Yadgir : ಬುದ್ದಿ ಮಾತು ಹೇಳಲು ಬಂದ ನಾಲ್ವರಿಗೆ ಬೆಂಕಿ ಹಚ್ಚಿದ ಗಂಡ!

ಹಲವು ದಿನಗಳಿಂದ ಗಂಡ ಶರಣಪ್ಪ, ಹೆಂಡತಿ ಹುಲಗಮ್ಮ ಇಬ್ಬರು ಜಗಳ ಆಡ್ತಾ ಇದ್ದರು. ಹೆಂಡತಿಯ ತವರು ಮನೆಯ ನಾಲ್ಕು ಜನ ಬುದ್ದಿಮಾತು ಹೇಳಲು ಬಂದಿದ್ದರು ಆವರಿಗೆ ಶರಣಪ್ಪ ಪೆಟ್ರೋಲ್ ನಿದ ಬೆಂಕಿ ಹಚ್ಚಿದ್ದಾರೆ.

Written by - Zee Kannada News Desk | Last Updated : Jun 29, 2022, 08:09 PM IST
  • ಬುದ್ದಿ ಮಾತು ಹೇಳಲು ಬಂದ ನಾಲ್ವರಿಗೆ ಬೆಂಕಿ ಹಚ್ಚಿದ ವ್ಯಕ್ತಿ
  • ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ
  • ಶರಣಪ್ಪ ಬೆಂಕಿ ಹಚ್ಚಿದ ವ್ಯಕ್ತಿ
Yadgir : ಬುದ್ದಿ ಮಾತು ಹೇಳಲು ಬಂದ ನಾಲ್ವರಿಗೆ ಬೆಂಕಿ ಹಚ್ಚಿದ ಗಂಡ! title=

ಯಾದಗಿರಿ : ಬುದ್ದಿ ಮಾತು ಹೇಳಲು ಬಂದ ನಾಲ್ವರಿಗೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ. ಶರಣಪ್ಪ ಬೆಂಕಿ ಹಚ್ಚಿದ ವ್ಯಕ್ತಿ. ಓರ್ವ ವ್ಯಕಿ ಸಾವು, ಮೂವರ ಸ್ಥಿತಿ ಗಂಭೀರವಾಗಿದೆ. ನಾಗಪ್ಪ ಎಂಬುವವನು ಸಾವಿಗೀಡಾದ ವ್ಯಕ್ತಿ. 

ಹಲವು ದಿನಗಳಿಂದ ಗಂಡ ಶರಣಪ್ಪ, ಹೆಂಡತಿ ಹುಲಗಮ್ಮ ಇಬ್ಬರು ಜಗಳ ಆಡ್ತಾ ಇದ್ದರು. ಹೆಂಡತಿಯ ತವರು ಮನೆಯ ನಾಲ್ಕು ಜನ ಬುದ್ದಿಮಾತು ಹೇಳಲು ಬಂದಿದ್ದರು ಆವರಿಗೆ ಶರಣಪ್ಪ ಪೆಟ್ರೋಲ್ ನಿದ ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ : 8 ಲಲನೆಯರ ಅಕೌಂಟ್ಗೆ 6 ಕೋಟಿ ಸುರಿದ ಬ್ಯಾಂಕ್ ಮ್ಯಾನೇಜರ್!

ಬುದ್ದಿಮಾತು ಹೇಳಲು ಬಂದವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಇಬ್ಬರು ಹಾಗೂ ಸರೂರುನವರಾಗಿದ್ದಾರೆ. ಘಟನೆಯಲ್ಲಿ ಸಿದ್ರಾಮಪ್ಪ, ಮುತ್ತಪ್ಪ, ಶರಣಪ್ಪ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 

ಹುಣಸಗಿ ತಾಲೂಕಿನ ನಾರಾಯಣಪುರದ ನಿವಾಸಿ ಶರಣಪ್ಪ ಹಾಗೂ ಪತ್ನಿ ಹುಲಿಗೆಮ್ಮ ಇಬ್ಬರು ಹಲವು ಪ್ರತಿದಿನ ಜಗಳವಾಡುತ್ತಿದ್ದರು. ಹುಲಿಗೆಮ್ಮ ತವರು ಮನೆಯವರೊಂದಿಗೆ ತನ್ನ ಸಂಕಟ ಹೇಳಿಕೊಳ್ಳುತ್ತಿದ್ದಳು.

ದಿನವೂ ಗಂಡನೊಂದಿಗೆ ಜಗಳವಾಡುತ್ತಿದ್ದರಿಂದ ಬೇಸತ್ತು ಹುಲಿಗಮ್ಮ 14 ತಿಂಗಳಿನಿಂದ ಬೇರೆಡೆ ಮನೆ ಮಾಡಿಕೊಂಡು ವಾಸವಾಗಿದ್ದರು. ಲಿಂಗಸೂರಿನ ಕೆ.ಎಸ್.ಆರ್.ಟಿ.ಸಿಯಲ್ಲಿ ಮೆಕ್ಯಾನಿಕಲ್ ಆಗಿ ಕೆಲಸ ಮಾಡಿಕೊಂಡಿದ್ದರು. ಡೈವೋರ್ಸ್ ಕೇಳಿದರೂ ಶರಣಪ್ಪ ನಿರಾಕರಿಸಿದ್ದನು. ಸಮಸ್ಯೆಯನ್ನು ಬಗೆಹರಿಸಲು ಹೆಂಡತಿ ತವರು ಮನೆಯವರಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಇಬ್ಬರು ಹಾಗೂ ಸರೂರಿನ ಸಿದ್ರಾಮಪ್ಪ, ಮುತ್ತಪ್ಪ ಅವರು ಶರಣಪ್ಪನಿಗೆ ಬುದ್ದಿ ಹೇಳಲು ಬಂದಿದ್ದರು.

ಇದನ್ನೂ ಓದಿ : BS Avinash car accident : ಕೆಜಿಎಫ್ ನಟ ಆ್ಯಂಡ್ರೂಸ್ ಕಾರು ಅಪಘಾತ!

ಮನೆಗೆ ಬಂದು ಬುದ್ದಿ ಮಾತು ಹೇಳಲು ಮುಂದಾದ ಕೂಡಲೇ ಬಾಗಿಲು ಹಾಕಿಕೊಂಡ ಶರಣಪ್ಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ನಾಗಪ್ಪ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಮೂವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News