Shivamogga: ನಿಷೇಧಿತ PFI ಅಂಗಸಂಸ್ಥೆ CFI ಸಂಘಟನೆ ಸೇರುವಂತೆ ಗೋಡೆ ಬರಹ ಪತ್ತೆ

Controversial Wall Writing: ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ನಿಷೇಧಿತ ಪಿಎಫ್‍ಐ ಅಂಗಸ್ಥೆಯಾಗಿರುವ ಸಿಎಫ್‍ಐ ಸಂಘಟನೆ ಸೇರುವಂತೆ ಗೋಡೆ ಬರಹ ಬರೆದಿದ್ದಾರೆ.

Written by - Puttaraj K Alur | Last Updated : Dec 4, 2022, 10:37 AM IST
  • ಮಂಗಳೂರು ಆಯ್ತು ಈಗ ಶಿವಮೊಗದಲ್ಲಿಯೂ ವಿವಾದಾತ್ಮಕ ಗೋಡೆ ಬರಹ ಪತ್ತೆ
  • ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮೆರೆದಿದ್ದು, JOIN CFI ಎಂದು ಗೋಡೆ ಬರಹ ಬರೆದಿದ್ದಾರೆ
  • ಶಿರಾಳಕೊಪ್ಪದ 9ಕ್ಕೂ ಹೆಚ್ಚು ಕಡೆ ವಿವಾದಾತ್ಮಕ ಗೋಡೆ ಬರಹವನ್ನು ಬರೆಯಲಾಗಿದೆ
Shivamogga: ನಿಷೇಧಿತ PFI ಅಂಗಸಂಸ್ಥೆ CFI ಸಂಘಟನೆ ಸೇರುವಂತೆ ಗೋಡೆ ಬರಹ ಪತ್ತೆ title=
ವಿವಾದಾತ್ಮಕ ಗೋಡೆ ಬರಹ ಪತ್ತೆ

ಶಿವಮೊಗ್ಗ: ಮಂಗಳೂರು ಬಳಿಕ ಇದೀಗ ಶಿವಮೊಗದಲ್ಲೂ ವಿವಾದಾತ್ಮಕ ಗೋಡೆ ಬರಹ ಪತ್ತೆಯಾಗಿದೆ. ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ನಿಷೇಧಿತ ಪಿಎಫ್‍ಐ ಅಂಗಸ್ಥೆಯಾಗಿರುವ ಸಿಎಫ್‍ಐ ಸಂಘಟನೆ ಸೇರುವಂತೆ ಗೋಡೆ ಬರಹ ಬರೆದಿದ್ದಾರೆ. ಪಟ್ಟಣದ 9ಕ್ಕೂ ಹೆಚ್ಚು ಕಡೆ JOIN CFI ಎಂದು ಗೋಡೆ ಬರಹ ಬರೆಯಲಾಗಿದೆ ನೀಲಿ ಮತ್ತು ಕೆಂಪು ಬಣ್ಣದಲ್ಲಿ ಬರೆದು ಸ್ಟಾರ್ ಇಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭಾರತದ ಮೊದಲ ವಿಶ್ವ ಯೋಗ ಸ್ಪರ್ಧೆ: ಸಿಎಂ ಬೊಮ್ಮಾಯಿ ಸಂತಸ

ಶಿವಮೊಗ್ಗದ ಹಳೇ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್ ಮೇಲೆ, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬದ ಮೇಲೆ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ವಿದ್ಯುತ್ ಕಂಬದ ಮೇಲೆ, ಚಂದ್ರಪ್ಪ ಎಂಬುವರ ಮನೆಯ ಕ್ರಾಸ್‍ನ ವಿದ್ಯುತ್ ಕಂಬದ ಮೇಲೆ, ಬಿಲಾಲ್ ಎಂಬುವರ ಮನೆಯ ಬಳಿ ಇರುವ ಗ್ಯಾರೇಜ್‍ನ ಗೋಡೆಯ ಮೇಲೆ, ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆಯ ಬಾಜುವಿನ ಗೋಡೆ ಮೇಲೆ, ಫಾರೂಕ್ ಮತ್ತು ಬಿಲಾಲ್ ಮನೆಯ ಗೋಡೆಗಳ ಮೇಲೆ ವಿವಾದಾತ್ಮಕ ಬರಹ ಬರೆಯಲಾಗಿದೆ.

ಇದನ್ನೂ ಓದಿ: ಡಾ.ಶಿವರಾಮ ಕಾರಂತ ಬಡಾವಣೆಗೆ ಜಮೀನು ನೀಡಿದ್ದ ರೈತರಿಗೆ ಗುಡ್ ನ್ಯೂಸ್..!

ನ.28ರಂದು ಪೊಲೀಸರು ಗಸ್ತು ತಿರುಗುವಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಸೋಮೊಟೊ ಪ್ರಕರಣ ದಾಖಲಾಗಿದೆ. ಸಿಎಫ್ಐ ಅಂದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯು ಪಿಎಫ್ಐನ ಅಂಗಸಂಸ್ಥೆಯಾಗಿದೆ.  ಪಿಎಫ್ಐ ಮತ್ತು ಸಿಎಫ್ಐ ನಿಷೇಧಿತ ಸಂಘಟನೆಗಳಾಗಿವೆ. ಸದ್ಯ ಈ ವಿವಾದಾತ್ಮಕ ಗೋಡೆ ಬರಹಗಳನ್ನು ಯಾರು ಬರೆದಿದ್ದಾರೆ ಅನ್ನೋದನ್ನು ಪತ್ತೆ ಹಚ್ಚಲು ಖಾಕಿ ಪಡೆ ತನಿಖೆ ಕೈಕೊಂಡಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News