ರಾಜಧಾನಿಯಲ್ಲಿ ನಿಲ್ಲದ ಪ್ಲಾಸ್ಟಿಕ್ ಹಾವಳಿ : ಬಳಕೆದಾರರಿಗೆ ಬಿತ್ತು 68 ಸಾವಿರ ದಂಡ

ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಯಶವಂತಪುರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಪೀಣ್ಯಾ ಇಂಡಸ್ಟಿçಯಲ್ ಏರಿಯಾ ಭಾಗದಲ್ಲಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ 500 ಕೆ.ಜಿ ನಿಷೇದಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದ್ದು, 34,000 ರೂ. ದಂಡ ವಿಧಿಸಿಲಾಗಿದೆ.

Written by - Manjunath Hosahalli | Edited by - Chetana Devarmani | Last Updated : Dec 3, 2022, 07:09 PM IST
  • ರಾಜಧಾನಿಯಲ್ಲಿ ನಿಲ್ಲದ ಪ್ಲಾಸ್ಟಿಕ್ ಹಾವಳಿ
  • ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಮೇಲೆ ದಾಳಿ
  • ಬಳಕೆದಾರರಿಗೆ ಬಿತ್ತು 68 ಸಾವಿರ ದಂಡ
ರಾಜಧಾನಿಯಲ್ಲಿ ನಿಲ್ಲದ ಪ್ಲಾಸ್ಟಿಕ್ ಹಾವಳಿ : ಬಳಕೆದಾರರಿಗೆ ಬಿತ್ತು 68 ಸಾವಿರ ದಂಡ
ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಮೇಲೆ ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅದ್ಯಾಕೋ ಏನೋ ಪ್ಲಾಸ್ಟಿಕ್ ಬಳಕೆಗೆ ಮುಕ್ತಿ ಸಿಗುವ ಲಕ್ಷಣವೇ ಕಾಣುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ್ ಬ್ಯಾನ್ ಎಂದ್ರೂ, ಬಳಸುವ ಜನ, ತಯಾರಿಸುವ ಕಂಪನಿಗಳು ಮಾತ್ರ ನಿಲ್ಲಿಸುತ್ತಿಲ್ಲ. ಈ ಕಾರಣದಿಂದಾಗಿ ಬಿಬಿಎಂಪಿ ಅಧಿಕಾರಿಗಳ ತಂಡ ನಿತ್ಯವೂ ಪ್ಲಾಸ್ಟಿಕ್ ಬಳಕೆದಾರರು ಮತ್ತು ತಯಾರಿಸುವ ಕಂಪನಿಗಳ ಮೇಲೆ ದಾಳಿ ಮಾಡ್ತಾನೆ ಇದ್ದಾರೆ.‌ ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ನಗರದ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಯಶವಂತಪುರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಪೀಣ್ಯಾ ಇಂಡಸ್ಟಿçಯಲ್ ಏರಿಯಾ ಭಾಗದಲ್ಲಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ 500 ಕೆ.ಜಿ ನಿಷೇದಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದ್ದು, 34,000 ರೂ. ದಂಡ ವಿಧಿಸಿಲಾಗಿದೆ.

ಮತ್ತೊಂದು ದಾಳಿ ಮಾಡಿದ್ದು, ರಾಜರಾಜೇಶ್ವರಿ ನಗರದ ಹೆಚ್.ಎಂ.ಟಿ ವಾರ್ಡ್ ವ್ಯಾಪ್ತಿಯ ಯಶವಂತಪುರ ಇಂಡಸ್ಟ್ರಿಯಲ್ ಏರಿಯಾ 5ನೇ ಮುಖ್ಯರಸ್ತೆಯಲ್ಲಿ ಬರುವ ಮಹಾವೀರ್ ಪಾಲಿ ಪ್ಯಾಕ್ ವೈಭವ ಪ್ರಿಂಟ್ ಪ್ಯಾಕ್ ಪ್ಲಾಸ್ಟಿಕ್ ತಯಾರಿಕಾ ಘಟಕಕ್ಕೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ನಿಗಧಿತ 50 ಮೈಕ್ರಾನ್ ಗಿಂತ ಕಡಿಮೆ ದಪ್ಪದ 350 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ಉತ್ಪಾದಕರಿಗೆ 20,000 ರೂ. ದಂಡ ವಿಧಿಸಲಾಯಿತು.

