ಹೊಲದಲ್ಲಿದ್ದ ಶೆಡ್‌ಗೆ ದುಷ್ಕರ್ಮಿಗಳಿಂದ ಬೆಂಕಿ: ಇಬ್ಬರು ಸಜೀವ ದಹನ, ಮೂವರು ಪಾರು

Crime News: ತಡರಾತ್ರಿ ದುಷ್ಕರ್ಮಿಗಳು ಹೊಲವೊಂದರ ಶೆಡ್‌ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪರಿಣಾಮವಾಗಿ ಶೆಡ್‌ನಲ್ಲಿ ಮಲಗಿದ್ದ ಐವರ ಪೈಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Written by - Yashaswini V | Last Updated : Jul 16, 2024, 09:54 AM IST
  • ಬೆಳಗಲಿ ವ್ಯಾಪ್ತಿಯ ಹೊಲವೊಂದರಲ್ಲಿ ಘಟನೆ
  • ಬಾಗಲಕೋಟೆ ಜಿಲ್ಲೆಯ ಬೆಳಗಲಿ ವ್ಯಾಪ್ತಿಯ ಹೊಲ
  • ದಸ್ತಗಿರಸಾಬ ಪೆಂಡಾರಿ ಎಂಬುವವರ ಮನೆ ಮೇಲೆ ದಾಳಿ
ಹೊಲದಲ್ಲಿದ್ದ ಶೆಡ್‌ಗೆ ದುಷ್ಕರ್ಮಿಗಳಿಂದ ಬೆಂಕಿ: ಇಬ್ಬರು ಸಜೀವ ದಹನ, ಮೂವರು ಪಾರು title=

Crime News: ದುಷ್ಕರ್ಮಿಗಳು ಇಬ್ಬರನ್ನ ಸಜೀವವಾಗಿ ಸುಟ್ಟು ಹಾಕಿದ ಘಟನೆ ಬಾಗಲಕೋಟೆ ಜಿಲ್ಲೆಯ ಮಹಲಿಂಗಪುರದ ಸಮೀಪ ಬೆಳಗಲಿ ಗ್ರಾಮದ ಹೊರವಲಯದ ಹೊಲವೊಂದರಲ್ಲಿ ನಡೆದಿದೆ.

ತಡರಾತ್ರಿ ದುಷ್ಕರ್ಮಿಗಳು ಹೊಲವೊಂದರ ಶೆಡ್‌ಗೆ  (Shed) ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪರಿಣಾಮವಾಗಿ ಶೆಡ್‌ನಲ್ಲಿ ಮಲಗಿದ್ದ ಐವರ ಪೈಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ- ಕುಡಿದ ಮತ್ತಿನಲ್ಲಿ ಮನಸೋ ಇಚ್ಛೆ ಚಾಕುವಿನಿಂದ ಇರಿತ, ತರಕಾರಿ ವ್ಯಾಪಾರಿ ಮೇಲೆ ಗಂಭೀರ ಹಲ್ಲೆ

ದಸ್ತರಗೀರಸಾಬ್ ಪೆಂಡಾರಿ ಎನ್ನುವವರ ಶೆಡ್‌ಗೆ ಬೆಂಕಿ (Fire) ಇಡಲಾಗಿದ್ದು,  ಮೃತರನ್ನ ದಸ್ತರಗೀರಸಾಬ್ ಅವರ ಮಗಳು ಶಬಾನಾ ಪೆಂಡಾರಿ (26), ಪತ್ನಿ ಜಯನಬಿ ಪರಂಡಾರಿ (50) ಎಂದು ಗಯರ್ತಿಸಲಾಗಿದೆ. ಇನ್ನು ದಸ್ತರಗೀರಸಾಬ್  ಹಾಗೂ ಅವರ ಮಗ ಸುಭಾನ ಹಾಗೂ ಮೊಮ್ಮಗ ಸಿದ್ದಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ- ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್: ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಭೀಕರ ಹತ್ಯೆ!

ಶೆಡ್‌ನ ಹೊರಗಡೆಯಿಂದ ಬೀಗಹಾಕಿ 100 ಲೀಟರ್ ಸಾಮರ್ಥ್ಯದ ಸಿಂಟ್ಯಾಕ್ಸ'ನಲ್ಲಿ ಪೆಟ್ರೋಲ್ ತುಂಬಿಸಿ, 2HP_ ಮೋಟಾರ್ ಬಳಸಿ ಶೆಡ್ಡ್'ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ತನಿಖೆಯನ್ನ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News