವರ್ತಿ ಡಾಲರ್ ಕನಸು ತೊರಿಸಿ ಯಾವುದೊ ಒಂದು ಕಂಪನಿಗೆ ಯುವಕರನ್ನು ಕಳುಹಿಸಿದ್ದಾರೆ. 

Written by - Yashaswini V | Last Updated : Aug 1, 2024, 10:18 AM IST
  • ಬೀದರ್, ಕಲ್ಬುರ್ಗಿ ಮೂಲದ ಯುವಕರಿಗೆ ಸಂಕಷ್ಟ
  • ಮಧ್ಯವರ್ತಿಗಳ ಮೋಸದಿಂದ ಜೀವ ಭಯದಲ್ಲಿ ಕನ್ನಡಿಗರು
  • ದೇಶಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಪ್ರಧಾನಿ ಮೋದಿ, ಸಿಎಂ ಸಿದ್ದುಗೆ ಮನವಿ
ಕೆಲಸ ಅರಸಿ ವಿದೇಶಕ್ಕೆ ತೆರಳಿದ ಕನ್ನಡಿಗರಿಗೆ ಸಂಕಷ್ಟ : ದೇಶಕ್ಕೆ ವಾಪಸ್‌ ಕರೆಸಿಕೊಳ್ಳುವಂತೆ ಪ್ರಧಾನಿಗೆ ಮನವಿ title=

Kannadigas Stuck In Abroad: ವಿದೇಶದಲ್ಲಿ ಡಾಲರ್ ನಲ್ಲಿ ಸಂಬಳ ಪಡೆಯುವ ಕನಸು ಕಟ್ಟಿಕೊಂಡು ಕೈ ತುಂಬ ಸಂಪಾದನೆ ಮಾಡಿ ದೇಶಕ್ಕೆ ವಾಪಸ್ಸಾಗ್ಬೇಕು ಎಂದು ವಿದೇಶಕ್ಕೆ ಕೆಲಸಕ್ಕೆ ಅರಸಿ ಹೋದ ರಾಜ್ಯದ 14 ಯುವಕರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿ ಸ್ವದೇಶಕ್ಕೆ ವಾಪಸ್ಸಾಗಲು ಆಗದೆ ಊಟ ವಸತಿಯೂ ಇಲ್ಲದೆ ನಿರ್ಜನ ಪ್ರದೇಶದಲ್ಲಿ ಸಾವು ಬದುಕಿನ ನಡುವೆ ಹೊರಾಡುತ್ತಿರುವ ದುರಂತ ಘಟನೆ ಬೆಳಕಿಗೆ ಬಂದಿದೆ. 

ಅಂದ ಹಾಗೆ ಬೀದರ್ ಹಾಗೂ ಕಲ್ಬುರ್ಗಿ ಜಿಲ್ಲೆಯ 14 ಜನ ಯುವಕರು ಕಲ್ಬುರ್ಗಿ ಮೂಲದ ಮಧ್ಯವರ್ತಿಗಳಿಗೆ ತಲಾ ಒಂದೊಂದು ಲಕ್ಷ ರು. ಹಣ ನೀಡಿ ಉಜ್ಬೇಕಿಸ್ತಾನ  (Uzbekistan) ದೇಶದಲ್ಲಿ ಕೆಲಸಕ್ಕೆ ಅರಸಿ ಹೋಗಿದ್ದಾರೆ. ಮಧ್ಯವರ್ತಿ ಡಾಲರ್ ಕನಸು ತೊರಿಸಿ ಯಾವುದೊ ಒಂದು ಕಂಪನಿಗೆ ಯುವಕರನ್ನು ಕಳುಹಿಸಿದ್ದಾರೆ. 

ಇದನ್ನೂ ಓದಿ- ಅಂತರ್ ರಾಜ್ಯ ಕುಖ್ಯಾತ ದರೋಡೆಕೋರ ಫರ್ಹಾನ್ ಶೇಖ್ ಬಂಧನ

ಯುವಕರು ವಿದೇಶಕ್ಕೆ ಹೊಗ್ತಿದ್ದಂತೆ ಕಂಪನಿ ಅತ್ತ ಕೆಲಸನೂ ನೀಡಿಲ್ಲ. ಉಳಿದುಕೊಳ್ಳಲು ವ್ಯವಸ್ಥೆಯೂ ಮಾಡಿಲ್ಲ. ಬದಲಾಗಿ ನಿರ್ಜನ ಪ್ರದೇಶದಲ್ಲಿ ಊಟ ವಸತಿ ಇಲ್ಲದೆ ಕೂಡಿ ಹಾಕಲಾಗಿದೆ. ಇದೇ ಭಾಗದಲ್ಲಿ ಇದೆ ಅತಂತ್ರ ಸ್ಥಿತಿಯಲ್ಲಿ ಉತ್ತರ ಪ್ರದೇಶದ ಇಬ್ಬರು ಯುವಕರು ಜೀವ ಕಳೆದುಕೊಂಡರು. ಮೃತ ದೇಹ ಎಲ್ಲೋ ಬಿಸಾಡಿದ್ದಾರೆ. ನಮಗೆಲ್ಲ ಭಯ ಆಗ್ತಿದೆ ದಯವಿಟ್ಟು ಪ್ರಧಾನಿ ನರೇಂದ್ರ ಮೋದಿ (PM Narendra Modi), ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು ನಮಗೆ ಸ್ವದೇಶಕ್ಕೆ  ವಾಪಸ್ ಕರೆಯಿಸಿಕೊಳ್ಳಿ ಎಂದು ಒಂದೆ ಸಮನೆ ಅಂಗಲಾಚ್ತಿದ್ದಾರೆ.

ಇದನ್ನೂ ಓದಿ- ಪ್ರವಾಸೋದ್ಯಮ ಇಲಾಖೆಯಲ್ಲಿನ ಅಕ್ರಮ ಹಣ ವರ್ಗಾವಣೆ: ಬ್ಯಾಂಕ್ ಉದ್ಯೋಗಿ ಬಂಧನ

ಉಜ್ಬೇಕಿಸ್ತಾನ ದೇಶದ ನಿರ್ಜನ ಪ್ರದೇಶದಿಂದ ಜೀನ್ಯೂಸ್ ಕನ್ನಡದ (Zee News Kannada) ಬೀದರ್ ವರದಿಗಾರ ಅನೀಲಕುಮಾರ್ ದೇಶಮುಖ್ ಅವರನ್ನು ಸಂಪರ್ಕಿಸಿ ಸಂಕಷ್ಟದಿಂದ ಹೊರ ತರುವಂತೆ ಮನವಿ ಮಾಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News