ಇದನ್ನೂ ಓದಿ : ಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ ಘೋಷಿಸಿದ ಸಿಎಂ

ನಂತರ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಮೊದಲನೇ ಹಂತ ಶೆಡ್ ಸಂ.211 ರಲ್ಲಿನ ಶ್ರೀರಾಮ್ ಪಾಲಿ ಪ್ಯಾಕ್ ಎಂಬ ಹೆಸರಿನಲ್ಲಿ ಪ್ಲಾಸ್ಟಿಕ್ ತಯಾರಿಕಾ ಘಟಕವು ಮುಂಬಾಗ ಬೀಗ ಹಾಕಿಕೊಂಡು ಪ್ಲಾಸ್ಟಿಕ್ ತಯಾರಿಕೆಯಲ್ಲಿ ತೊಡಗಿತ್ತು. ಸದರಿ ಘಟಕದ ಪಕ್ಕದಿಂದ ಒಳಗೆ ಹೋಗಿ ಪರಿಶೀಲಿಸಿದಾದ 50 ಮೈಕ್ರಾನ್ ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ತಯಾರಿಸುವುದನ್ನು ಗಮನಿಸಿ ಸುಮಾರು 150 ಕೆ.ಜಿ ನಿಷೇದಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು 14,000 ರೂ. ದಂಡ ವಿಧಿಸಲಾಯಿತು. ಎರಡೂ ಪ್ಲಾಸ್ಟಿಕ್ ತಯಾರಿಕಾ ಘಕಟಗಳಿಂದ ವಶಪಡಿಸಿಕೊಂಡ 500 ಕೆ.ಜಿ ನಿಷೇದಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ದೊಡ್ಡಬಿದಿರಕಲ್ಲು ಸಂಸ್ಕರಣ ಘಟಕಕ್ಕೆ ಕಳಿಸಲಾಯಿತು. ಜೊತೆಗೆ 50 ಮೈಕ್ರಾನ್ ಗಿಂದ ಕಡಿಮೆಯಿರುಚವವ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸದಂತೆ ಮಾಲೀಕರಿಗೆ ಸೂಚನೆ ನೀಡಲಾಯಿತು. 

ಬಿಬಿಎಂಪಿ ಅಧಿಕಾರಿಗಳಿಂದ ಪದೆ ಪದೇ ಜಾಗೃತಿ ವಿಫಲ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಮಾರಾಟ ಮಳಿಗೆಗಳು, ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಜೊತೆಗೆ ದಂಡ ವಿಧಿಸಲಾಗುತ್ತಿದೆ. ನಗರದಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಪೂರ್ಣವಾಗಿ ನಿಲ್ಲಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರದ ಅಧಿಸೂಚನೆ ಹಾಗೂ ಕೇಂದ್ರ ಸರ್ಕಾರದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮ 2021 ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. 

ಇದನ್ನೂ ಓದಿ : ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ: ಸಚಿವ ಮುರುಗೇಶ್ ನಿರಾಣಿ

ವಲಯಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ರಾಗಿ ಘನತ್ಯಾಜ್ಯ ವಿಭಾಗದ ಕಿರಿಯ ಆರೊಗ್ಯ ಪರಿವೀಕ್ಷಕರು ವಾರ್ಡ್ ಮಾರ್ಷಲ್ ರವರನ್ನು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದು, ಅದರಂತೆ ಪಾಲಿಕೆಯ ಘನತ್ಯಾಜ್ಯ ವಿಭಾಗದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್‌ಗಳ ಮೇಲ್ವಿಚಾರಕರು ಹಾಗೂ ಮಾರ್ಷಲ್‌ಗಳ ತಂಡ ಹೋಟೆಲ್ ಉದ್ದಿಮೆ, ಪ್ಲಾಸ್ಟಿಕ್ ಉತ್ಪಾದಿಸುವ ಉದ್ದಿಮೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಜಪ್ತಿ ಮಾಡುವುದರ ಜೊತೆಗೆ ದಂಡ ವಿಧಿಸುತ್ತಿವೆ. ಅಲ್ಲದೆ ಮತ್ತೊಮ್ಮೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಯಾರು ಮಾಡದಂತೆ ವ್ಯಾಪಾರಸ್ಥರು/ಮಾರಾಟಗಾರರು/ತಯಾರಕರು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News